ಮೃತ ಯುವಕ ಕಿರಣ್. 
ರಾಜ್ಯ

ಒಟ್ಟಿಗೆ ಬದುಕುವ ಅದೃಷ್ಟವಿಲ್ಲ, ಆದರೆ, ನನ್ನ ಅಂತ್ಯಕ್ರಿಯೆಗೆ ಬರಲೇಬೇಕು: ಪ್ರಿಯತಮೆ ಆಹ್ವಾನಿಸಿ ಲೈವಲ್ಲೇ ಪ್ರಾಣಬಿಟ್ಟ ರೇಬಿಸ್‌ ಪೀಡಿತ ಯುವಕ!

ರೇಬಿಸ್‌ ಕಾಯಿಲೆಯಿಂದ ಬಳಲುತ್ತಿದ್ದ ಯುವಕನೊಬ್ಬ ಪ್ರಿಯತಮೆಗೆ ವಿಡಿಯೋ ಮಾಡಿ, ತನ್ನ ಅಂತ್ಯಕ್ರಿಯೆಗೆ ಆಹ್ವಾನಿಸಿ, ಲೈವ್‌ನಲ್ಲೇ ಪ್ರಾಣ ಬಿಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್‌ಪೇಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬೆಂಗಳೂರು: ರೇಬಿಸ್‌ ಕಾಯಿಲೆಯಿಂದ ಬಳಲುತ್ತಿದ್ದ ಯುವಕನೊಬ್ಬ ಪ್ರಿಯತಮೆಗೆ ವಿಡಿಯೋ ಮಾಡಿ, ತನ್ನ ಅಂತ್ಯಕ್ರಿಯೆಗೆ ಆಹ್ವಾನಿಸಿ, ಲೈವ್‌ನಲ್ಲೇ ಪ್ರಾಣ ಬಿಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್‌ಪೇಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸೋಂಪುರ ಹೋಬಳಿಯ ದಾಸೇನಹಳ್ಳಿ ಗ್ರಾಮದ ಕಿರಣ್‌ (22) ಮೃತ ಯುವಕ. ಈತನಿಗೆ ಎರಡು ತಿಂಗಳ ಹಿಂದೆ ನಾಯಿ ಕಚ್ಚಿದ್ದು ಅದಕ್ಕೆ ಚಿಕಿತ್ಸೆ ಪಡೆದಿರಲಿಲ್ಲ.

ಕೊನೆಗೆ ನಿಮ್ಹಾನ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೂ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲೇ ಕೊನೆಯುಸಿರು ಎಳೆದಿದ್ದಾನೆ. ಈತನ್ಮಧ್ಯೆ ಸಾವು ಸಮೀಪಿಸುತ್ತಿದೆ ಎಂದು ತಿಳಿಸಿದ ಯುವಕ, ಪ್ರಿಯತಮೆಗಾಗಿ ವಿಡಿಯೋ ಮಾಡಿದ್ದಾನೆ.

ನಾನಿನ್ನು ಹೆಚ್ಚು ದಿನಗಳು ಬದುಕುವುದಿಲ್ಲ. ನಿನ್ನನ್ನು ಮದುವೆಯಾಗಿ ಒಟ್ಟಿಗೆ ಕೊನೆವರೆಗೂ ಇರುವ ಅದೃಷ್ಟ ನನಗಿಲ್ಲ. ನಿಮ್ಮನ್ನೆಲ್ಲ ಬಿಟ್ಟು ಹೋಗುತ್ತಿದ್ದೇನೆ. ನಿಮ್ಮ ಅಪ್ಪ ಹೇಳಿದ ಹಾಗೆ ಒಳ್ಳೆಯ ಹುಡುಗನನ್ನು ನೋಡಿ ಮದುವೆ ಆಗು. ನಿನಗೆ ಹುಟ್ಟಿದ ಮಗುವಿಗೆ ನನ್ನ ಹೆಸರೇ ಇಡಬೇಕು, ಇದು ನನ್ನ ಆಕಸ್ಮಿಕ ಸಾವು. ದಯವಿಟ್ಟು ಅಂತ್ಯಕ್ರಿಯೆಗೆ ಬಂದು ಹೋಗಬೇಕು, ಯುಮನಾ ಹಾಗೂ ನಿನ್ನ ತಾಯಿಯನ್ನು ಕರೆದುಕೊಂಡು ಬಾ...ಒಳ್ಳೆಯದಾಗಲಿ ನಿಮ್ಮ ಕುಟುಂಬಕ್ಕೆ. ಚೆನ್ನಾಗಿರಿ’ ಎಂದು ಕೈ ಮುಗಿದು ಪ್ರಾಣಬಿಟ್ಟಿದ್ದಾನೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್