ರಾಜ್ಯ

ಕಾವೇರಿ ನೀರಿಗಾಗಿ ತಮಿಳುನಾಡು ಸುಪ್ರೀಂ ಕೋರ್ಟ್ ಗೆ ಮೊರೆ; ರಾಜ್ಯದಲ್ಲಿ ಸಾಕಷ್ಟು ನೀರಿಲ್ಲ, ಆದರೂ 10 ಟಿಎಂಸಿ ನೀರು ಬಿಡುಗಡೆ: ಡಿಕೆ ಶಿವಕುಮಾರ್

Srinivasamurthy VN

ಬೆಂಗಳೂರು: ರಾಜ್ಯದಲ್ಲಿ ಸಾಕಷ್ಟು ನೀರಿಲ್ಲ, ಆದರೂ 10 ಟಿಎಂಸಿ ನೀರು ಬಿಡುಗಡೆ ಮಾಡುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಕರ್ನಾಟಕದಿಂದ ಕಾವೇರಿ ನೀರು ತಕ್ಷಣವೇ ಬಿಡುಗಡೆ ಮಾಡುವಂತೆ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, "ನನಗೆ ಇದು ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ಆದರೂ ನಾವು ಪಾಲಿಸುತ್ತೇವೆ ... ನಮ್ಮಲ್ಲೇ ಸಾಕಷ್ಟು ನೀರಿಲ್ಲ.. ಆದರೆ ನಾವು ತಮಿಳುನಾಡಿಗೆ 10 ಟಿಎಂಸಿ ನೀರು ಬಿಡುಗಡೆ ಮಾಡಲಿದ್ದೇವೆ. ನಾವು ಈಗಾಗಲೇ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಬಳಿಕ ಮಾತನಾಡಿದ ಅವರು, ಇಂಡಿಯಾ ಮೈತ್ರಿಕೂಟದ ಕುರಿತು ಮಾತನಾಡಿದರು. 'ಭಾರತದ ಬೆಳವಣಿಗೆಗೆ, ಭಾರತದ ಶಾಂತಿಗಾಗಿ ಇಂಡಿಯಾ ಮೈತ್ರಿಕೂಟ ಒಂದು ದೊಡ್ಡ ಪ್ರಯಾಣವಾಗಿದೆ ಎಂದು ನಾನು ಭಾವಿಸುತ್ತೇನೆ. ನಾವು ಭಾರತವನ್ನು ರಕ್ಷಿಸುವ ಹಾದಿಯಲ್ಲಿದ್ದೇವೆ. ನಾವೆಲ್ಲರೂ ಒಟ್ಟಿಗೆ ಸೇರೋಣ. ಭಾರತವನ್ನು ಉಳಿಸಲು ಇಡೀ ದೇಶವು ಒಗ್ಗೂಡಬೇಕೆಂದು ನಾನು ಬಯಸುತ್ತೇನೆ ಎಂದು ಹೇಳಿದರು.
 

SCROLL FOR NEXT