ದೇವರಾಜ ಅರಸು ಅವರ ಜನ್ಮ ದಿನಾಚರಣೆ ಪ್ರಯುಕ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅರಸು ಅವರ ಕಾರಿನಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣಕ್ಕೆ ತೆರಳಿ ಸದ್ಭಾವನಾ ದಿನಾಚರಣೆಯ ಪ್ರತಿಜ್ಞೆ ಬೋಧಿಸಿದರು. 
ರಾಜ್ಯ

ದೇವರಾಜ ಅರಸು ಬಡವರು, ಸಾಮಾಜಿಕ ನ್ಯಾಯದ ಪರವಾಗಿ ಇದ್ದರು: ಸಿಎಂ ಸಿದ್ದರಾಮಯ್ಯ

ಇಂದು ಆಗಸ್ಟ್ 20ರಂದು ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು ಅವರ 108 ಜನ್ಮದಿನ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ವಿಧಾನಸೌಧದ ದೇವರಾಜು ಅರಸು ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. 

ಬೆಂಗಳೂರು: ಇಂದು ಆಗಸ್ಟ್ 20ರಂದು ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು ಅವರ 108 ಜನ್ಮದಿನ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ವಿಧಾನಸೌಧದ ದೇವರಾಜು ಅರಸು ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. 

ಬಳಿಕ ದೇವರಾಜು ಅರಸು ಅವರು ಬಳಸುತ್ತಿದ್ದ ಬೆಂಜ್ ಕಾರಿನಲ್ಲಿ ವಿಧಾನಸೌಧದ ಆವರಣದಲ್ಲಿ ರೌಂಡ್ಸ್ ಹಾಕಿದರು. ದೇವರಾಜ ಅರಸು ಅವರನ್ನು ಸಾಮಾಜಿಕ ನ್ಯಾಯದ ಹರಿಕಾರ ಎಂದು ಕರೆಯುತ್ತೇವೆ. ದೇವರಾಜ ಅರಸು ಕರ್ನಾಟಕದ ಅಪರೂಪದ ರಾಜಕಾರಣಿ. ಅರಸು ಬಡವರು, ಸಾಮಾಜಿಕ ನ್ಯಾಯದ ಪರವಾಗಿ ಇದ್ದರು. ಅರಸು ಅವರು ಅಧಿಕಾರಕ್ಕೆ ಬರುವವರೆಗು ಹಿಂದುಳಿದ ವರ್ಗದವರಿಗೆ ಮೀಸಲಾತಿ ಇರಲಿಲ್ಲ. ಹಾವನೂರು ಆಯೋಗ ವರದಿ ತರಿಸಿ ಮೀಸಲಾತಿ ಜಾರಿ‌ ಮಾಡಿದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಇದಕ್ಕೂ ಮುನ್ನ ಇಂದು ಬೆಳಗ್ಗೆ ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಸಭಾಂಗಣದಲ್ಲಿ ರಾಜೀವ್ ಗಾಂಧಿ ಹಾಗೂ ದೇವರಾಜ ಅರಸು ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ,  ದೇವರಾಜ ಅರಸು 1972 ರಿಂದ 1980 ರವರೆಗೆ ಮುಖ್ಯಮಂತ್ರಿಯಾಗಿದ್ದರು. ಹುಣಸೂರು ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಸಾಮಾಜಿಕ ನ್ಯಾಯದ ಪರವಾಗಿ ಇದ್ದವರು. ಬಡವರ ಪರವಾಗಿ ಇದ್ದವರು. ಅಧಿಕಾರದಲ್ಲಿದ್ದಾಗಿ ನ್ಯಾಯ ಕೊಡಿಸಲು ಪ್ರಯತ್ನ ಮಾಡಿದರು. ಮಲ ಹೊರುವ ಪದ್ದತಿ ನಿಲ್ಲಿಸುವ ಮೂಲಕ ಜೀತಪದ್ದತಿಗೆ ಮಂಗಳ ಹಾಡಿದರು. ಅದಕ್ಕಾಗಿ ನಾವು ಅವರನ್ನು ಸಾಮಾಜಿಕ ನ್ಯಾಯ ಹರಿಕಾರ ಅಂತ ಕರೆಯುತ್ತೇವೆ ಎಂದು ತಿಳಿಸಿದರು.

ದೇವರಾಜ ಅರಸು ಸಿಎಂ ಆಗಿದ್ದಾಗ ಹಾವನೂರು ಆಯೋಗ ರಚನೆ ಮಾಡಿದರು. ಉಳುವವನೇ ಭೂ ಒಡೆಯ ಎಂಬ ಯೋಜನೆ ತಂದರು. ಇಂದಿರಾಗಾಂಧಿ ಅವರ ಬೆಂಬಲ ಜೊತೆಗೆ ಮಾಡಿದ್ದರು. ವಿಧಾನಸೌಧದ ಮೆಟ್ಟಿಲು ಹತ್ತದವರನ್ನು ವಿಧಾನಸೌಧಕ್ಕೆ ಬರುವ ಹಾಗೆ ಮಾಡಿದರು. ಅರಸು ಬರುವವರೆಗೆ ಹಿಂದುಳಿದ ವರ್ಗದವರಿಗೆ ಮೀಸಲಾತಿ ಇರಲಿಲ್ಲ. ಹಾವನೂರು ಆಯೋಗ ಮಾಡಿ, ವರದಿ ತರಿಸಿ ಮೀಸಲಾತಿ ಜಾರಿ‌ ಮಾಡಿದರು. ಕೇಂದ್ರದಲ್ಲಿ ಒಬಿಸಿಗೆ ಮೀಸಲಾತಿ ಇರಲಿಲ್ಲ. ಕರ್ನಾಟಕದಲ್ಲಿ ಕೊಟ್ಟ ಮೇಲೆ ಮಂಡಲ್ ಕಮಿಷನ್ ಜಾರಿ ಮಾಡಲು ಅನುಕೂಲ ಆಯಿತು. 1972ರಲ್ಲಿ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿತ್ತು. ಖಾಯಂ ಹಿಂದುಳಿದ ವರ್ಗಗಳ ಆಯೋಗ ರಚನೆ ಆಯಿತು. ಇದಕ್ಕೆ ದೇವರಾಜ್ ಅರಸು ಪ್ರಾಮಾಣಿಕ ಪ್ರಯತ್ನ ಮಾಡಿದರು ಎಂದರು.

ರಾಜೀವ್ ಗಾಂಧಿ ಜನ್ಮ ಜಯಂತಿ: ಕಾಂಗ್ರೆಸ್‌ ಪಕ್ಷ ರಾಜೀವ್ ಗಾಂಧಿ ಜನ್ಮದಿನವನ್ನು ದೇಶಾದ್ಯಂತ ಆಚರಿಸುತ್ತಿದೆ. ನಮ್ಮ ರಾಜ್ಯದಲ್ಲೂ ಆಚರಣೆ ಮಾಡುತ್ತಿದ್ದೇವೆ. ರಾಜೀವ್ ಗಾಂಧಿ ಅವರು ರಾಜಕಾರಣಿ ಆಗಬೇಕೆಂದು ರಾಜಕಾರಣಿ ಆದವರಲ್ಲ. ಇಂಧಿರಾ ಗಾಂಧಿ ಅವರು ಆಕಸ್ಮಿಕವಾಗಿ ಮೃತಪಟ್ಟ ಹಿನ್ನಲೆಯಲ್ಲಿ ಅನಿವಾರ್ಯವಾಗಿ ರಾಜೀವ್ ಗಾಂಧಿ ಅವರು ಪ್ರಧಾನಿ ಆದರು ಎಂದು ಹೇಳಿದರು.

ದೂರದೃಷ್ಟಿ ಇಟ್ಟುಕೊಂಡು 21ನೇ ಶತಮಾನಕ್ಕೆ ಕಾಲಿಡುವುದಕ್ಕೆ ಸಿದ್ಧತೆಯನ್ನು ಪ್ರಮಾಣಿಕವಾಗಿ ಪ್ರಯತ್ನ ಮಾಡಿದರು. ಯುವಶಕ್ತಿ ಮೇಲೆ ಬಹಳಷ್ಟು ನಂಬಿಕೆ ಇಟ್ಟವರು. ದೇಶದ ಚುನಾವಣೆಯಲ್ಲಿ ಯುವಕರು ಭಾಗವಹಿಸಬೇಕು ಎಂದು 18 ವಯಸ್ಸಿನವರಿಗೆ ಮತದಾನಕ್ಕೆ ಅವಕಾಶ ಕೊಟ್ಟರು. ಲೋಕಸಭೆ ಚುನಾವಣೆಯಲ್ಲಿಯು ಯುವಕರು ಭಾಗಿವಹಿಸುವಂತೆ ಮಾಡಿದರು. ರಾಜೀವ್ ಗಾಂಧಿವರಿಗೆ ಪ್ರಜಾಪ್ರಭುತ್ವದಲ್ಲಿ ಅಪಾರ ನಂಬಿಕೆ ಇತ್ತು. ಸಮಾಜದ ಎಲ್ಲಾ ವರ್ಗದವರು ಎಲ್ಲದರಲ್ಲೂ ಭಾಗಿ ಆಗಬೇಕು ಎಂದವರು. ಈ ಹಿನ್ನಲೆ ಸಂವಿಧಾನ 73-74 ತಿದ್ದುಪಡಿ ಮಾಡಿ ಮಹಿಳೆಯರಿಗೆ ಸ್ಥಳೀಯ ಮಟ್ಟದ ಚುನಾವಣೆಗಳಲ್ಲಿ ಪ್ರಾತಿನಿಧ್ಯ ಇರಲಿ ಎಂದು ಮೀಸಲಾತಿ ಕಲ್ಪಿಸಿದರು ಎಂದು ತಿಳಿಸಿದ್ದಾರೆ.

ಮಹಿಳೆಯರಿಗೆ ಶೇ 33 ರಷ್ಟು ಹಿಂದುಳಿದವರಿಗೆ ಶೇ 33 ರಷ್ಟು ಮೀಸಲಾತಿ ಕಲ್ಪಿಸಿದರು. ಮಾಡಿದರು. ಗ್ರಾಮ ಪಂಚಾಯತ್ ಚುನಾವಣೆಗಳಲ್ಲಿ ಶೇ 50 ರಷ್ಟು ಮಹಿಳೆಯರಿಗೆ ಅವಕಾಶ ಸಿಕ್ಕಿದೆ ಅಂದರೇ ಅದಕ್ಕೆ ರಾಜೀವ್ ಗಾಂಧಿ ಕಾರಣ . ಬಿಜೆಪಿ ಆಗಲಿ ಯಾವುದೇ ಪಕ್ಷದವರು ಇದನ್ನ ಜಾರಿಗೆ ತರಲಿಲ್ಲ ಎಂದು ಟೀಕಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

SCROLL FOR NEXT