ರಾಜ್ಯ

'ಕಾವೇರಿ' ಖ್ಯಾತೆ: ವಿಧಾನಸೌಧದಲ್ಲಿ ಸರ್ವಪಕ್ಷ ಸಭೆ ಪ್ರಗತಿಯಲ್ಲಿ: ಸಿಎಂ, ಡಿಸಿಎಂ ಸೇರಿ ಮಾಜಿ ಮುಖ್ಯಮಂತ್ರಿಗಳು, ನಾಯಕರು ಭಾಗಿ

Sumana Upadhyaya

ಬೆಂಗಳೂರು: ತಮಿಳು ನಾಡಿಗೆ ಕಾವೇರಿ ನೀರು ಹಂಚಿಕೆ ಮಾಡುವ ಸಂಬಂಧ ಚರ್ಚಿಸಿ ಒಂದು ಸರ್ವಸಮ್ಮತ ನಿರ್ಧಾರಕ್ಕೆ ಬರಲು ಸರ್ಕಾರ ಕರೆದಿರುವ ಸರ್ವಪಕ್ಷ ಸಭೆ ವಿಧಾನ ಸೌಧದಲ್ಲಿ ಆರಂಭವಾಗಿದೆ.

ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ, ಹೆಚ್ ಡಿ ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ ಸೇರಿದಂತೆ ಬಿಜೆಪಿ, ಕಾಂಗ್ರೆಸ್ ಸಂಸದರು, ಶಾಸಕರು ಸೇರಿ ಹಲವು ಮುಖಂಡರು ಭಾಗಿಯಾಗಿದ್ದರು.

ಮಳೆ ಕೊರತೆ ಇದ್ದರೂ ತನಗೆ ಬಾಕಿ ಇರುವ ನೀರನ್ನು ಬಿಡಬೇಕೆಂದು ಕೋರಿ ತಮಿಳು ನಾಡು ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿರುವ ಕಾರಣ ರಾಜ್ಯ ಕಾಂಗ್ರೆಸ್ ಸರ್ಕಾರ ನಾಡಿನ ರೈತರು ಮತ್ತು ತಮಿಳು ನಾಡಿಗೆ ಬಿಡಬೇಕಾದ ನೀರಿನ ಬಗ್ಗೆ ಚರ್ಚೆ ನಡೆಸಲು ಸರ್ವ ಪಕ್ಷಗಳ ಸಭೆ ಕರೆದಿದೆ.

ಸಭೆಗೆ ಆಗಮಿಸಿದ ಮಾಜಿ ಸಿಎಂ ಕುಮಾರಸ್ವಾಮಿ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿ, ಸರಕಾರಕ್ಕೆ ಸಲಹೆ ನೀಡುವುದು ಎರಡೇ ವಿಚಾರ, ರಾಜ್ಯ ಸರ್ಕಾರ, ತಮಿಳುನಾಡುನೊಂದಿಗೆ ಏನೇನು ಮಾತಾಡಿಕೊಂಡಿದೆಯೋ ಯಾರಿಗೆ ಗೊತ್ತು ಎಂದರು. 

ಕಳೆದ 3-4 ವರ್ಷಗಳಲ್ಲಿ ಉತ್ತಮ ಮಳೆಯಾಗಿದ್ದರಿಂದ ಯಾವುದೇ ಸಮಸ್ಯೆ ಇರಲಿಲ್ಲ, ಎಲ್ಲರೂ ಮೂಲ ಸಮಸ್ಯೆಯನ್ನು ಮರೆತು ಕೂತಿದ್ದರು. ಈ ವರ್ಷ ಮಳೆ ಕಡಿಮೆಯಾಗಿದೆ ಮತ್ತು ಜಲಾಶಯಗಳಲ್ಲಿ ನೀರಿಲ್ಲ ಹಾಗಾಗಿ ಸಂಕಷ್ಟ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಕುಮಾರಸ್ವಾಮಿ ಹೇಳಿದರು. 

ಚುನಾವಣಾ ಸಮಯದಲ್ಲಿ ಜನತಾ ಜಲಧಾರೆ (Janata Jaladhare) ಅಭಿಯಾನ ನಡೆಸಿದ ಬಗ್ಗೆ ಪತ್ರಕರ್ತರೊಬ್ಬರು ಜ್ಞಾಪಿಸಿದಾಗ ಕುಮಾರ ಸ್ವಾಮಿ; ಆ ಯೋಜನೆಯನ್ನು ಜನರೇ ತಿರಸ್ಕರಿರುವಾಗ ಸರ್ಕಾರಕ್ಕೇನು ಅದನ್ನು ಕುರಿತು ಹೇಳುವುದು ಎಂದರು. ಅಸಲಿಗೆ ಸರ್ವಪಕ್ಷ ಸಭೆ ನಡೆಸಿ ಅಂತ ವಿರೋಧ ಪಕ್ಷದ ನಾಯಕರು ದುಂಬಾಲು ಬಿದ್ದ ಕಾರಣ ಸರ್ಕಾರ ಸಬೆ ಕರೆದಿದೆ ಎಂದು ಕುಮಾರಸ್ವಾಮಿ ಹೇಳಿದರು.

SCROLL FOR NEXT