ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಬೆಂಗಳೂರು: ಲಿವಿಂಗ್-ಇನ್-ಪಾರ್ಟ್ನರ್ ಗೆಳತಿ ತಲೆಗೆ ಕುಕ್ಕರ್ ನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ ಪ್ರೇಮಿ!

ಲಿವಿಂಗ್-ಇನ್-ಪಾರ್ಟ್ನರ್ ಗೆಳತಿಯ ತಲೆಗೆ ಕುಕ್ಕರ್ ನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಬೇಗೂರಿನ ನ್ಯೂ ಮೈಕೋ ಲೇಔಟ್‌ನಲ್ಲಿ ತಡರಾತ್ರಿ ನಡೆದಿದೆ.

ದೇವಾ-ವೈಷ್ಣವ್
Vishwanath S
Updated On : 28 Aug 2023, 3:29 pm

ಬೆಂಗಳೂರು: ಲಿವಿಂಗ್-ಇನ್-ಪಾರ್ಟ್ನರ್ ಗೆಳತಿಯ ತಲೆಗೆ ಕುಕ್ಕರ್ ನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಬೇಗೂರಿನ ನ್ಯೂ ಮೈಕೋ ಲೇಔಟ್‌ನಲ್ಲಿ ತಡರಾತ್ರಿ ನಡೆದಿದೆ.

ಮೃತ ಯುವತಿಯನ್ನು 24 ವರ್ಷದ ದೇವಾ ಎಂದು ಗುರುತಿಸಲಾಗಿದೆ. ಇನ್ನು ಹತ್ಯೆಗೈದ ಯುವಕನನ್ನು 24 ವರ್ಷದ ವೈಷ್ಣವ್ ಎಂದು ತಿಳಿದುಬಂದಿದೆ. ಸದ್ಯ ಆರೋಪಿ ವೈಷ್ಣವ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಕೇರಳ ಮೂಲದ ದೇವಾ, ವೈಷ್ಣವ್‌ ಕಾಲೇಜು ದಿನಗಳಿಂದ ಒಟ್ಟಿಗೆ ವಿದ್ಯಾಭ್ಯಾಸ ‌ಮಾಡಿದ್ದರು. ಕಳೆದ ಮೂರು ವರ್ಷಗಳ ಹಿಂದೆ ಇಬ್ಬರು ಬೆಂಗಳೂರಿಗೆ ಬಂದು ಸಹಜೀವನ ನಡೆಸುತ್ತಿದ್ದರು.

Advertisement

Advertisement

ಇದನ್ನೂ ಓದಿ: ಮೈಸೂರಿನಲ್ಲಿ ತಂದೆ-ತಾಯಿ ಸೇರಿ ಒಂದೇ ಕುಟುಂಬದ ನಾಲ್ವರ ಮೃತದೇಹ ಪತ್ತೆ!

ಕಳೆದ ರಾತ್ರಿ ಇಬ್ಬರ ನಡುವೆ ಗಲಾಟೆ ಶುರುವಾಗಿದ್ದು, ವೈಷ್ಣವ್‌ ಆಕ್ರೋಶಗೊಂಡು ಕುಕ್ಕರ್ ನಿಂದ ದೇವಾ ತಲೆಗೆ ಹೊಡೆದಿದ್ದಾನೆ. ಈ ವೇಳೆ ಗಂಭೀರ ಗಾಯಗೊಂಡಿದ್ದ ದೇವಾ ರಕ್ತಸ್ರಾವವಾಗಿ ಮೃತಪಟ್ಟಿದ್ದಾಳೆ. ಸದ್ಯ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬೇಗೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement