ಸಂಗ್ರಹ ಚಿತ್ರ 
ರಾಜ್ಯ

ಬೆಂಗಳೂರಿನ ಮೂರು ಕಡೆ ಸೇರಿ ರಾಜ್ಯದ 63 ಕಡೆ ಲೋಕಾಯುಕ್ತ ದಾಳಿ: 25 ಲಕ್ಷ ರೂ. ಮೌಲ್ಯದ ವಜ್ರ, 3 ಕೆಜಿ ಚಿನ್ನ, ನಗದು ಹಣ ವಶ

ಮಂಗಳವಾರ ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್ ನೀಡಿದೆ. ಬೆಂಗಳೂರಿನ ಮೂರು ಕಡೆ ಸೇರಿ ರಾಜ್ಯದ 63ಕ್ಕೂ ಹೆಚ್ಚು ಕಡೆ ಏಕಕಾಲದಲ್ಲಿ ಲೋಕಾಯುಕ್ತ ದಾಳಿ ಮಾಡಿ ಶೋಧ ಕಾರ್ಯಾಚರಣೆ ಕೈಗೊಂಡಿದೆ.

ಬೆಂಗಳೂರು: ಮಂಗಳವಾರ ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್ ನೀಡಿದೆ. ಬೆಂಗಳೂರಿನ ಮೂರು ಕಡೆ ಸೇರಿ ರಾಜ್ಯದ 63ಕ್ಕೂ ಹೆಚ್ಚು ಕಡೆ ಏಕಕಾಲದಲ್ಲಿ ಲೋಕಾಯುಕ್ತ ದಾಳಿ ಮಾಡಿ ಶೋಧ ಕಾರ್ಯಾಚರಣೆ ಕೈಗೊಂಡಿದೆ.

ಸುಮಾರು 200ಕ್ಕೂ ಹೆಚ್ಚು ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳ ಕಚೇರಿ ಹಾಗೂ ಮನೆಗಳ ಮೇಲೆ ದಾಳಿ ನಡೆಸಿದ್ದು, ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

ಬೆಂಗಳೂರಿನಲ್ಲಿ ಮೂರು ಕಡೆ, ಕಲಬುರಗಿ, ಬೀದರ್ ನಲ್ಲಿ ತಲಾ 2 ಕಡೆ ಹಾಗೂ ಬಳ್ಳಾರಿ, ಕೊಪ್ಪಳ, ಚಿಕ್ಕಬಳ್ಳಾಪುರ, ಮೈಸೂರು, ಕೋಲಾರ, ಧಾರವಾಡದಲ್ಲಿ ಲೋಕಾಯುಕ್ತ ದಾಳಿ ನಡೆಸಿದೆ ಎಂದು ವರದಿಗಳಿಂದ ತಿಳಿದುಬಂದಿದೆ.

ಲೋಕಾಯುಕ್ತ ದಾಳಿಗೆ ಒಳಗಾದ ಅಧಿಕಾರಿಗಳ ಇಂತಿದೆ...

  • ಹೆಚ್ಎಸ್ ಕೃಷ್ಣಮೂರ್ತಿ, ಚೀಪ್ ಎಕ್ಸಿಕ್ಯುಟಿವ್, ಕಣಿಮಿನಿಕೆ ಹಾಲು ಉತ್ಪಾದಕ ಕೋ ಆಪರೇಟಿವ್ ಸೊಸೈಟಿ, ಕುಂಬಳಗೋಡು.: ಇವರಿಗೆ ಸೇರಿದ ಐದು ಕಡೆ ದಾಳಿ ನಡೆದಿದೆ.
  • ಟಿ.ಎನ್ ಸುಧಾಕರ್ ರೆಡ್ಡಿ, ಡಿಜಿಎಂ ವಿಜಿಲೇನ್ಸ್ ಇಇ ಬೆಸ್ಕಾಂ: ಐದು ಸ್ಥಳದಲ್ಲಿ ದಾಳಿ
  • ಬಿ.ಮಾರುತಿ, ಆರ್​​​ಎಫ್​​ಓ, ಆನೆಗುಂದಿ ಕೊಪ್ಪಳ.
  • ಚಂದ್ರಶೇಖರ್, ಹಿರಿಯ ಭೂವಿಜ್ಞಾನಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಬಳ್ಳಾರಿ.
  • ಶರಣಪ್ಪ, ಆಯುಕ್ತರು, ನಗರ ಪಾಲಿಕೆ ಯಾದಗಿರಿ.
  • ಹೆಚ್​​ಡಿ ನಾರಾಯಣ ಸ್ವಾಮಿ, ನಿವೃತ್ತ ವೈಸ್ ಚಾನ್ಸಲರ್, ಪಶು ಮತ್ತು ಮೀನುಗಾರಿಕೆ ವಿಶ್ವವಿದ್ಯಾಲಯ, ಬೀದರ್‌
  • ಸುನೀಲ್ ಕುಮಾರ್, ಸಹಾಯಕ (ಔಟ್ ಸೋರ್ಸ್), ಹಣಕಾಸು ಕಚೇರಿಯ ನಿಯಂತ್ರಕರು, ಪಶು ಮತ್ತು ಮೀನುಗಾರಿಕೆ ವಿಶ್ವವಿದ್ಯಾಲಯ, ಬೀದರ್.
  • ಡಾ.ಪ್ರಭುಲಿಂಗ, ಡಿಹೆಚ್ಒ ಯಾದಗಿರಿ
  • ಮಹದೇವಸ್ವಾಮಿ, ಉಪನ್ಯಾಸಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ನಂಜನಗೂಡು, ಮೈಸೂರು.
  • ತಿಮ್ಮರಾಜಪ್ಪ, ಎಕ್ಸಿಕ್ಯೂಟಿವ್ ಇಂಜಿನಿಯರ್, ಕೆಆರ್‌ಐಡಿಎಲ್, ವಿಜಯಪುರ ಜಿಲ್ಲೆ.  (ಪ್ರಸ್ತುತ ಬೆಳಗಾವಿಯಲ್ಲಿ ಇಇ) ಕ್ಯಾಸಂಬಳ್ಳಿ ಹೋಬಳಿ, ಮಹದೇವಪುರ ಗ್ರಾಮ.  ಕೆಜಿಎಫ್, ಕೋಲಾರ
  • ಮುನೇಗೌಡ ಎನ್, ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ, ರಾಮನಗರ
  • ಬಸವರಾಜ, ಸ್ಟೋರ್ ಕೀಪರ್, ಗ್ರೇಡ್-2, ಓ & ಎಂ ಸಿಟಿ ವಿಭಾಗ ಅಂಗಡಿ, ಹೆಸ್ಕಾಂ, ಹುಬ್ಬಳ್ಳಿ, (ನಿವೃತ್ತ)
  • ಚನ್ನಕೇಶವ, ಇಇ ಬೆಸ್ಕಾಂ, ಅಮೃತಹಳ್ಳಿ, ಜಕ್ಕೂರು.

ಚಿನ್ನ, ವಜ್ರ, ನಗದು ಪತ್ತೆ
ಜಕ್ಕೂರಿನಲ್ಲಿರುವ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಕಾರ್ಯನಿರ್ವಾಹಕ ಎಂಜಿನಿಯರ್ ಎಚ್.ಡಿ.ಚನ್ನಕೇಶವ ಅವರ ಮನೆಯಲ್ಲಿ ಶೋಧ ನಡೆಸಿದಾಗ 6 ಲಕ್ಷ ರೂಪಾಯಿ ನಗದು, ಅಂದಾಜು 3 ಕೆಜಿ ತೂಕದ ಚಿನ್ನ, 6 ಲಕ್ಷ ನಗದು, 28 ಕೆಜಿ ಬೆಳ್ಳಿ, 25 ಲಕ್ಷ ಮೌಲ್ಯದ ವಜ್ರ, 5 ಲಕ್ಷ ಮೌಲ್ಯದ ಪುರಾತನ ವಸ್ತುಗಳು ಪತ್ತೆಯಾಗಿವೆ. ಇವುಗಳ ಅಂದಾಜು 1.5 ಕೋಟಿ ರೂಪಾಯಿ ಆಗಿದೆ ಎಂದು ಮೂಲಗಳು ತಿಳಿಸಿವೆ.

ಇನ್ನು ಸಹಕಾರ ನಗರದಲ್ಲಿರುವ ಚನ್ನಕೇಶವನ ಸೋದರ ಮಾವ ತರುಣ್ ಅವರ ಮನೆಯಲ್ಲಿ ಹೆಚ್ಚಿನ ದಾಳಿ ನಡೆಸಿದ ಅಧಿಕಾರಿಗಳು, 500 ಮುಖಬೆಲೆಯ 92,95,460 ರೂ ನಗದು ಮತ್ತು 55 ಗ್ರಾಂ ಚಿನ್ನವನ್ನು ಪತ್ತೆಹಚ್ಚಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT