ರಾಜ್ಯ

ಬೆಂಗಳೂರು: ನಾಪತ್ತೆಯಾಗಿದ್ದ 9 ವರ್ಷದ ಬಾಲಕ ಕ್ವಾರೆ ಹೊಂಡದಲ್ಲಿ ಶವವಾಗಿ ಪತ್ತೆ!

Nagaraja AB

ಬೆಂಗಳೂರು: ಮಂಗಳವಾರ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದ ಒಂಬತ್ತು ವರ್ಷದ ಬಾಲಕ ಶವವಾಗಿ ಪತ್ತೆಯಾಗಿದ್ದಾನೆ. ಮಳೆ ನೀರು ತುಂಬಿದ್ದ ಕ್ವಾರೆಯಲ್ಲಿ ಶವ ಪತ್ತೆಯಾಗಿದೆ. ಬಾಲಕನನ್ನು ಬೊಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕೂಡ್ಲು ಗೇಟ್ ಬಳಿಯ ನೇಗೆ ಕಾಲೋನಿ ನಿವಾಸಿ ನಿಖಿಲ್ ಮೊಂಡಲ್ ಎಂದು ಗುರುತಿಸಲಾಗಿದೆ.

ಈ ಕುಟುಂಬ ಕೋಲ್ಕತ್ತಾ ಮೂಲದವರಾಗಿದ್ದು, ಕಳೆದ ಮೂರು ವರ್ಷಗಳಿಂದ ನಗರದಲ್ಲಿ ನೆಲೆಸಿದ್ದಾರೆ. ನಿಖಿಲ್ ಸರ್ಕಾರಿ ಶಾಲೆಯಲ್ಲಿ 2ನೇ ತರಗತಿ ಓದುತ್ತಿದ್ದ. ಆತನ ಮನೆಯಿಂದ ಕೇವಲ 500 ಮೀಟರ್ ದೂರದಲ್ಲಿ ಬಾಲಕನ ಶವ ಪತ್ತೆಯಾಗಿದೆ. ಹುಡುಗನ ತಂದೆ ಆಹಾರ ವಿತರಣಾ ಏಜೆಂಟ್ ಆಗಿದ್ದಾರೆ. ಈ ಸಂಬಂಧ ಆಗ್ನೇಯ ವಿಭಾಗದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಬಾಲಕ ನಾಪತ್ತೆಯಾಗಿದ್ದ ಎನ್ನಲಾಗಿದೆ. ಬುಧವಾರ ಮಧ್ಯಾಹ್ನ 3 ಗಂಟೆಗೆ ಹೊತ್ತಿಗೆ ಬಾಲಕನ ಶವ ಹೊರಬಂದ ನಂತರ ಬಾಲಕನ ಶವ ಪತ್ತೆಯಾಗಿದೆ. ಈತನಿಗಾಗಿ ನಿವಾಸಿಗಳು ಹುಡುಕಾಟ ಆರಂಭಿಸಿದ್ದರು. ಅಲ್ಲದೇ, ನಾಪತ್ತೆಯಾಗಿರುವ ಬಾಲಕನ ಬಗ್ಗೆ ಮಾಹಿತಿ ಕೋರಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹಾಕಲಾಗಿತ್ತು. 

ನಿಖಿಲ್‌ಗೆ ಐದು ವರ್ಷದ ಸಹೋದರನಿದ್ದಾನೆ. ಬಾಲಕ ಈಜಲು ಹೊಂಡಕ್ಕೆ ಇಳಿದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆಳವಾದ ಹೊಂಡದಲ್ಲಿ ಈಜಲು ಸಾಧ್ಯವಾಗದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಸಾವಿನ ಹಿಂದೆ ಏನಾದರೂ ಅಕ್ರಮ ನಡೆದಿದೆಯೇ ಎಂಬ ಬಗ್ಗೆಯೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.

SCROLL FOR NEXT