ರಾಜ್ಯ

ಲೀಲಾವತಿಯವರ ಹೆಸರು ಶಾಶ್ವತವಾಗಿ ಉಳಿಯಲು ಸರ್ಕಾರ ಮಟ್ಟದಲ್ಲಿ ಚರ್ಚಿಸಿ ತೀರ್ಮಾನ: ಡಿಸಿಎಂ ಡಿ ಕೆ ಶಿವಕುಮಾರ್

Sumana Upadhyaya

ಬೆಂಗಳೂರು: ಹಿರಿಯ ನಟಿ ಲೀಲಾವತಿಯವರು ಕಷ್ಟಗಳನ್ನು ದಿಟ್ಟತನದಿಂದ ಎದುರಿಸಿ ಪರೋಪಕಾರ, ಸಮಾಜಸೇವೆ, ಕೃಷಿ ಚಟುವಟಿಕೆ ಮಾಡಿ ಮಾದರಿಯಾದವರು ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ಇಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಲೀಲಾವತಿಯವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.

ಹೆಣ್ಣು ಮಗು ಗ್ರಾಮಿಣ ಪ್ರದೇಶದಲ್ಲಿ ಬೆಳೆದವರು. ಸುಮಾರು 600 ಕ್ಕೂ ಹೆಚ್ಚು ಸಿನಿಮಾ ಅಭಿನಯ ಮಾಡಿದ್ದಾರೆ. 40 ನನಗೆ ಅವರು ಚಿರಪರಿಚಿತ. ಕೊನೆಯ ಭೇಟಿ ಎರಡು ವಾರದ ಹಿಂದೆ ನಮ್ಮ‌ ಮನೆಗೆ ಬಂದಿದ್ದರು. ಪಶುವೈದ್ಯ ಶಾಲೆಯನ್ನು ಕಟ್ಟಿದ್ದೇವೆ, ಉದ್ಘಾಟನೆಗೆ ಬರಬೇಕೆಂದು  ಹೇಳಿದ್ದರು. ಎಲೆಕ್ಷನ್ ಒತ್ತಡ ಇತ್ತು, ಆದರೂ ಸೂಕ್ತ ಸಮಯದಲ್ಲಿ ಭಾಗಿಯಾದೆ. ಅದೃಷ್ಟ ಬದಲಾವಣೆ ಆಗಬಹುದು ಆದರೆ ನಿರ್ಧಾರ ಬದಲಾವಣೆ ಆಗಬಾರದು. ಒತ್ತಡದ ನಡುವೆಯೂ ಆ ಕಾರ್ಯಕ್ರಮದಲ್ಲಿ ನಾನು ಭಾಗಿಯಾದ್ದೆ. ಇದು ನನಗೆ ಬಹಳ ಸಂತೋಷ ಆಗಿತ್ತು. ಅನೇಕ ಸಾಹುಕಾರನನ್ನು ನಾನು ನೋಡಿದ್ದೆ. ಇವ್ರೇನು ಸಾಹುಕಾರರು ಆಗಿರಲಿಲ್ಲ. ಇಡೀ ಜೀವನ ತನ್ನ ತಾಯಿ ಸೇವೆಯನ್ನು ವಿನೋದ್ ರಾಜ್ ಮಾಡಿದ್ದಾರೆ. ಅವರನ್ನು ಹಚ್ಚಿಕೊಂಡಿರುವ ನಾಯಿ ಸಹ ನಿನ್ನೆಯಿಂದ ಊಟ ಮಾಡಲಿಲ್ಲ ಎಂದು ಕೇಳಲ್ಪಟ್ಟೆ ಎಂದು ಭಾವುಕರಾಗಿ ಡಿಕೆ ಶಿವಕುಮಾರ್ ನೆನೆಸಿಕೊಂಡರು. 

ಲೀಲಾವತಿ ಹೆಸರು ಶಾಶ್ವತವಾಗಿ ಉಳಿಸಲು ಕ್ರಮ:ಲೀಲಾವತಿಯವರ ಹೆಸರು ಕನ್ನಡ ನಾಡಿನಲ್ಲಿ, ಚಿತ್ರರಂಗದಲ್ಲಿ ಶಾಶ್ವತವಾಗಿ ಉಳಿಯಲು ಏನು ಮಾಡಬೇಕೋ ಅದನ್ನು ನಮ್ಮ ಸರ್ಕಾರ ಮಾಡುತ್ತದೆ. ಈಗ ಹೇಳುವುದಿಲ್ಲ.  ನಾವೆಲ್ಲರೂ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದರು. 

ಅಂತಿಮ ದರ್ಶನದ ಬಳಿಕ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ ಅವರು, ಮೇರು ನಟಿ ಲೀಲಾವತಿಯವರು ವಿಧಿವಶರಾಗಿದ್ದಾರೆ. ಸುಮಾರು 600ಕ್ಕೂ ಹೆಚ್ಚು ಚಿತ್ರದಲ್ಲಿ ನಟಿಸಿದ್ದಾರೆ. ಬೆಳ್ತಂಗಡಿಯ ಪುಟ್ಟ ಹಳ್ಳಿಯಲ್ಲಿ ಹುಟ್ಟಿ ಚಿತ್ರರಂಗದಲ್ಲಿ ಮಿಂಚಿದ್ದಾರೆ. ಅವರ ಕೊಡುಗೆ ಅಪಾರ. ಅವರನ್ನು ಕಳೆದುಕೊಂಡು ಕನ್ನಡ ನಾಡು ಬಡವಾಗಿದೆ. ಅವರ ಸಾವಿನ ನೋವು ಭರಿಸುವ ಶಕ್ತಿ ಕುಟುಂಬಕ್ಕೆ ನೀಡಲಿ ಎಂದರು.

SCROLL FOR NEXT