ಪುಸ್ತಕ ಬಿಡುಗಡೆಗೊಳಿಸಿದ ನಿತಿನ್ ಗಡ್ಕರಿ ಹಾಗೂ ಸಂತೋಷ್ ಹೆಗಡೆ. 
ರಾಜ್ಯ

ಎಂಎಸ್ ರಾಮಯ್ಯ ಜೀವನಚರಿತ್ರೆ ರಾಮಯ್ಯನಮ್ ಕೃತಿ ಲೋಕಾರ್ಪಣೆಗೊಳಿಸಿದ ಗಡ್ಕರಿ

ಭಾರತಕ್ಕೆ ಜ್ಞಾನ, ಮಾನವ ಸಂಪನ್ಮೂಲ ಹಣಕ್ಕೆ ಕೊರತೆ ಇಲ್ಲ. ಸೂಕ್ತ ದೂರದೃಷ್ಟಿ ಹೊಂದಿರುವವರ ಕೊರತೆ ಇದೆ. ಸಾಧನೆ ಮಾಡಲು ಪದವಿ ಮುಖ್ಯವಲ್ಲ. ನಮ್ಮ ಜ್ಞಾನ ಬಳಸಿಕೊಂಡು ಸರಿಯಾದ ಗುರಿ, ದೂರದೃಷ್ಟಿಯೊಂದಿಗೆ ನಿಯತ್ತಿನಿಂದ ಕೆಲಸ ಮಾಡಬೇಕಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಂಗಳವಾರ ಹೇಳಿದರು.

ಬೆಂಗಳೂರು: ಭಾರತಕ್ಕೆ ಜ್ಞಾನ, ಮಾನವ ಸಂಪನ್ಮೂಲ ಹಣಕ್ಕೆ ಕೊರತೆ ಇಲ್ಲ. ಸೂಕ್ತ ದೂರದೃಷ್ಟಿ ಹೊಂದಿರುವವರ ಕೊರತೆ ಇದೆ. ಸಾಧನೆ ಮಾಡಲು ಪದವಿ ಮುಖ್ಯವಲ್ಲ. ನಮ್ಮ ಜ್ಞಾನ ಬಳಸಿಕೊಂಡು ಸರಿಯಾದ ಗುರಿ, ದೂರದೃಷ್ಟಿಯೊಂದಿಗೆ ನಿಯತ್ತಿನಿಂದ ಕೆಲಸ ಮಾಡಬೇಕಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಂಗಳವಾರ ಹೇಳಿದರು.

ನಗರದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಪತ್ರಕರ್ತ ರಾಮಕೃಷ್ಣ ಉಪಾಧ್ಯಾಯ ಅವರು ಬರೆದಿರುವ ಉದ್ಯಮಿ ಎಂ.ಎಸ್.ರಾಮಯ್ಯ ಅವರ ಜೀವನ ಚರಿತ್ರೆ ರಾಮಯ್ಯನಮ್ ಬಿಡುಗಡೆ ಮಾಡಿ ಗಡ್ಕರಿಯವರು ಮಾತನಾಡಿದರು.

ಹಿಂದೆ ಮಾಡಿರುವ ಕಾರ್ಯಗಳ ಕುರಿತು ವರ್ತಮಾನದಲ್ಲಿ ಚಿಂತನೆ, ಅಧ್ಯಯನ ಮಾಡಿ ಭವಿಷ್ಯವನ್ನು ಹೇಗೆ ರೂಪಿಸಬೇಕು ಎಂದು ನಿರ್ಧಾರ ತೆಗೆದುಕೊಳ್ಳಲು ರಾಮಯ್ಯನವರಂತಹ ಜೀವನ ಚರಿತ್ರೆ ಓದಿನಿಂದ ಸಾಧ್ಯವಾಗುತ್ತದೆ. ನಮ್ಮ ಸಮಾಜ, ದೇಶಕ್ಕೆ ರಾಮಯ್ಯ ಅವರು ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಪ್ರಗತಿಗೆ ಕಾರಣರಾಗಿರುವ ಸಾವಿರಾರು ಎಂಜಿನಿಯರ್, ಡಾಕ್ಟರ್ ಸೇರಿದಂತೆ ಅನೇಕ ಪ್ರತಿಭೆಗಳನ್ನು ನೀಡಿದ್ದಾರೆಂದು ಹೇಳಿದರು.

“ಬೆಂಗಳೂರು ಭಾರತದ ಜ್ಞಾನದ ರಾಜಧಾನಿ ಎಂದು ಕರೆಯಲ್ಪಡುತ್ತದೆ. ವಿವಿಧ ಕ್ಷೇತ್ರಗಳಿಗೆ ಹಲವಾರು ಸಂಸ್ಥೆಗಳನ್ನು ನಿರ್ಮಿಸಿದ ಡಾ ರಾಮಯ್ಯ ಅವರ ಪರಿಶ್ರಮವೂ ಇದಕ್ಕೆ ಕಾರಣ, ನಾವೀನ್ಯತೆ, ಉದ್ಯಮಶೀಲತೆ, ವಿಜ್ಞಾನ, ತಂತ್ರಜ್ಞಾನ, ಸಂಶೋಧನೆ ಮತ್ತು ಕೌಶಲ್ಯಗಳನ್ನು ಸಾಮಾನ್ಯವಾಗಿ ಜ್ಞಾನ ಮತ್ತು ಸಂಪತ್ತಾಗಿ ಪರಿವರ್ತಿಸುವ ಸಾಮರ್ಥ್ಯ ಎಂದು ಕರೆಯಲಾಗುತ್ತದೆ. ಯಾವುದೇ ವ್ಯಕ್ತಿ ಅಥವಾ ಯಾವುದೇ ವಸ್ತು ಎಂದಿಗೂ ವ್ಯರ್ಥವಾಗುವುದಿಲ್ಲ. ತ್ಯಾಜ್ಯವನ್ನು ಪರಿರ್ತಿಸಬಹುದು. ಪ್ರತಿಯೊಬ್ಬರೂ ಭಾರತ ಆತ್ಮನಿರ್ಭರ್ ಆಗಲು ಸಹಾಯ ಮಾಡಿ ಎಂದು ತಿಳಿಸಿದರು.

ನಮ್ಮದು ಬಡತನದ ದೇಶವೆಂದು ಪರಿಗಣಿಸಲ್ಪಟ್ಟಿದ್ದರೂ, ನಾವು ಶ್ರೀಮಂತ ಇತಿಹಾಸ, ಬಲವಾದ ತತ್ವಗಳು, ಸಂಸ್ಕೃತಿ ಮತ್ತು ಪರಂಪರೆಯನ್ನು ಹೊಂದಿದ್ದೇವೆ, ಅದು ಅನೇಕ ದೇಶಗಳಲ್ಲಿ ಕಣ್ಮರೆಯಾಗಿದೆ ಎಂದರು,

ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಮಾತನಾಡಿ, ಬಡ ಕುಟುಂಬದಲ್ಲಿ ಜನಿಸಿ, ತಂದೆಯ ಜೊತೆ ಕೂಲಿ ಕೆಲಸ ಮಾಡಿ ಶಿಕ್ಷಣ, ನಿರ್ಮಾಣ, ಸಮಾಜ ಸೇವಾ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿರುವ ಎಂ.ಎಸ್. ರಾಮಯ್ಯ ಅವರ ಜೀವನವು ಸ್ಪೂರ್ತಿದಾಯಕವಾಗಿದೆ. ಸಂಸ್ಕಾರ, ಮೌಲ್ಯಗಳನ್ನು ಮೈಗೂಡಿಸಿಕೊಂಡು ಅಮೋಘ ಸಾಧನೆ ಮಾಡಿರುವ ಇವರ ಜೀವನ ಚರಿತ್ರೆ ಶಾಲಾ-ಕಾಲೇಜುಗಳ ಪಠ್ಯದಲ್ಲಿ ಸೇರ್ಪಡೆಗೊಳಿಸಬೇಕು ಎಂದು ಹೇಳಿದರು.

ನೈತಿಕ ಮೌಲ್ಯಗಳು ಶಾಲೆಗಳಲ್ಲಿ ಇತಿಹಾಸ ಪಠ್ಯಪುಸ್ತಕಗಳ ಭಾಗವಾಗಿರಬೇಕು. ನಾನು ಶಾಲೆಯಲ್ಲಿದ್ದಾಗ, ನೈತಿಕ ವಿಜ್ಞಾನ ಎಂಬ ವಿಷಯವಿತ್ತು, ಇಂದು ಅದು ಯಾವುದೇ ಶಾಲೆಗಳಲ್ಲಿಲ್ಲ ಎಂದು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

ವಿದೇಶಿ ಮಹಿಳೆಗೆ ಪತ್ರ ಬರೆದು ಅಂಬೇಡ್ಕರ್ ಸೋಲನ್ನು ನೆಹರು ಸಂಭ್ರಮಿಸಿದ್ದು ನಿಜವಲ್ಲವೇ? 'ಗೂಗಲ್ ಬೇಬಿ'ಯಂತೆ ವರ್ತಿಸಬೇಡಿ!

SCROLL FOR NEXT