ರಾಜ್ಯ

ಬಾಗಲಕೋಟೆ: ಹಿಟ್ ಅಂಡ್ ರನ್ ಪ್ರಕರಣ ಎಂದು ಬಿಂಬಿಸಿ ರೈತನ ಹತ್ಯೆಗೈದ ಪೊಲೀಸ್ ಪೇದೆ, ಸಹೋದರನ ಬಂಧನ

Ramyashree GN

ಬಾಗಲಕೋಟೆ: ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ರೈತನನ್ನು ಕೊಂದು, ಅದನ್ನು ಹಿಟ್ ಅಂಡ್ ರನ್ ಪ್ರಕರಣ ಎಂದು ಬಿಂಬಿಸಲು ಪ್ರಯತ್ನಿಸಿದ ಆರೋಪದ ಮೇಲೆ ಪೊಲೀಸ್ ಪೇದೆ ಮತ್ತು ಆತನ ಸಹೋದರನನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. 

ಬಂಧಿತರನ್ನು ವಿಜಯಪುರದ ಜಲನಗರ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ಮನ್ಸೂರ್ ಅಲಿ ಮತ್ತು ಆತನ ಸಹೋದರ ಮೆಹಮೂದ್ ಎಂದು ಗುರುತಿಸಲಾಗಿದೆ.

ಆಪಾದಿತ ಹಿಟ್ ಅಂಡ್ ರನ್ ಪ್ರಕರಣ ಡಿಸೆಂಬರ್ 5 ರಂದು ವರದಿಯಾಗಿತ್ತು. 55 ವರ್ಷದ ಮದ್ದೇಸಾಬ್ ಗಲಗಲಿ ಎಂಬ ರೈತ ಗಾಯಗೊಂಡು ಸಾವಿಗೀಡಾಗಿದ್ದರು.

ಪ್ರಾಥಮಿಕ ವರದಿಗಳ ಪ್ರಕಾರ, ಸಂತ್ರಸ್ತ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಅಪರಿಚಿತ ವಾಹನವು ಅವರ ಬೈಕ್‌ಗೆ ಡಿಕ್ಕಿ ಹೊಡೆದಿತ್ತು.

ಸಾವಳಗಿ ಪೊಲೀಸರು ಪ್ರಕರಣದ ತನಿಖೆ ನಡೆಸಿದಾಗ, ಮುಧೋಳ ತಾಲೂಕಿನ ಶಿರೋಳ ಗ್ರಾಮದಲ್ಲಿ ಮೂರು ಎಕರೆ ಜಮೀನಿಗೆ ಸಂಬಂಧಿಸಿದಂತೆ ಸಂತ್ರಸ್ತ ಮತ್ತು ಆರೋಪಿಗಳ ನಡುವೆ ಆಸ್ತಿ ವಿವಾದವಿರುವುದು ಪತ್ತೆಯಾಗಿದೆ.

ಪೊಲೀಸ್ ಪೇದೆಯು ಸಂತ್ರಸ್ತರ ಬೈಕ್‌ಗೆ ಡಿಕ್ಕಿ ಹೊಡೆದು, ಹತ್ಯೆಯನ್ನು ನಿಖರವಾಗಿ ಯೋಜಿಸಿ ಕಾರ್ಯಗತಗೊಳಿಸಿದ್ದ ಎನ್ನಲಾಗಿದೆ.

ಆರಂಭದಲ್ಲಿ ಹಿಟ್ ಅಂಡ್ ರನ್ ಕೇಸ್ ಎಂದು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಈಗ ಅದನ್ನು ಕೊಲೆ ಪ್ರಕರಣ ಎಂದು ಬದಲಿಸಿದ್ದಾರೆ.

SCROLL FOR NEXT