ರಾಜ್ಯ

ಸ್ಥಗಿತವಾಗಿದ್ದ ಬೆಂಗಳೂರು ಮೆಟ್ರೋ ಕಾಮಗಾರಿ ಪುನರಾರಂಭ

Nagaraja AB

ಬೆಂಗಳೂರು: ಐದು ದಿನಗಳಿಂದ ಸ್ಥಗಿತವಾಗಿದ್ದ ಬೆಂಗಳೂರು ಮೆಟ್ರೋ ಕಾಮಗಾರಿ ಪುನರಾರಂಭಗೊಂಡಿದೆ. ಈ ಸಂಬಂಧ ಭೂಮಿ ಮಾಲೀಕರು ಪಿಲ್ಲರ್‌ಗೆ ತ್ಯಾಜ್ಯ ತೈಲ ಸುರಿದಿದ್ದರಿಂದ ಮೆಟ್ರೊ ಕಾಮಗಾರಿ ಸ್ಥಗಿತ’ ಎಂಬ ಶೀರ್ಷಿಕೆಯಡಿಯಲ್ಲಿ ಶುಕ್ರವಾರ ಟಿಎನ್‌ಐಇಯಲ್ಲಿ ವರದಿ ಬಂದಿತ್ತು. ಶನಿವಾರದಿಂದ ಕಾಮಗಾರಿ ಪುನರ್ ಆರಂಭವಾಗಿದೆ.

ಆಸ್ತಿ ಹಾನಿ ಹಾಗೂ ಕೆಲಸ ಮುಂದುವರೆಸಲು ಭದ್ರತೆಯ ಅಗತ್ಯದ ಬಗ್ಗೆ ಪೊಲೀಸ್ ಆಯುಕ್ತ ಬಿ. ದಯನಂದ್ ಅವರಿಗೆ ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಅವರು ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಬಿಎಂಆರ ಸಿಎಲ್ ನಿರ್ದೇಶಕ ಡಿ. ರಾಧಕೃಷ್ಣ ರೆಡ್ಡಿ ತಿಳಿಸಿದರು. 

ಭದ್ರತೆ ಒದಗಿಸುವಂತೆ ಮಹದೇವಪುರ ಪೊಲೀಸರಿಗೆ ಉನ್ನತ ಪೊಲೀಸ್ ನಿರ್ದೇಶನ ನೀಡಿದ್ದು, ಇನ್ಸ್‌ಪೆಕ್ಟರ್ ಪ್ರವೀಣ್ ಬಾಬು ಅದಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ತ್ಯಾಜ್ಯ ತೈಲದಿಂದ ಹಳಿಗೆ ಹಾನಿ ಮಾಡಿದ ಸೈಯದ್ ಫಯಾಜ್ ಇತರ ಎಫ್‌ಐಆರ್‌ ಹಾಕಲಾಗಿದೆ ಎಂದು ಪೊಲೀಸರು ಬಿಎಂಆರ್‌ಸಿಎಲ್‌ಗೆ ತಿಳಿಸಿದ್ದಾರೆ. ನಾಲ್ಕು ಪಿಲ್ಲರ್‌ಗಳಲ್ಲಿ ಕ್ಯಾಪ್‌ಗಳನ್ನು ಸಿದ್ಧಪಡಿಸುವ ಕೆಲಸ ಪ್ರಾರಂಭವಾಗಿದೆ ಎಂದು ರೆಡ್ಡಿ ಹೇಳಿದರು.

SCROLL FOR NEXT