ಬೆಂಗಳೂರಿನ ಬೆಂಗಳೂರು-ತುಮಕೂರು ರಸ್ತೆಯ ಅಂಚೆಪಾಳ್ಯದಲ್ಲಿ ಎಂಯುವಿಯ ಸುಟ್ಟ ಅವಶೇಷಗಳು ಬೆಂಕಿಗೆ ಆಹುತಿಯಾಯಿತು 
ರಾಜ್ಯ

ಬೆಂಗಳೂರು: ಹೈಬ್ರಿಡ್ ವಾಹನ ಹೊತ್ತಿ ಉರಿದು ರಿಯಲ್ ಎಸ್ಟೇಟ್ ಉದ್ಯಮಿ ಸಜೀವ ದಹನ!

ಬೆಂಗಳೂರು-ತುಮಕೂರು ರಸ್ತೆಯ ಅಂಚೆಪಾಳ್ಯದ ಜಿಂದಾಲ್ ಬಳಿ ನಿನ್ನೆ ಮಂಗಳವಾರ ಅಪರಾಹ್ನ ಹೊತ್ತಿನಲ್ಲಿ ಚಾಲನೆ ಮಾಡುತ್ತಿದ್ದ ಮಲ್ಟಿ ಯುಟಿಲಿಟಿ ವೆಹಿಕಲ್ (ಎಂಯುವಿ) ಕಾರಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ 48 ವರ್ಷದ ರಿಯಲ್ ಎಸ್ಟೇಟ್ ಉದ್ಯಮಿ ಗುರುತು ಹಿಡಿಯಲಾಗದಷ್ಟು ಸುಟ್ಟು ಕರಕಲಾಗಿ ಹೋದ ಘಟನೆ ನಡೆದಿದೆ. ಕೆಲವೇ ಸೆಕೆಂಡ್‌ಗಳಲ್ಲಿ ವಾಹನ ಬೆಂಕಿಗೆ ಆಹುತಿಯಾದ ಕಾರಣ ಚಾಲಕ

ಬೆಂಗಳೂರು: ಬೆಂಗಳೂರು-ತುಮಕೂರು ರಸ್ತೆಯ ಅಂಚೆಪಾಳ್ಯದ ಜಿಂದಾಲ್ ಬಳಿ ನಿನ್ನೆ ಮಂಗಳವಾರ ಅಪರಾಹ್ನ ಹೊತ್ತಿನಲ್ಲಿ ಚಾಲನೆ ಮಾಡುತ್ತಿದ್ದ ಮಲ್ಟಿ ಯುಟಿಲಿಟಿ ವೆಹಿಕಲ್ (ಎಂಯುವಿ) ಕಾರಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ 48 ವರ್ಷದ ರಿಯಲ್ ಎಸ್ಟೇಟ್ ಉದ್ಯಮಿ ಗುರುತು ಹಿಡಿಯಲಾಗದಷ್ಟು ಸುಟ್ಟು ಕರಕಲಾಗಿ ಹೋದ ಘಟನೆ ನಡೆದಿದೆ. ಕೆಲವೇ ಸೆಕೆಂಡ್‌ಗಳಲ್ಲಿ ವಾಹನಕ್ಕೆ ಬೆಂಕಿ ಹತ್ತಿಕೊಂಡು ಬಾಗಿಲು ಜಾಮ್ ಆಗಿದ್ದರಿಂದ ಚಾಲಕ ಹೊರಗೆ ಬರಲು ಸಾಧ್ಯವಾಗಲಿಲ್ಲ.

ಚಾಲಕ ಬಾಗಿಲು ತೆರೆಯಲು ಪ್ರಯತ್ನಿಸಿದರೂ ಕೂಡ ಕಾರಿನ ಸೆಂಟ್ರಲ್ ಲಾಕಿಂಗ್ ಸಿಸ್ಟಮ್ ಜಾಮ್ ಆಗಿತ್ತು ಎಂದು ಹೇಳಲಾಗಿದೆ. ಸಮೀಪದ ಪೆಟ್ರೋಲ್ ಬಂಕ್‌ನ ನೌಕರರು ಅಗ್ನಿಶಾಮಕ ಯಂತ್ರಗಳಿಂದ ಬೆಂಕಿ ನಂದಿಸಲು ನಡೆಸಿದ ಯತ್ನ ಫಲಕೊಡಲಿಲ್ಲ, ಎಂ.ಎನ್.ಹಳ್ಳಿ ಪೊಲೀಸರು ವಾಹನದ ನೋಂದಣಿ ಸಂಖ್ಯೆಯನ್ನು ಆಧರಿಸಿ ಜಾಲಹಳ್ಳಿ ಪಶ್ಚಿಮದ ಶೆಟ್ಟಿಹಳ್ಳಿ ನಿವಾಸಿ ಟಿ.ಅನಿಲ್ ಕುಮಾರ್ ಎಂದು ಗುರುತಿಸಿದ್ದಾರೆ. ಪ್ರಾಣಾಪಾಯದಿಂದ ಅನಿಲ್‌ ತಪ್ಪಿಸಿಕೊಳ್ಳಲು ಯಾವುದೇ ಅವಕಾಶವಿರಲಿಲ್ಲ ಎಂದು ಪ್ರತ್ಯಕ್ಷದರ್ಶಿ ಹೇಳಿದ್ದಾರೆ.

ಜನವರಿ 2023 ರಲ್ಲಿ ಯಶವಂತಪುರ RTO ನಲ್ಲಿ ವಾಹನವನ್ನು ನೋಂದಾಯಿಸಲಾಗಿದೆ. MUV ನೆಲಮಂಗಲದಿಂದ ಬೆಂಗಳೂರು ಕಡೆಗೆ ಚಲಿಸುತ್ತಿದ್ದಾಗ ಅಪರಾಹ್ನ 3 ರಿಂದ 3.15 ರವರೆಗೆ ಈ ಘಟನೆ ಸಂಭವಿಸಿದೆ. ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ಟೆಂಡರ್ ಕರೆಯಲಾಯಿತಾದರೂ ಪ್ರಯೋಜನವಾಗಲಿಲ್ಲ.

ಬೆಂಕಿಯ ಹಿಂದಿನ ನಿಖರವಾದ ಕಾರಣವನ್ನು ಇನ್ನೂ ಕಂಡುಹಿಡಿಯಲಾಗಿಲ್ಲ. ಪ್ರತ್ಯಕ್ಷದರ್ಶಿಗಳ ಪ್ರಕಾರ, ವಾಹನದೊಳಗೆ ಬೆಂಕಿ ಕಾಣಿಸಿಕೊಂಡು ಚಾಲಕ ಹೊರಗೆ ಬರಲು ಸಾಧ್ಯವಾಗಲಿಲ್ಲ.

ವಾಹನಕ್ಕೆ ಸಿಎನ್‌ಜಿ ಅಳವಡಿಸಲಾಗಿಲ್ಲ, ಆದರೆ ಹೈಬ್ರಿಡ್ ವಾಹನವಾಗಿತ್ತು. ವಾಹನವು ನಗರದ ಕಡೆಗೆ ಬರುತ್ತಿತ್ತು ಎಂದು ಬೆಂಗಳೂರು ಗ್ರಾಮಾಂತರ ಎಸ್‌ಪಿ ಮಲ್ಲಿಕಾರ್ಜುನ ಬಲದಂಡಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು. ಸರ್ವೀಸ್ ರಸ್ತೆಯಲ್ಲಿ ಬೈಕ್ ನಲ್ಲಿ ಹೋಗುತ್ತಿದ್ದಾಗ ವಾಹನ ಸುಟ್ಟು ಕರಕಲಾಗಿರುವುದನ್ನು ಕಂಡಿದ್ದೇನೆ ಎಂದು ಪ್ರತ್ಯಕ್ಷದರ್ಶಿ ಅಭಿಷೇಕ್ ಹೇಳಿದ್ದಾರೆ.

ವಾಹನದಲ್ಲಿ ಒಬ್ಬರೇ ಇದ್ದು, ಅವರು ತಪ್ಪಿಸಿಕೊಳ್ಳಲು ಯಾವುದೇ ಅವಕಾಶವಿರಲಿಲ್ಲ. ವಾಹನ ಮತ್ತು ಚಾಲಕ  ಸಂಪೂರ್ಣ ಸುಟ್ಟು ಹೋದರು. ಕಾರಿನ ಕಬ್ಬಿಣದ ಭಾಗಗಳು ಮಾತ್ರ ಉಳಿದಿವೆ. MUV ಹಿಂದೆ ಬರುತ್ತಿದ್ದ ಬಸ್‌ನ ಚಾಲಕ ಬಸ್‌ನಲ್ಲಿರುವ ಅಗ್ನಿಶಾಮಕ ಸಾಧನದಿಂದ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದ್ದಾರೆ ಎಂದು ಅಭಿಷೇಕ್ ಹೇಳಿದರು. ಎಂ.ಎನ್.ಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT