ರಾಜ್ಯ

ಕಂಪ್ಲಿಯಲ್ಲಿ 17ನೇ ಶತಮಾನದ ಮಹಾಸತಿ ಕಲ್ಲು ಪತ್ತೆ!

Manjula VN

ಕಂಪ್ಲಿ (ಬಳ್ಳಾರಿ): ಕಂಪ್ಲಿಯ ಕೋಟೆ ಪ್ರದೇಶಕ್ಕೆ ತೆರಳುವ ಬೆನಕನ ಕಾಲುವೆ ದಂಡೆ ಬಳಿ 17ನೇ ಶತಮಾನದ ‘ಮಹಾಸತಿ’ ಕಲ್ಲು ಪತ್ತೆಯಾಗಿದೆ.

ಈ ನಡುವೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ಆರಂಭಿಸಿದ್ದಾರೆ.  ಈ ನಡುವೆ ಇತಿಹಾಸಕಾರರು ಕಲ್ಲು ವಿಜಯನಗರ ಸಾಮ್ರಾಜ್ಯದ ಕಾಲದ್ದು ಎಂದು ಹೇಳಿದ್ದಾರೆ.

ಬಿಳಿಕಾಡು ಕಲ್ಲಿನಲ್ಲಿ ಸುಂದರ ಉಡುಗೆ ತೊಟ್ಟ ಮಹಿಳೆಯೊಬ್ಬಳ ಚಿತ್ರವನ್ನು ಕೆತ್ತನೆ ಮಾಡಲಾಗಿದೆ. ಕಾಲಬಳಿಯ ಸೊಂಟದಲ್ಲಿ ಬಾಕು(ಕಿರುಗತ್ತಿ) ಸಿಕ್ಕಿಸಿಕೊಂಡ ವೀರನ ಚಿತ್ರವಿದೆ. ಮೇಲ್ಭಾಗದಲ್ಲಿ ಸತಿಯ ಬಲಗೈ ತುಂಡಾಗಿದ್ದು, ಯಾವುದೇ ಅಕ್ಷರಗಳು ಕಾಣುವುದಿಲ್ಲ. ಅದರಿಂದ ಇದು ಮಹಾಸತಿ ಕಲ್ಲು ಎಂದು ಗುರುತಿಸಲಾಗಿದೆ.

ಸ್ಥಳದಲ್ಲಿ ರೈತರು ಕೃಷಿ ಮಾಡುತ್ತಿದ್ದಾಗ ಕಲ್ಲಿನಿಂದಾಗಿ ಎಡವಿದ್ದಾರೆ. ಬಳಿಕ ಕಲ್ಲನ್ನು ಸ್ವಚ್ಛಗೊಳಿಸಿದಾಗ ಕೆತ್ತನೆ ಕಂಡು ಬಂದಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಬಳಿಕ ಎಎಸ್ಐ ತಂಡ ಸ್ಥಳಕ್ಕೆ ಧಾವಿಸಿದ್ದು, ಸಂಶೋಧಕ ಹಾಗೂ ಇತಿಹಾಸ ತಜ್ಞ ಶರಣಬಸಪ್ಪ ಕುಲಕರ್ ಅವರನ್ನು ಕಲ್ಲನ್ನು ಪತ್ತೆ ಮಾಡಿದ್ದಾರೆ.

ಕಲ್ಲಿನ ಕುರಿತು ನಿಖರ ಮಾಹಿತಿ ಪಡೆಯಲು ಕಾರ್ಬನ್ ಡೇಟಿಂಗ್ ಪರೀಕ್ಷೆಯನ್ನು ನಡೆಸಲಾಗುತ್ತದೆ ಎಂದು ಶರಣಬಸಪ್ಪ ಅವರು ಹೇಳಿದ್ದಾರೆ.

SCROLL FOR NEXT