ರಾಜ್ಯ

ಪ್ರತಿ ವರ್ಷ KSRTC ಬಸ್‌ಗಳಿಗೆ ಆರ್ ಟಿಒಗಳಿಂದ ಫಿಟ್ ನೆಸ್ ಪ್ರಮಾಣ ಪತ್ರ ಕಡ್ಡಾಯ: ಹೈಕೋರ್ಟ್ ಸೂಚನೆ

Shilpa D

ಬೆಂಗಳೂರು: ಕೆಎಸ್‌ಆರ್‌ಟಿಸಿ  ಬಸ್‌ಗಳ ಕಳಪೆ ಸ್ಥಿತಿಯಿಂದ ಅಪಘಾತಗಳನ್ನು ತಪ್ಪಿಸುವ ಮೂಲಕ ಪ್ರಯಾಣಿಕರ ಸುರಕ್ಷತೆ ಮಾಡಲು ಸಂಬಂಧಪಟ್ಟ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಂದ (ಆರ್‌ಟಿಒ) ಪ್ರತಿ ವರ್ಷ ಫಿಟ್‌ನೆಸ್ ಪ್ರಮಾಣಪತ್ರ ಪಡೆಯಬೇಕು ಎಂದು ಕರ್ನಾಟಕ ಹೈಕೋರ್ಟ್ ನಿರ್ದೇಶಿಸಿದೆ.

ರಸ್ತೆಯಲ್ಲಿ ಚಲಿಸಲು ಬಸ್‌ಗಳ ಫಿಟ್‌ನೆಸ್  ಪರಿಶೀಲಿಸಲು ಮತ್ತು ಪ್ರಮಾಣೀಕರಿಸುವಲ್ಲಿ ಆರ್‌ಟಿಒ ಅಧಿಕಾರಿಗಳು ಯಾವುದೇ ಸಾಂದರ್ಭಿಕ ವಿಧಾನವನ್ನು ಹೊಂದಿರಬಾರದು ಎಂದು ಪ್ರಯಾಣಿಕರ ಸುರಕ್ಷತೆಯನ್ನು ಒತ್ತಿಹೇಳುವ ಸಂದರ್ಭದಲ್ಲಿ ನ್ಯಾಯಾಲಯ ಹೇಳಿದೆ.

2006ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಇಬ್ಬರು ವಿದ್ಯಾರ್ಥಿಗಳ ಸಾವಿಗೆ ಕಾರಣವಾದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಎಸ್‌ಆರ್‌ಟಿಸಿ ಚಾಲಕ ಸತೀಶ್‌ ಅವರ ಶಿಕ್ಷೆಯನ್ನು ಒಂದರಿಂದ ಆರು ತಿಂಗಳಿಗೆ ಪರಿವರ್ತಿಸಿ ನ್ಯಾಯಮೂರ್ತಿ ರಾಮಚಂದ್ರ ಡಿ ಹುದ್ದಾರ್ ಅವರು ಈ ನಿರ್ದೇಶನ ಹೊರಡಿಸಿದ್ದಾರೆ. ವಿಚಾರಣಾ ನ್ಯಾಯಾಲಯವು  ಒಂದು ವರ್ಷ ಸರಳ ಶಿಕ್ಷೆ ವಿಧಿಸಿತ್ತು.

ರಸ್ತೆಗೆ ಹೊಂದಿಕೊಳ್ಳುವ ಬಸ್‌ಗಳ ಫಿಟ್‌ನೆಸ್ ಬಗ್ಗೆ ಪ್ರಮಾಣೀಕರಿಸಲು ಕೆಎಸ್‌ಆರ್‌ಟಿಸಿಯ ಮೆಕ್ಯಾನಿಕಲ್ ವಿಭಾಗಕ್ಕೆ ನ್ಯಾಯಾಲಯ ಸೂಚಿಸಿದೆ ಮತ್ತು ಪ್ರಮಾಣಪತ್ರವನ್ನು ನೀಡಿದ ನಂತರವೇ ಅಂತಹ ಬಸ್‌ಗಳನ್ನು ಓಡಿಸಲು ಅನುಮತಿ ನೀಡಬೇಕು. ನಿಯತಕಾಲಿಕವಾಗಿ ಯಾಂತ್ರಿಕ ಪರೀಕ್ಷೆ ಮತ್ತು ಬಸ್‌ಗಳ ದುರಸ್ತಿ ಇರುತ್ತದೆ ಎಂದು ಅದು ಹೇಳಿದೆ.

ಕೆಎಸ್‌ಆರ್‌ಟಿಸಿ ರೂಪಿಸಿರುವ ನಿಯಮಗಳ ಪ್ರಕಾರ, ನಿರ್ದಿಷ್ಟ ಕಿಮೀ  ಪ್ರಯಾಣ ಪೂರ್ಣಗೊಳಿಸಿದ ನಂತರ ಅಂತಹ ಬಸ್‌ ಸಂಚಾರ ಸ್ಥಗಿತಗೊಳಿಸಬೇಕು. ಸ್ಕ್ರ್ಯಾಪ್ ಮಾಡಿದ ಬಸ್‌ಗಳನ್ನು ಯಾವುದೇ ಮಾರ್ಗಗಳಿಗೆ ಬಳಸಲು ಅನುಮತಿ ನೀಡಬಾರದು ಎಂದು ಹೈಕೋರ್ಟ್ ಹೇಳಿದೆ.

ಚಾಲಕರನ್ನು ಫಿಟ್‌ ಇಲ್ಲದ ಬಸ್‌ಗಳನ್ನು ಬಳಸಲು ಟ್ರಾಫಿಕ್ ಕಂಟ್ರೋಲರ್ ಒತ್ತಾಯಿಸುತ್ತಾರೆ ಎಂದು ಆರೋಪಿ ಚಾಲಕ ನೀಡಿದ ಹೇಳಿಕೆಯ ಮೇರೆಗೆ ಈ ನಿರ್ದೇಶನಗಳನ್ನು ನೀಡಲಾಗಿದೆ. ಅಪಘಾತಕ್ಕೊಳಗಾಗಿದ್ದ ಬಸ್ ಈಗಾಗಲೇ 10 ಲಕ್ಷ ಕಿ.ಮೀ.ಗೂ ಹೆಚ್ಚುಸಂಚರಿಸಿದೆ. ಅದರಲ್ಲಿ ಇಗ್ನಿಷನ್ ಸ್ಟಾರ್ಟರ್, ಹಾರ್ನ್ ಮತ್ತು ಬ್ರೇಕ್ ಇರಲಿಲ್ಲ ಎಂಬುದನ್ನು ಕೋರ್ಟ್ ಗಮನಿಸಿದೆ. ತಂದಿರುವ ಬಸ್ಸಿನ ಸ್ಥಿತಿಯು ಸಾಕಷ್ಟು ಆತಂಕಕಾರಿಯಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.

SCROLL FOR NEXT