ಎ.ಎಸ್ ಪೊನ್ನಣ್ಣ 
ರಾಜ್ಯ

ತಮ್ಮ ಹಕ್ಕುಗಳಿಗಾಗಿ ಹೋರಾಡಲು ಕೊಡವರು ಒಗ್ಗೂಡಬೇಕು: ಶಾಸಕ ಎ.ಎಸ್.ಪೊನ್ನಣ್ಣ

ನಮ್ಮ ಪೂರ್ವಜರು ನಮ್ಮ ನೆಲ ಮತ್ತು ಸಂಸ್ಕೃತಿಯನ್ನು ರಕ್ಷಿಸಲು ಹೋರಾಡಿದರು, ಈಗ ತಮ್ಮ ಹಕ್ಕುಗಳಿಗಾಗಿ ಕೊಡವ ಸಮುದಾಯ ಒಗ್ಗಟ್ಟಾಗಿ ಹೋರಾಡಬೇಕು ಎಂದು ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಕರೆ ನೀಡಿದರು.

ಮಡಿಕೇರಿ: ನಮ್ಮ ಪೂರ್ವಜರು ನಮ್ಮ ನೆಲ ಮತ್ತು ಸಂಸ್ಕೃತಿಯನ್ನು ರಕ್ಷಿಸಲು ಹೋರಾಡಿದರು, ಈಗ ತಮ್ಮ ಹಕ್ಕುಗಳಿಗಾಗಿ ಕೊಡವ ಸಮುದಾಯ ಒಗ್ಗಟ್ಟಾಗಿ ಹೋರಾಡಬೇಕು ಎಂದು ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಕರೆ ನೀಡಿದರು.

ಕನೆಕ್ಟಿಂಗ್ ಕೊಡವ ಟ್ರಸ್ಟ್ ವತಿಯಿಂದ ಮಡಿಕೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಗ್ಲೋಬಲ್ ಕೊಡವ ಶೃಂಗಸಭೆಯನ್ನು ಉದ್ಘಾಟಿಸಿ  ಮಾತನಾಡಿದ ಅವರು, ನಿಮ್ಮ ಹಕ್ಕುಗಳಿಗಾಗಿ ಹೋರಾಡಿ ಮತ್ತು ಇತರ ಸಮುದಾಯಗಳನ್ನು ಅಥವಾ ಧರ್ಮಗಳನ್ನು ಅಪಹಾಸ್ಯ ಮಾಡಬೇಡಿ ಪ್ರತಿ ಸಮುದಾಯವನ್ನು ಪ್ರೀತಿಸಿ ಎಂದು ಹೇಳಿದ್ದಾರೆ.

ಕೊಡವ ಸಮುದಾಯವನ್ನು ಒಗ್ಗೂಡಿಸುವಲ್ಲಿ ಟ್ರಸ್ಟ್‌ನ ಪ್ರಯತ್ನವನ್ನು ಶ್ಲಾಘಿಸಿದರು. ಸಮುದಾಯಗಳ ಅಗತ್ಯತೆಗಳ ನ್ಯಾಯಸಮ್ಮತ ಧ್ವನಿಗಾಗಿ ಅಡಿಪಾಯ ಹಾಕುವಂತೆ ಒತ್ತಾಯಿಸಿದ ಅವರು, ನಮ್ಮ ಹಕ್ಕುಗಳು ಯಾವುವು ಮತ್ತು ಸಮುದಾಯವನ್ನು ಸಂರಕ್ಷಿಸಲು ಏನು ಮಾಡಬೇಕು ಎಂಬ ಬಗ್ಗೆ ಈ ಶೃಂಗಸಭೆಯಲ್ಲಿ ನಿರ್ಣಯಗಳು ರೂಪುಗೊಳ್ಳಲಿ. ಈ ನಿರ್ಣಯಗಳನ್ನು ಸಾಧಿಸಲು ನನ್ನ ಸಂಪೂರ್ಣ ಬೆಂಬಲವನ್ನು ನೀಡುತ್ತೇನೆ ಎಂದು ಅವರು ಭರವಸೆ ನೀಡಿದರು.

ಹಕ್ಕುಗಳ ಹೋರಾಟಕ್ಕೆ ಬೆಂಬಲ ಪಡೆಯಲು ಸಮುದಾಯದಲ್ಲಿ ರಾಜಕೀಯ ಪ್ರಬುದ್ಧತೆಯ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು. ಜಮ್ಮಾ ಭೂಮಿಗೆ ಸಂಬಂಧಿಸಿದ ಭೂ ಸಮಸ್ಯೆಗಳು, ಬಂದೂಕು ಹಕ್ಕುಗಳ ಸಂರಕ್ಷಣೆ ಮತ್ತು ಜನಾಂಗೀಯ ಅಧ್ಯಯನಗಳು ಪ್ರಬಲ ನಾಯಕತ್ವದಲ್ಲಿ ಒಗ್ಗಟ್ಟಿನಿಂದ ಹೋರಾಡಬೇಕಾದ ಸಮಸ್ಯೆಗಳಾಗಿವೆ ಎಂದು ಅವರು  ಒತ್ತಿ ಹೇಳಿದರು. ನೆಲ, ನಿಸರ್ಗ, ಸಂಸ್ಕೃತಿ, ಸಂಬಂಧಗಳ ಸಂರಕ್ಷಣೆಗೆ ಒತ್ತಾಯಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎಂಎಲ್ ಸಿ ಶಾಂತಾರಾಮ ಬುಡ್ನ ಸಿದ್ದಿ ಮಾತನಾಡಿ, ಯುವಕರು ಸಮಾಜಕ್ಕಾಗಿ ದುಡಿಯಲು ಮುಂದಾಗಬೇಕು. ಕೊಡವರ ಎಸ್ಟಿ ಟ್ಯಾಗ್ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT