ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸುತ್ತಿರುವ ಎಂ.ಎ.ಸಲೀಂ. 
ರಾಜ್ಯ

ಸಂಚಾರ ನಿಯಮ ಪಾಲಿಸಿ: ವಿದ್ಯಾರ್ಥಿಗಳಿಗೆ ಟ್ರಾಫಿಕ್ ಮಂತ್ರ ಹೇಳಿಕೊಟ್ಟ ವಿಶೇಷ ಆಯುಕ್ತ ಸಲೀಂ

ನಾಳೆ ನೀವು ನಾಗರೀಕರಾಗುತ್ತೀರಿ, ಟ್ರಾಫಿಕ್ ನಿಯಮಗಳ ಅನುಸರಿಸುವುದನ್ನು ಕಲಿಯಿರಿ, ಅದು ನೀವು ನಮಗೆ ನೀಡುವ ದೊಡ್ಡ ಧನ್ಯವಾದ ಹಾಗೂ ಕೊಡುಗೆಯಾಗಿದೆ ಎಂದು ವಿದ್ಯಾರ್ಥಿಗಳಿಗೆ ವಿಶೇಷ ಆಯುಕ್ತ (ಸಂಚಾರ) ಎಂ.ಎ.ಸಲೀಂ ಅವರು ಹೇಳಿದ್ದಾರೆ.

ಬೆಂಗಳೂರು: ನಾಳೆ ನೀವು ನಾಗರೀಕರಾಗುತ್ತೀರಿ, ಟ್ರಾಫಿಕ್ ನಿಯಮಗಳ ಅನುಸರಿಸುವುದನ್ನು ಕಲಿಯಿರಿ, ಅದು ನೀವು ನಮಗೆ ನೀಡುವ ದೊಡ್ಡ ಧನ್ಯವಾದ ಹಾಗೂ ಕೊಡುಗೆಯಾಗಿದೆ ಎಂದು ವಿದ್ಯಾರ್ಥಿಗಳಿಗೆ ವಿಶೇಷ ಆಯುಕ್ತ (ಸಂಚಾರ) ಎಂ.ಎ.ಸಲೀಂ ಅವರು ಹೇಳಿದ್ದಾರೆ.

ಚಿಲ್ಡ್ರನ್ಸ್ ಮೂವ್‌ಮೆಂಟ್ ಫಾರ್ ಸಿವಿಕ್ ಅವೇರ್ನೆಸ್ (ಸಿಎಂಸಿಎ) ಆಯೋಜಿಸಿದ್ದ 15ನೇ ‘ಸೆಲೆಬ್ರೇಟಿಂಗ್ ನಮ್ಮ ಬೆಂಗಳೂರಿನ ಟ್ರಾಫಿಕ್ ಪೊಲೀಸ್’ ಕಾರ್ಯಕ್ರಮದ ಬೌರಿಂಗ್ ಇನ್‌ಸ್ಟಿಟ್ಯೂಟ್ ಪಕ್ಕದಲ್ಲಿರುವ ಬೆಂಗಳೂರು ಟ್ರಾಫಿಕ್ ಪಾರ್ಕ್‌ನಲ್ಲಿ ಮಂಗಳವಾರ ನಡೆಯಿತು. ಕಾರ್ಯಕ್ರಮದಲ್ಲಿ 50 ವಿದ್ಯಾರ್ಥಿಗಳು ಹಾಗೂ 50 ಸಂಚಾರ ಪೊಲೀಸರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಗರದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಟ್ರಾಫಿಕ್ ಪೊಲೀಸರಿಗೆ ಧನ್ಯವಾದ ಅರ್ಪಿಸಿದರು.

ಈ ವೇಳೆ ಮಾತನಾಡಿದ ವಿಶೇಷ ಆಯುಕ್ತ (ಸಂಚಾರ) ಎಂ.ಎ.ಸಲೀಂ ಅವರು, ಇದು ನನ್ನ ಪಾಲಿಗೆ ಸ್ಮರಣೀಯ ಕ್ಷಣವಾಗಿದೆ, ಈ ಹಿಂದೆಯೂ ಇಂತಹ ಕಾರ್ಯಕ್ರಮಗಳನ್ನು ಸಿಎಂಸಿಎ ನಡೆಸಿದೆ. ಸಂಚಾರಿ ಪೊಲೀಸರ ಕಾರ್ಯವನ್ನು ಸಿಎಂಸಿಎ ಗುರುತಿಸುತ್ತಲೇ ಬಂದಿದೆ. ಇಂತಹ ಕಾರ್ಯಕ್ರಮಗಳು ನಮ್ಮ ಸ್ಥೈರ್ಯವನ್ನು ಹೆಚ್ಚಿಸುತ್ತದೆ ಮತ್ತು ಉತ್ತಮವಾಗಿ ಕೆಲಸ ಮಾಡಲು ನಮಗೆ ಸಹಾಯ ಮಾಡುತ್ತದೆ. ಕಳೆದ ಎರಡು ದಶಕಗಳಲ್ಲಿ, ನಗರವು ಅಗಾಧವಾದ ಬೆಳವಣಿಗೆಯನ್ನು ಕಂಡಿದೆ. 10 ದಶಲಕ್ಷಕ್ಕೂ ಹೆಚ್ಚು ವಾಹನಗಳು ರಸ್ತೆಗಿಳಿದಿವೆ. ಟ್ರಾಫಿಕ್ ಪೊಲೀಸರ ಕೆಲಸವು ತುಂಬಾ ಕ್ಲಿಷ್ಚಕರವಾದದ್ದು. ಆದರೂ ನಾವು ಸೇವೆಗೆ ಬದ್ಧರಾಗಿದ್ದೇವೆಂದು ಹೇಳಿದ್ದಾರೆ.

ನೀವು (ವಿದ್ಯಾರ್ಥಿಗಳು) ನಾಳೆ ನಾಗರಿಕರಾಗುತ್ತೀರಿ ಮತ್ತು ಟ್ರಾಫಿಕ್ ನಿಯಮಗಳನ್ನು ಅನುಸರಿುವಂತೆ ನಾನು ನಿಮ್ಮನ್ನು ಪ್ರೋತ್ಸಾಹಿಸುತ್ತೇನೆ, ಅದು ನೀವು ನಮಗೆ ಮಾಡಬಹುದಾದ ದೊಡ್ಡ ಧನ್ಯವಾದ ಮತ್ತು ಕೊಡುಗೆಯಾಗಿದೆ ಎಂದು ತಿಳಿಸಿದರು.

ಇದೇ ವೇಳೆ ಸಿಎಂಸಿಎ ಟ್ರಾಫಿಕ್ ಪೊಲೀಸರ ಪಾತ್ರವನ್ನು ಅರ್ಥಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮಗಳನ್ನೂ ನಡೆಸಿದರು. ವಿದ್ಯಾರ್ಥಿಗಳು ವಿವಿಧ ಟ್ರಾಫಿಕ್ ಪೊಲೀಸ್ ಠಾಣೆಗಳು ಮತ್ತು ಜಂಕ್ಷನ್‌ಗಳಿಗೆ ಭೇಟಿ ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

BMTC ಬಸ್ ಚಾಲಕನಿಗೆ ಫಿಡ್ಸ್, ಚಿನ್ನಸ್ವಾಮಿ ಕ್ರೀಡಾಂಗಣ ರಸ್ತೆಯಲ್ಲಿ ಸರಣಿ ಅಪಘಾತ

ಬೆಂಗಳೂರು: ರಾತ್ರಿಯಿಡೀ ಸುರಿದ ಮಳೆಯಿಂದ ಹಲವೆಡೆ ಜಲಾವೃತ, ಸಂಚಾರ ದಟ್ಟಣೆ, ಇಂದಿನ IMD ವರದಿ!

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

SCROLL FOR NEXT