ರಾಜ್ಯ

ವಿಧಾನಸಭಾ ಚುನಾವಣೆ: ಕಾರ್ಕಳದಲ್ಲಿ ಪ್ರಮೋದ್ ಮುತಾಲಿಕ್ ಬೆಂಬಲಿಸುವಂತೆ ಬಿಜೆಪಿಗೆ ಶ್ರೀರಾಮ ಸೇನೆ ಆಗ್ರಹ

Manjula VN

ಉಡುಪಿ/ಮಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕಾರ್ಕಳ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸದೆ ಪ್ರಮೋದ್ ಮುತಾಲಿಕ್ ಅವರನ್ನು ಬೆಂಬಲಿಸುವಂತೆ ಶ್ರೀರಾಮ ಸೇನೆಯ ಉಡುಪಿ ಮತ್ತು ದಕ್ಷಿಣ ಕನ್ನಡ ಘಟಕಗಳು ಬಿಜೆಪಿಗೆ ಒತ್ತಾಯಿಸಿವೆ.

ಕಾರ್ಕಳದಿಂದ ಮುತಾಲಿಕ್ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂದು ಶ್ರೀರಾಮ ಸೇನೆಯ ಉಡುಪಿ ಘಟಕದ ವಕ್ತಾರ ಶರತ್ ಪೂಜಾರಿ ತಿಳಿಸಿದ್ದಾರೆ.

ಕರಾವಳಿ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಅಸ್ತಿತ್ವಕ್ಕೆ ಬಂದಿದ್ದರೆ ಅದಕ್ಕೆ ಮುತಾಲಿಕ್ ಕೊಡುಗೆಯೇ ಕಾರಣ ಎಂದು ತಿಳಿಸಿದ್ದಾರೆ.

ಶರತ್ ಪೂಜಾರಿ ಅವರ ಈ ಹೇಳಿಕೆಗೆ ಕಾರ್ಕಳ ಬಿಜೆಪಿ ಮುಖಂಡ ಬಿ ಮಣಿರಾಜ್ ಶೆಟ್ಟಿ ತಿರುಗೇಟು ನೀಡಿದ್ದಾರೆ.

ಕಾರ್ಕಳದಿಂದ ಸ್ವತಂತ್ರವಾಗಿ ಸ್ಪರ್ಧಿಸಿದರೆ ಮುತಾಲಿಕ್ 3 ಸಾವಿರ ಮತಗಳನ್ನು ಗಳಿಸಲು ಸಾಧ್ಯವಾಗದಿರಬಹುದು. 'ಇದು ಮುತಾಲಿಕ್ ಮತ್ತು ಅವರ ತಂಡದ ಒತ್ತಡದ ತಂತ್ರವಲ್ಲದೆ ಬೇರೇನೂ ಅಲ್ಲ. ಕಾಂಗ್ರೆಸ್ ಅವರನ್ನು ಬೆಂಬಲಿಸುತ್ತಿದೆ, ಮುತಾಲಿಕ್ ಅವರ ತಂಡವನ್ನು ಈಗ ಕಾಂಗ್ರೆಸ್‌ನ ಬಿ ಟೀಮ್ ಎಂದು ಕರೆಯಬಹುದು ಎಂದು ಹೇಳಿದ್ದಾರೆ.

ಇದೇ ವೇಳೆ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಶ್ರೀರಾಮ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ್ ಶೆಟ್ಟಿ ಅಡ್ಯಾರ್ ಅವರು, ಭ್ರಷ್ಟಾಚಾರ, ಹಿಂದೂ ವಿರೋಧಿ ನೀತಿ, ಹಿಂದುತ್ವ ನಾಯಕರ ನಿರ್ಲಕ್ಷ್ಯ, ಅವರ ವಿರುದ್ಧ ಸುಳ್ಳು ಕೇಸ್‌ಗಳಿಂದ ಹಿಂದೂ ಸಮುದಾಯ ಅಸಮಾಧಾನಗೊಂಡಿದ್ದು, ತಪ್ಪಿತಸ್ಥರ ಹುಡುಕುವ ಕಾರ್ಯವಾಗುತ್ತಿದೆ. ಮುತಾಲಿಕ್ ಪ್ರಾಮಾಣಿಕ ಅಭ್ಯರ್ಥಿಯಾಗಿದ್ದಾರೆಂದು ಹೇಳಿದ್ದಾರೆ.

SCROLL FOR NEXT