ಬೆಂಗಳೂರಿನಲ್ಲಿ ನಡೆದ ಭಾರತ ಇಂಧನ ಸಪ್ತಾಹದಲ್ಲಿ ಪ್ರಧಾನಿ ಮೋದಿಯವರಿಗೆ ಪ್ಲಾಸ್ಟಿಕ್ ಬಾಟಲಿಯಿಂದ ತಯಾರಿಸಿದ ಕೋಟ್ ಉಡುಗೊರೆಯಾಗಿ ನೀಡಲಾಯಿತು. 
ರಾಜ್ಯ

ಪ್ಲಾಸ್ಟಿಕ್ ಬಾಟಲಿ ಮರುಬಳಕೆಯಿಂದ ಫ್ಯಾಶನ್ ಉಡುಪುಗಳ ತಯಾರಿ; ಪ್ರಕ್ರಿಯೆ ಹೇಗೆ? ಇಲ್ಲಿದೆ ಮಾಹಿತಿ...

ತಮಿಳುನಾಡು ಮೂಲದ ಗಾರ್ಮೆಂಟ್ ಸಂಶೋಧನಾ ಕಂಪನಿಯು ಮರುಬಳಕೆಯ PET-ಪಾಲಿಥಿಲೀನ್ ಟೆರೆಫ್ತಾಲೇಟ್ ಒಂದು ಬಾರಿ ಬಳಸಿ ಎಸೆಯುವ ಪ್ಲಾಸ್ಟಿಕ್ ಬಾಟಲಿಗಳಿಂದ ತಯಾರಿಸಿದ ಬಟ್ಟೆಗಳ ಉತ್ಪಾದನೆ ಮತ್ತು ಖರೀದಿಯನ್ನು ಜನಪ್ರಿಯಗೊಳಿಸಲು ಮತ್ತು ಜನರಿಗೆ ಆರ್ಥಿಕಸ್ನೇಹಿಯಾಗಿಸಲು ಪ್ರಯತ್ನಿಸುತ್ತಿದೆ. 

ಬೆಂಗಳೂರು: ತಮಿಳುನಾಡು ಮೂಲದ ಗಾರ್ಮೆಂಟ್ ಸಂಶೋಧನಾ ಕಂಪನಿಯು ಮರುಬಳಕೆಯ PET-ಪಾಲಿಥಿಲೀನ್ ಟೆರೆಫ್ತಾಲೇಟ್ ಒಂದು ಬಾರಿ ಬಳಸಿ ಎಸೆಯುವ ಪ್ಲಾಸ್ಟಿಕ್ ಬಾಟಲಿಗಳಿಂದ ತಯಾರಿಸಿದ ಬಟ್ಟೆಗಳ ಉತ್ಪಾದನೆ ಮತ್ತು ಖರೀದಿಯನ್ನು ಜನಪ್ರಿಯಗೊಳಿಸಲು ಮತ್ತು ಜನರಿಗೆ ಆರ್ಥಿಕಸ್ನೇಹಿಯಾಗಿಸಲು ಪ್ರಯತ್ನಿಸುತ್ತಿದೆ. 

ಈ ಕಂಪೆನಿಯ ಉತ್ಪನ್ನಗಳ ಟೀ ಶರ್ಟ್‌ಗಳು, ಜಾಕೆಟ್‌ಗಳು ಮತ್ತು ಇತರ ಫ್ಯಾಶನ್ ಉತ್ಪನ್ನಗಳು ಬೆಂಗಳೂರಿನಲ್ಲಿ ನಡೆಯುತ್ತಿರುವ ಭಾರತ ಇಂಧನ ಸಪ್ತಾಹದಲ್ಲಿ ಹಾಟ್‌ಕೇಕ್‌ಗಳಂತ ಮಾರಾಟವಾಗುತ್ತಿವೆ. ಅನೇಕ ಕಂಪೆನಿಗಳಿಗೆ ದೊಡ್ಡ ಮಟ್ಟದಲ್ಲಿ ಉತ್ಪಾದಿಸಿ ಕೊಡಲು ಇವರಿಗೆ ಆರ್ಡರ್ ಗಳು ಕೂಡ ಬಂದಿವೆಯಂತೆ. 

ಜವಳಿ ಕ್ಷೇತ್ರದಲ್ಲಿದ್ದ ತಮಿಳು ನಾಡು ಮೂಲದ ಐಐಟಿಯ ಪಾಲಿಮರ್ ತಂತ್ರಜ್ಞ ಸೆಂಥಿಲ್ ಶಂಕರ್ ಅವರು ಬಳಸಿ ಪರಿಸರಕ್ಕೆ ಎಸೆಯುವ ಪ್ಲಾಸ್ಟಿಕ್ ಬಾಟಲಿಗಳನ್ನು ಕಂಡು ಅವರಿಗೆ ಬೇಸರವಾಗುತ್ತಿತ್ತಂತೆ. ಈ ಬಾಟಲ್ ಗಳಿಂದ ಪರಿಸರಕ್ಕೆ ಎಷ್ಟು ಹಾನಿಯಿದೆ ಎಂದು ಅವರು ಯೋಚಿಸುತ್ತಿದ್ದರಂತೆ. ಇದಕ್ಕೆ ಏನಾದರೊಂದು ಪರಿಹಾರ ಕಂಡುಹಿಡಿಯಲೇಬೇಕು ಎಂದು ಯೋಚಿಸುತ್ತಿದ್ದರಂತೆ. 2020 ರಲ್ಲಿ, ಸೆಂಥಿಲ್ ತಮ್ಮ ತಂದೆ ಶಂಕರ್ ಜೊತೆಗೆ 'ಇಕೋಲೈನ್' ಎಂಬ ಉದ್ಯಮವನ್ನು ಪ್ರಾರಂಭಿಸಿದರು, ಮರುಬಳಕೆಯ PET ಬಾಟಲಿಗಳನ್ನು ಫ್ಯಾಶನ್ ಉಡುಪುಗಳಾಗಿ ಪರಿವರ್ತಿಸುವ ಕೈಗಾರಿಕೆಯಾಗಿದೆ. 

ಪ್ಲಾಸ್ಟಿಕ್ ಬಾಟಲಿಗಳಿಂದ ತಯಾರಿಸಲ್ಪಟ್ಟ ಬಟ್ಟೆ

ಪ್ರಕ್ರಿಯೆ ಹೇಗೆ?: ಪ್ಲಾಸ್ಟಿಕ್ ಬಾಟಲಿಗಳನ್ನು ಸುಮಾರು 300 ಡಿಗ್ರಿ ಸೆಲ್ಸಿಯಸ್‌ನಲ್ಲಿ ಕರಗಿಸಲಾಗುತ್ತದೆ. ನಂತರ ಬಣ್ಣ ಹಾಕಿ ನೂಲುಗಳಾಗಿ ಪರಿವರ್ತಿಸಲಾಗುತ್ತದೆ. ಈ ನೂಲುಗಳನ್ನು ನಂತರ ಫ್ಯಾಬ್ರಿಕ್ ವಸ್ತುವಾಗಿ ಪರಿವರ್ತಿಸಲಾಗುತ್ತದೆ. ನಂತರ ವಿವಿಧ ಉಡುಪುಗಳಾಗಿ ಹೊಲಿಯಲಾಗುತ್ತದೆ ಎಂದು ಸೆಂಥಿಲ್ ಹೇಳಿದರು. 6 ಪ್ಲಾಸ್ಟಿಕ್ ಬಾಟಲಿಗಳಿಂದ ಒಂದು ಟಿ-ಶರ್ಟ್ ತಯಾರಿಸಬಹುದಂತೆ. 

ಪಾರಂಪರಿಕ ಜವಳಿ ಉದ್ದಿಮೆಯು ಜಲಸಾಂದ್ರತೆಯಾಗಿದ್ದರೆ, ಈ ವಿನೂತನ ತಂತ್ರಜ್ಞಾನದಲ್ಲಿ ಒಂದೇ ಒಂದು ಹನಿ ನೀರು ಬಳಕೆಯಾಗುವುದಿಲ್ಲ ಎಂದು ಸೆಂಥಿಲ್ ಹೇಳಿದರು.

ಸೆಂಥಿಲ್ ಏನು ಹೇಳುತ್ತಾರೆ?: ನಮ್ಮ ಉತ್ಪನ್ನಗಳು ಆನ್‌ಲೈನ್‌ನಲ್ಲಿ ಲಭ್ಯವಿವೆ. ಗ್ರಾಹಕರ ಮತ್ತು ಕಂಪನಿಯ ಅಗತ್ಯಗಳನ್ನು ಆಧರಿಸಿ ನಾವು ಉತ್ಪನ್ನವನ್ನು ತಯಾರಿಸುತ್ತೇವೆ. ಬಟ್ಟೆಗಳು 350 ರೂಪಾಯಿಗಳಿಂದ ಆರಂಭವಾಗಿ 2 ಸಾವಿರದವರೆಗೆ ಇರುತ್ತದೆ. ನಾವು ಫ್ಯಾಷನ್ ಉದ್ಯಮವನ್ನು ಹೆಚ್ಚು ಸಮರ್ಥನೀಯವಾಗಿಸುವ ಗುರಿಯನ್ನು ಹೊಂದಿದ್ದೇವೆ. ಜಗತ್ತಿನಾದ್ಯಂತ ಪ್ಲಾಸ್ಟಿಕ್ ಬಾಟಲಿಗಳನ್ನು ಸೂಕ್ತವಾಗಿ ವಿಲೇವಾರಿಯಾಗಬೇಕು, ಪರಿಸರಕ್ಕೆ ಹಾನಿಯುಂಟಾಗಬಾರದು ಎಂಬುದು ನಮ್ಮ ಉದ್ದೇಶವಾಗಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ?

ಮಂಗಳೂರು: Muslim ಕ್ಯಾಬ್ ಚಾಲಕನಿಗೆ 'ಭಯೋತ್ಪಾದಕ' ಎಂದು ಕರೆದಿದ್ದ ಕೇರಳ ನಟನ ಬಂಧನ!

ಅಯೋಧ್ಯೆಯಲ್ಲಿ ಮತ್ತೊಂದು 'ನಿಗೂಢ' ಸ್ಫೋಟ: ಸಾವಿನ ಸಂಖ್ಯೆ 6ಕ್ಕೆ ಏರಿಕೆ, Video Viral

BMTC ಬಸ್ ಚಾಲಕನಿಗೆ ಫಿಡ್ಸ್, ಚಿನ್ನಸ್ವಾಮಿ ಕ್ರೀಡಾಂಗಣ ರಸ್ತೆಯಲ್ಲಿ ಸರಣಿ ಅಪಘಾತ

ಬೆಂಗಳೂರು: ರಾತ್ರಿಯಿಡೀ ಸುರಿದ ಮಳೆಯಿಂದ ಹಲವೆಡೆ ಜಲಾವೃತ, ಸಂಚಾರ ದಟ್ಟಣೆ, ಇಂದಿನ IMD ವರದಿ!

SCROLL FOR NEXT