ರಾಜ್ಯ

ಬೆಂಗಳೂರಿನಲ್ಲಿ ISD, NIA ಜಂಟಿ ಕಾರ್ಯಾಚರಣೆ; ಶಂಕಿತ ಭಯೋತ್ಪಾದಕ ಆರೀಫ್ ಬಂಧನ

Srinivasamurthy VN

ಬೆಂಗಳೂರು: ಬೆಂಗಳೂರಿನಲ್ಲಿ  ಐಎಸ್ ಡಿ ಮತ್ತು ರಾಷ್ಟ್ರೀಯ ತನಿಖಾ ದಳ ಜಂಟಿ ಕಾರ್ಯಾಚರಣೆ ನಡೆಸಿದ್ದು, ಐಸಿಸ್ ಉಗ್ರ ಸಂಘಟನೆ ಸಂಪರ್ಕ ಹೊಂದಿದ್ದ ಶಂಕಿತ ಉಗ್ರನನ್ನು ಬಂಧಿಸಿದೆ.

ಐಎಸ್​ಡಿ ಮತ್ತು ಕೇಂದ್ರ ತನಿಖಾ ಸಂಸ್ಥೆಗಳಿಂದ ಕಾರ್ಯಾಚರಣೆಯಿಂದ ಥಣಿಸಂದ್ರದ ಮಂಜುನಾಥ ನಗರದಲ್ಲಿ ವಾಸವಿದ್ದ ಶಂಕಿತ ಉಗ್ರ ಆರೀಫ್ ಎಂಬಾತನನ್ನು ಬಂಧಿಸಿದ್ದಾರೆ. ಮೂಲಗಳ ಪ್ರಕಾರ 2 ವರ್ಷಗಳಿಂದ ಅಲ್​ಖೈದಾ(ಉಗ್ರ ಸಂಘಟನೆ) ಜೊತೆ ಸಂಪರ್ಕದಲ್ಲಿದ್ದ ಆರೀಫ್​, ಟೆಲಿಗ್ರಾಮ್ ಹಾಗೂ ಡಾರ್ಕ್ ನೆಟ್ ಮೂಲಕ ಅಲ್​ಖೈದಾ ಗ್ರೂಪ್​ಗಳಲ್ಲಿ ಸಕ್ರಿಯನಾಗಿದ್ದನು. ಸಾಫ್ಟ್‌ವೇರ್ ಕಂಪನಿಯಲ್ಲಿ ಇದ್ದ ಇತ, ವರ್ಕ್ ಫ್ರಮ್​ ಹೋಮ್ ಮೂಲಕ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

ಮುಂದಿನ ತಿಂಗಳು​ ಇರಾಕ್​ ಮೂಲಕ ಸಿರಿಯಾ ಹಾಗೂ ಆಫ್ಘನ್​ಗೆ ಹೋಗಲು ಪ್ಲ್ಯಾನ್ ಮಾಡಿದ್ದ ಇತ ಫ್ಲೈಟ್ ಟಿಕೆಟ್​ಗೆ ಎಲ್ಲಾ ಸಿದ್ಧತೆ ಸಹ ಮಾಡಿಕೊಂಡಿದ್ದಾನೆ. ಈ ಹಿಂದೆ ಕೂಡ ಸಿರಿಯಾಕ್ಕೆ ಇರಾಕ್ ಮೂಲಕ ತೆರಳಲು ಯತ್ನಿಸಿದ್ದ. ಆದರೆ ಎರಡೂ ದೇಶಗಳಿಂದ ಒಪ್ಪಿಗೆ ಇಲ್ಲದ ಕಾರಣ ಹೋಗಲು ಸಾದ್ಯವಾಗಿರಲಿಲ್ಲ. ಈಗ ಮಾರ್ಚ್​ನಲ್ಲಿ ಮತ್ತೆ ಇರಾಕ್ ಮೂಲಕ ಸಿರಿಯಾ ಹಾಗೂ ಅಫ್ಘಾನ್​ಗೆ ತರಳಲು ಪ್ಲಾನ್ ಮಾಡಿ ಫ್ಲೈಟ್ ಟಿಕೆಟ್ ರೆಡಿಯಾಗುತಿತ್ತು. ಈ ಎಲ್ಲಾ ಖಚಿತ ಮಾಹಿತಿ ಮೇರೆಗೆ ಶಂಕಿತ ಭಯೋತ್ಪಾದಕ ಆರೀಫ್​ನನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಲಾಗಿದೆ. ತನಿಖೆ ಬಳಿಕ ಮತ್ತಷ್ಟು ವಿಚಾರ ಬಯಲಿಗೆ ಬರಲಿದೆ.

ಮುಂಬೈನಲ್ಲೂ ಸಂಪರ್ಕ
ರಾಷ್ಟ್ರೀಯ ತನಿಖಾ ಸಂಸ್ಥೆ (NIA) ನೀಡಿರುವ ಮಾಹಿತಿ ಅನ್ವಯ ಬಂಧಿತ ಆರೋಪಿ ಆರಿಫ್ ಬೆಂಗಳೂರು ಮಾತ್ರವಲ್ಲದೇ ಮುಂಬೈನಲ್ಲೂ ಸಂಪರ್ಕ ಹೊಂದಿದ್ದ. ಬೆಂಗಳೂರು ಮತ್ತು ಮುಂಬೈನಲ್ಲಿ ಐಸಿಸ್ ಮತ್ತು ಅಲ್-ಖೈದಾ ಜೊತೆ ಸಂಪರ್ಕ ಏರ್ಪಡಿಸಿಕೊಂಡಿದ್ದ.  ಹೀಗಾಗಿ ಅತನನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ಆತನಿಂದ ಎನ್‌ಕ್ರಿಪ್ಟ್ ಮಾಡಲಾದ ಸಂವಹನ ವೇದಿಕೆಗಳ ಮೂಲಕ AQIS ಗೆ ಸಂಯೋಜಿತವಾಗಿರುವ ವಿದೇಶಿ ಮೂಲದ ಆನ್‌ಲೈನ್ ಹ್ಯಾಂಡ್ಲರ್‌ಗಳೊಂದಿಗೆ 2 ಶಂಕಿತರು ಸಂಪರ್ಕದಲ್ಲಿದ್ದಾರೆ ಎಂದು ಒಳಹರಿವು ಬಹಿರಂಗಪಡಿಸಿದೆ. ಡಿಜಿಟಲ್ ಸಾಧನಗಳು ಮತ್ತು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಹಲವೆಡೆ ಶೋಧ
ಇಂದು ಮುಂಜಾನೆಯೇ ಅಧಿಕಾರಿಗಳು ಬೆಂಗಳೂರಿನ ಥಣಿಸಂದ್ರ, ಮುಂಬೈನ ಪಾಲ್ಘರ್, ಥಾಣೆ ಶೋಧ ನಡೆಸಿದ್ದರು.
 

SCROLL FOR NEXT