ರಾಜ್ಯ

ರಾಜ್ಯದಲ್ಲಿ ಆನೆ ಕಾರ್ಯಪಡೆ ತಂಡಕ್ಕೆ ಮೂರು ತಿಂಗಳಿಂದ ಸಂಬಳ ನೀಡಿಲ್ಲ!

Vishwanath S

ಮಡಿಕೇರಿ: ರಾಜ್ಯದ ಘರ್ಷಣೆಯ ಪ್ರದೇಶಗಳಲ್ಲಿ ಆನೆಗಳ ಹಾವಳಿಯನ್ನು ತಡೆಯುವ ಸಲುವಾಗಿ ರಾಜ್ಯ ಸರ್ಕಾರವು ಪ್ರಾಥಮಿಕವಾಗಿ ಕೊಡಗು, ಚಿಕ್ಕಮಗಳೂರು, ಹಾಸನ ಮತ್ತು ಮೈಸೂರು ಜಿಲ್ಲೆಗಳಲ್ಲಿ ಆನೆ ಕಾರ್ಯಪಡೆ(ಇಟಿಎಫ್) ಅನ್ನು ನವೆಂಬರ್ ತಿಂಗಳಲ್ಲಿ ರಚಿಸಿತು.

ಇಟಿಎಫ್ ತಂಡಗಳು ರಚನೆಯಾದಾಗಿನಿಂದಲೂ ಕಾರ್ಯನಿರ್ವಹಿಸುತ್ತಿವೆ. ಆದರೆ ಸುಮಾರು ಮೂರು ತಿಂಗಳಿನಿಂದ ಅಧಿಕಾರಿಗಳಿಗೆ ಸಂಬಳ ನೀಡಿಲ್ಲ. ಇನ್ನು ಒಂದು ತಿಂಗಳ ಹಿಂದೆಯೇ ಆನೆ-ಸಂಘರ್ಷದ ಜಿಲ್ಲೆಗಳಿಗೆ ಚಾಮರಾಜನಗರ ಜಿಲ್ಲೆ ಕೂಡ ಸೇರ್ಪಡೆಯಾಗಿದ್ದು, ಇಟಿಎಫ್ ತಂಡವನ್ನು ಸ್ಥಾಪಿಸಲಾಗಿದೆ.

ಇಟಿಎಫ್ ಅಡಿಯಲ್ಲಿ ಪ್ರತಿ ಜಿಲ್ಲೆಗೆ ಉಪ ಅರಣ್ಯಾಧಿಕಾರಿ, ರೇಂಜ್ ಫಾರೆಸ್ಟ್ ಆಫೀಸರ್, ನಾಲ್ಕು ಉಪ ವಲಯ ಅರಣ್ಯಾಧಿಕಾರಿಗಳು ಮತ್ತು ಎಂಟು ಅರಣ್ಯ ರಕ್ಷಕರನ್ನು ಶಾಶ್ವತ ಆಧಾರದ ಮೇಲೆ ನೇಮಿಸಲಾಗಿದೆ.

ಇಟಿಎಫ್‌ಗೆ 36 ಅರಣ್ಯ ವೀಕ್ಷಕರನ್ನು ಹೊರಗುತ್ತಿಗೆ ಸಿಬ್ಬಂದಿಯಾಗಿ ನೇಮಿಸಲಾಗಿದೆ. ಕೊಡಗಿನಲ್ಲಿ, ಇಟಿಎಫ್ ತಂಡವು ಪ್ರಾರಂಭದಿಂದಲೂ ಸಕ್ರಿಯವಾಗಿದೆ ಮತ್ತು ಇತ್ತೀಚೆಗೆ ಪೊನ್ನಂಪೇಟೆ ವ್ಯಾಪ್ತಿಯಲ್ಲಿ ಇಬ್ಬರು ಕಾರ್ಮಿಕರ ಜೀವವನ್ನು ಬಲಿತೆಗೆದುಕೊಂಡ ಸಂಘರ್ಷ ಹುಲಿಯನ್ನು ಸೆರೆಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು.

ಆನೆ ಸಂಘರ್ಷದ ಪ್ರದೇಶಗಳಲ್ಲಿ ಬೆಂಬಲ ನೀಡುವುದರ ಜೊತೆಗೆ, ಕೊಡಗಿನ ತಂಡವು ಟಿ ನರಸೀಪುರದಲ್ಲಿ ಸಂಘರ್ಷ ಚಿರತೆಯನ್ನು ಸೆರೆಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು.

ಆದರೆ, ಕಳೆದ ವರ್ಷ ನವೆಂಬರ್ 30ರಿಂದ ಕೆಲಸಕ್ಕೆ ಹಾಜರಾಗಿದ್ದರೂ ಯಾವೊಬ್ಬ ಅಧಿಕಾರಿಗೂ ವೇತನ ಪಾವತಿಯಾಗಿಲ್ಲ. ಇಟಿಎಫ್‌ನ ಹೊರಗುತ್ತಿಗೆ ಸಿಬ್ಬಂದಿಗಳು ವೇತನ ಸ್ವೀಕರಿಸಿದ್ದರೆ, ಇಟಿಎಫ್‌ನ ಯಾವುದೇ ಅಧಿಕಾರಿಗಳಿಗೆ ಇನ್ನು ಸಿಕ್ಕಿಲ್ಲ.

"ನಮಗೆ ಹೆಚ್ಚುವರಿ ಭತ್ಯೆ ಮತ್ತು ಇತರ ಪ್ರಯೋಜನಗಳ ಭರವಸೆ ನೀಡಲಾಯಿತು. ಆದರೆ ಮೂಲ ವೇತನ ಸಿಕ್ಕಿಲ್ಲ. ಸುಮಾರು ಮೂರು ತಿಂಗಳ ಕಾಲ ಸಂಬಳ ಇಲ್ಲದೆ, ನಾವು EMI ಗಳು ಮತ್ತು ಸಾಲಗಳನ್ನು ಪಾವತಿಸಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಯೊಬ್ಬರು ಹಂಚಿಕೊಂಡಿದ್ದಾರೆ.

SCROLL FOR NEXT