ರೋಹಿಣಿ ಸಿಂಧೂರಿ-ಡಿ ರೂಪಾ ಮೌದ್ಗಿಲ್(ಸಂಗ್ರಹ ಚಿತ್ರ) 
ರಾಜ್ಯ

ಇಬ್ಬರು ಮಹಿಳಾ ಅಧಿಕಾರಿಗಳ ನಡುವಿನ ಜಟಾಪಟಿ: ಚುನಾವಣೆ ಹೊತ್ತಿನಲ್ಲಿ ಇಕ್ಕಟ್ಟಿನಲ್ಲಿ ಸರ್ಕಾರ!

ರಾಜ್ಯದ ಇಬ್ಬರು ಹಿರಿಯ ಮಹಿಳಾ ಅಧಿಕಾರಿಗಳು -- ಐಪಿಎಸ್ ಅಧಿಕಾರಿ ರೂಪಾ ಡಿ ಮೌದ್ಗಿಲ್ ಮತ್ತು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ಭಿನ್ನಾಭಿಪ್ರಾಯ, ಜಗಳ ಮಾಧ್ಯಮಗಳ ಮೂಲಕ ಜಗಜ್ಜಾಹೀರಾಗಿದ್ದು, ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.

ಬೆಂಗಳೂರು: ರಾಜ್ಯದ ಇಬ್ಬರು ಹಿರಿಯ ಮಹಿಳಾ ಅಧಿಕಾರಿಗಳು -- ಐಪಿಎಸ್ ಅಧಿಕಾರಿ ರೂಪಾ ಡಿ ಮೌದ್ಗಿಲ್ ಮತ್ತು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ಭಿನ್ನಾಭಿಪ್ರಾಯ, ಜಗಳ ಮಾಧ್ಯಮಗಳ ಮೂಲಕ ಜಗಜ್ಜಾಹೀರಾಗಿದ್ದು, ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.

ಐಜಿಪಿ ರೂಪಾ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಸಿಂಧೂರಿ ವಿರುದ್ಧ ಸರಣಿ ಆರೋಪಗಳನ್ನು ಮಾಡಿದ್ದಾರೆ, ಇದಕ್ಕೆ ಪ್ರತಿಕ್ರಿಯಿಸಿದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಐಪಿಎಸ್ ಅಧಿಕಾರಿ ಮಾನಸಿಕ ಸಮತೋಲನವನ್ನು ಕಳೆದುಕೊಂಡಿದ್ದಾರೆ ಮತ್ತು ಅವರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಗುಡುಗಿದ್ದಾರೆ. 

ರೋಹಿಣಿ ಸಿಂಧೂರಿ ಅವರು ಮೈಸೂರು ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಗ ಅವರ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದ ಶಾಸಕ ಸಾ.ರಾ.ಮಹೇಶ್ ಅವರನ್ನು ಭೇಟಿ ಮಾಡಿ ರಾಜಿ ಸಂಧಾನ ಮಾಡಿಕೊಂಡಿದ್ದಾರೆ ಎಂಬ ಆರೋಪ ಮಾಡಿದ ಡಿ. ರೂಪಾ, ಸಿಂಧೂರಿ ಅವರು ಶಾಸಕರನ್ನು ಏಕೆ ಭೇಟಿಯಾದರು ಆ ಮೂಲಕ ಏನು ಮರೆಮಾಚಲು ಪ್ರಯತ್ನಿಸುತ್ತಿದ್ದಾರೆ ಎಂದು ಸಾಮಾಜಿಕ ಮಾಧ್ಯಮ ಪ್ರೊಫೈಲ್‌ನಲ್ಲಿ ಸುದೀರ್ಘ ಪೋಸ್ಟ್‌ನಲ್ಲಿ ಪ್ರಶ್ನೆ ಮಾಡಿದ್ದರಲ್ಲದೆ ರೋಹಿಣಿ ಸಿಂಧೂರಿ ವಿರುದ್ಧ 19 ಪ್ರಶ್ನೆಗಳನ್ನು ಕೇಳಿ ಆರೋಪ ಮಾಡಿದರು. ಅಲ್ಲದೆ ರೋಹಿಣಿ ಸಿಂಧೂರಿಯವರು ಪುರುಷರಿಗೆ ಕಳುಹಿಸಿದ್ದಾರೆ ಎಂಬ ಕೆಲವು ಅವರ ವೈಯಕ್ತಿಕ ಫೋಟೋಗಳನ್ನು ಲೀಕ್ ಮಾಡಿದ್ದಾರೆ. 

''ರೋಹಿಣಿ ಸಿಂಧೂರಿ ಅವರು ಮಂಡ್ಯ ಜಿಪಂ ಸಿಇಒ ಆಗಿದ್ದಾಗ ಕೇಂದ್ರ ಸರಕಾರದಿಂದ ಪ್ರಶಸ್ತಿ ಪಡೆಯಲು ಶೌಚಾಲಯ ನಿರ್ಮಾಣಕ್ಕೆ ಸಂಬಂಧಿಸಿದ ಅಂಕಿ-ಅಂಶಗಳನ್ನು ನೆಪಮಾತ್ರಕ್ಕೆ ಹಾಕಲಾಗಿದೆ ಎಂಬ ಆರೋಪವಿತ್ತು, ಈ ಬಗ್ಗೆ ಯಾವುದೇ ತನಿಖೆ ನಡೆದಿಲ್ಲ, 24ರಂದು ಅವರ ವಿರುದ್ಧ ನೇರ ಆರೋಪವಿತ್ತು. ಚಾಮರಾಜನಗರ ಆಸ್ಪತ್ರೆಯಲ್ಲಿ ಆಕ್ಸಿಜನ್ ಇಲ್ಲದೇ ಕೋವಿಡ್ ಸಮಯದಲ್ಲಿ ರೋಗಿಗಳು ಮೃತಪಟ್ಟಿದ್ದರು. ಇದರಲ್ಲಿ ಕೂಡ ರೋಹಿಣಿ ಸಿಂಧೂರಿ ಅವರ ಬೇಜವಾಬ್ದಾರಿತನ ಎದ್ದು ಕಂಡುಬಂತು. ಐಎಎಸ್ ಅಧಿಕಾರಿ ಹರ್ಷ ಗುಪ್ತಾ ಅವರ ವಿರುದ್ಧ ಸರ್ಕಾರಕ್ಕೆ ಎರಡು ವರದಿ ಸಲ್ಲಿಸಿದ್ದರೂ ಯಾವುದೇ ಕ್ರಮವಾಗಿಲ್ಲ, ಕಾರಣ ನೀಡದೆ ಲೋಕಾಯುಕ್ತ ಹಾಗೂ ಸರ್ಕಾರದಲ್ಲಿ ದೂರು ದಾಖಲಾಗಿದೆ. ಐಪಿಎಸ್ ಮಹಿಳಾ ಅಧಿಕಾರಿಗೆ ಬೆಂಬಲ ನೀಡುತ್ತಿರುವವರು ಯಾರು, ಆಕೆಯ ಪತಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದಾರೆ ಮತ್ತು ಅನೇಕ ಬಾರಿ ಅವರು ಭೂಮಾಪನ ಮತ್ತು ಭೂ ದಾಖಲೆಗಳ ಕಚೇರಿಯಿಂದ ಜಮೀನುಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆದಿದ್ದಾರೆ. ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳುತ್ತದೆಯೇ ಎಂದು ಐಜಿಪಿ ರೂಪಾ ಪ್ರಶ್ನಿಸಿದ್ದಾರೆ. 

ರೋಹಿಣಿ ಸಿಂಧೂರಿ ಅವರು ಜಾಲಹಳ್ಳಿಯಲ್ಲಿ ಬಂಗಲೆ ನಿರ್ಮಿಸುತ್ತಿದ್ದಾರೆ, ಆದರೆ ಅಧಿಕಾರಿಗಳು ಸಲ್ಲಿಸಬೇಕಾದ ಸ್ಥಿರಾಸ್ತಿ ರಿಟರ್ನ್ಸ್‌ನಲ್ಲಿ ಅದರ ಉಲ್ಲೇಖವಿಲ್ಲ ಎಂದು ಅವರು ಆರೋಪಿಸಿದರು. "ಕೋಟಿ ಮೌಲ್ಯದ ಇಟಾಲಿಯನ್ ಪೀಠೋಪಕರಣಗಳು ಮತ್ತು 26 ಲಕ್ಷ ರೂಪಾಯಿ ಮೌಲ್ಯದ ಜರ್ಮನ್ ಉಪಕರಣಗಳನ್ನು ಸುಂಕ ರಹಿತವಾಗಿ ಮತ್ತು ಕೇವಲ 6 ಲಕ್ಷ ರೂಪಾಯಿಗಳನ್ನು ಖರ್ಚು ಮಾಡುವ ಬಗ್ಗೆ ಸರ್ಕಾರಕ್ಕೆ ಅವರ ಚಾಟ್‌ಗಳ ಮಾಹಿತಿ ಸಿಕ್ಕಿದೆ. ಯಾವುದೇ ಕ್ರಮವಿದೆಯೇ ಎಂದು ನಾವು ಕಾದು ನೋಡಬೇಕಾಗಿದೆ" ಎಂದು ರೂಪಾ ಆರೋಪಿಸಿದ್ದಾರೆ. 

ಐಎಎಸ್ ಅಧಿಕಾರಿ ಡಾ.ರವಿಶಂಕರ್ ಅವರು ತಮ್ಮ ಪ್ರಾಥಮಿಕ ವಿಚಾರಣೆಯಲ್ಲಿ ಮೈಸೂರು ಡಿಸಿ ಅವರ ಅಧಿಕೃತ ನಿವಾಸದಲ್ಲಿ ಟೈಲ್ಸ್ ಮತ್ತು ಈಜುಕೊಳ ನಿರ್ಮಿಸುವ ಮೂಲಕ ಸಿಂಧೂರಿ ಪಾರಂಪರಿಕ ಕಟ್ಟಡಗಳಿಗೆ ಸಂಬಂಧಿಸಿದ ಕಾನೂನುಗಳನ್ನು ಉಲ್ಲಂಘಿಸಿದ್ದಾರೆ ಎಂದು ಹೇಳಿದ್ದಾರೆ ಎಂದು ರೂಪ ಆರೋಪಿಸಿದ್ದಾರೆ. ಇದಲ್ಲದೆ, ಅವರು ಸಿಂಧೂರಿ ವಿರುದ್ಧ ವಾಗ್ದಾಳಿ ನಡೆಸಿ ಶಾಸಕ ಸಾ ರಾ ಮಹೇಶ್ ಮತ್ತು ಸಂಸದ ಪ್ರತಾಪ್ ಸಿಂಹ ಅವರ ವಿರುದ್ಧ ಆರೋಪಗಳನ್ನು ಮಾಡಿದ್ದರೂ ಏಕೆ ತನಿಖೆ ಮಾಡಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ. 

ರೋಹಿಣಿ ಸಿಂಧೂರಿ ಅವರನ್ನು ಮೈಸೂರಿಗೆ ವರ್ಗಾವಣೆ ಮಾಡಿರುವ ಪ್ರಕರಣ ಹಾಗೂ ಕೇಂದ್ರೀಯ ಆಡಳಿತ ನ್ಯಾಯಮಂಡಳಿಯಲ್ಲಿ ಆಕೆಯ ವಾದವನ್ನು ಅಡ್ವೊಕೇಟ್ ಜನರಲ್ ಪ್ರತಿನಿಧಿಸಿದ ಪ್ರಕರಣವನ್ನು ಎತ್ತಿ ತೋರಿಸಿದ ರೂಪಾ, ಕನ್ನಡಿಗ ಅಧಿಕಾರಿಗಳ ಬಗ್ಗೆ ಸರ್ಕಾರದ ಮಲತಾಯಿ ಧೋರಣೆಯನ್ನು ಟೀಕಿಸಿದರು. ಹಲವಾರು ಆರೋಪಗಳಿದ್ದರೂ ಸಿಂಧೂರಿ ವಿರುದ್ಧ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆ ಪ್ರಶ್ನೆಗಳನ್ನು ಎತ್ತಿರುವ ರೂಪಾ, ಐಎಎಸ್ ಅಧಿಕಾರಿ ತನ್ನ 'ಅಷ್ಟು ಯೋಗ್ಯವಲ್ಲದ' ಚಿತ್ರಗಳನ್ನು ಕೆಲವು ಹಿರಿಯ ಅಧಿಕಾರಿಗಳೊಂದಿಗೆ ಹಂಚಿಕೊಂಡಿದ್ದಾರೆ ಎಂದು ಆರೋಪಿಸಿದರು. "ಇದು ಖಾಸಗಿ ವಿಷಯವಲ್ಲ, ಅಖಿಲ ಭಾರತ ಸೇವಾ ನಡವಳಿಕೆ ನಿಯಮಗಳ ಪ್ರಕಾರ ಅಪರಾಧ" ಎಂದು ಟೀಕಿಸಿದ್ದಾರೆ. 

ಇದಕ್ಕೆ ಮಾಧ್ಯಮ ಹೇಳಿಕೆಯಲ್ಲಿ, ರೋಹಿಣಿ ಸಿಂಧೂರಿ ಅವರು ರೂಪಾ ಅವರ ವಿರುದ್ಧ ಸುಳ್ಳು, ವೈಯಕ್ತಿಕ ದೂಷಣೆ ಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. "ಇದು ಅವರ ಸ್ಟ್ಯಾಂಡರ್ಡ್ ಮೋಡಸ್ ಆಪರೇಂಡಿ. ಅವರು ಕೆಲಸ ಮಾಡಿದ ಪ್ರತಿಯೊಂದು ಸ್ಥಳದಲ್ಲೂ ಅದನ್ನು ಮಾಡುತ್ತಿದ್ದಾರೆ. ಮಾಧ್ಯಮದ ಗಮನ ಸೆಳೆದು ಪ್ರಚಾರದಲ್ಲಿರಲು ಈ ರೀತಿ ಮಾಡುತ್ತಿದ್ದಾರೆ. ಅವರು ಸಾಮಾಜಿಕ ಮಾಧ್ಯಮದಲ್ಲಿ ಮಾಡುತ್ತಿರುವ ಪೋಸ್ಟ್ ಗಳು ಇದಕ್ಕೆ ಉದಾಹರಣೆಯಾಗಿವೆ. ಇನ್ನೊಬ್ಬರನ್ನು ಗುರಿಯಾಗಿಸಿಕೊಂಡು ಟೀಕೆ ಮಾಡುತ್ತಿರುವುದು ತೋರಿಸುತ್ತಿದೆ. ಒಬ್ಬ ಸರ್ಕಾರದ ಅಧಿಕಾರಿಯಾಗಿ ಜವಾಬ್ದಾರಿಯುತ ಸ್ಥಾನದಲ್ಲಿದ್ದು ಈ ರೀತಿ ನಡೆದುಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ದೂರಿದ್ದಾರೆ. ಮಾನಸಿಕ ಅಸ್ವಸ್ಥತೆಯು ಒಂದು ದೊಡ್ಡ ಸಮಸ್ಯೆಯಾಗಿದೆ ಮತ್ತು ಜವಾಬ್ದಾರಿಯುತ ಸ್ಥಾನದಲ್ಲಿರುವ ಜನರ ಮೇಲೆ ಪರಿಣಾಮ ಬೀರಿದಾಗ ಅದು ಹೆಚ್ಚು ಅಪಾಯಕಾರಿಯಾಗಿದೆ, ಎಂದು ರೂಪಾ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ಸಹ ರೋಹಿಣಿ ಸಿಂಧೂರಿ ಆರೋಪಿಸಿದ್ದಾರೆ. 

ಇದಲ್ಲದೆ, ರೂಪಾ ಅವರ ದುರ್ನಡತೆ ಮತ್ತು ಕ್ರಿಮಿನಲ್ ಅಪರಾಧಗಳಿಗೆ ಸಂಬಂಧಿಸಿದ ಕ್ರಮಗಳಿಗಾಗಿ ಸೂಕ್ತ ಅಧಿಕಾರಿಗಳೊಂದಿಗೆ ಕಾನೂನು ಮತ್ತು ಇತರ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಸಿಂಧೂರಿ ಹೇಳಿದ್ದಾರೆ. "ಫೋಟೋಗಳು ಸ್ಕ್ರೀನ್‌ಶಾಟ್‌ಗಳಾಗಿವೆ ಮತ್ತು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು/ವಾಟ್ಸಾಪ್ ಸ್ಟೇಟಸ್‌ಗಳಿಂದ ನನ್ನನ್ನು ಅಪಹಾಸ್ಯ ಮಾಡಲು ತಪ್ಪಾಗಿ ಬಳಸಲಾಗುತ್ತಿದೆ ಎಂದು ರೋಹಿಣಿ ಸಿಂಧೂರಿ ಆರೋಪಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಕೆಲಸದ ಹೊರೆ ಖಂಡಿಸಿ ಪಶ್ಚಿಮ ಬಂಗಾಳ CEO ಕಚೇರಿ ಮುಂದೆ BLOಗಳಿಂದ ಅಹೋರಾತ್ರಿ ಧರಣಿ!

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

"Misfit For Army": ಗುರುದ್ವಾರ ಪ್ರವೇಶಿಸಲು ನಿರಾಕರಣೆ; ಕ್ರಿಶ್ಚಿಯನ್ ಸೇನಾ ಅಧಿಕಾರಿಗೆ ಸುಪ್ರೀಂ ಕೋರ್ಟ್ ತರಾಟೆ!

SCROLL FOR NEXT