ರಾಜ್ಯ

ವಸತಿ ಸೀಟು ವಿಚಾರ: ಎನ್‌ಎಲ್‌ಎಸ್‌ಐಯು ವಿರುದ್ಧ ಕ್ರಮ ಕೈಗೊಳ್ಳುವಂತೆ ಶಾಸಕರ ಒತ್ತಾಯ

Manjula VN

ಬೆಂಗಳೂರು: ಕನ್ನಡಿಗರಿಗೆ ಶೇ.25ರಷ್ಟು ವಸತಿ ಸೀಟು ನೀಡದ ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ (ಎನ್‌ಎಲ್‌ಎಸ್‌ಐಯು) ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಶಾಸಕರು ಪಕ್ಷಾತೀತಾಗಿ ಮಂಗಳವಾರ ಒತ್ತಾಯಿಸಿದರು.

ಎನ್‌ಎಲ್‌ಎಸ್‌ಐಯು ವಸತಿ ಸೀಟು ವಿಚಾರ ಕುರಿತು ವಿಧಾನಸಭೆಯಲ್ಲಿ ಬಿಜೆಪಿಯ ಸುರೇಶ್ ಕುಮಾರ್ ಅವರು ಪ್ರಶ್ನಿಸಿದರು.

ಭಾರತದಲ್ಲಿನ 24 ರಾಷ್ಟ್ರೀಯ ಕಾನೂನು ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಕರ್ನಾಟಕದ ಎನ್‌ಎಲ್‌ಎಸ್‌ಐಯು ನಲ್ಲಿ ಮಾತ್ರ ಸ್ಥಳೀಯ ನಿವಾಸಿಗಳಿಗೆ ಮೀಸಲಾತಿಯನ್ನು ಒದಗಿಸುವುದಿಲ್ಲ ಎಂದು ಗಮನಸೆಳೆದರು.

ಕರ್ನಾಟಕದಲ್ಲಿ ಎನ್‌ಎಲ್‌ಎಸ್‌ಐಯುಗೆ 23 ಎಕರೆ ಭೂಮಿ ನೀಡಿದ್ದು, ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯ ಸರ್ಕಾರ 22 ಕೋಟಿ ರೂಪಾಯಿ ಅನುದಾನ ನೀಡಿದೆ. ಇದರ ಹೊರತಾಗಿ, 2020 ರಲ್ಲಿ, ಎನ್‌ಎಲ್‌ಎಸ್‌ಐಯು ತಿದ್ದುಪಡಿ ಕಾಯ್ದೆಯನ್ನು ಅಂಗೀಕರಿಸಲಾಯಿತು, ಕಾಯ್ದೆಯು ಕರ್ನಾಟಕ ವಿದ್ಯಾರ್ಥಿಗಳಿಗೆ 25 ಶೇಕಡಾ ಸೀಟು ಮೀಸಲಾತಿಯನ್ನು ಒದಗಿಸುತ್ತದೆ, ಸಂಸ್ಥೆಯು ಕಾಯಿದೆಗೆ ಬದ್ಧವಾಗಿರಬೇಕಿತ್ತು. ಭಾರತದಾದ್ಯಂತ 24 ಎನ್‌ಎಲ್‌ಎಸ್‌ಐಯು ಸಂಸ್ಥೆಗಳಿದ್ದು, ಮೀಸಲಾತಿ ನೀಡದ ಸಂಸ್ಥೆ ಎಂದರೆ ಅದು ಕರ್ನಾಟಕದಲ್ಲಿಸುವ ಸಂಸ್ಥೆ ಮಾತ್ರವೇ ಆಗಿದೆ ಎಂದು ಹೇಳಿದರು.

“ರಾಜ್ಯ ಸರ್ಕಾರವು ಕಾಯಿದೆಯನ್ನು ಜಾರಿಗೊಳಿಸುವುದನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಸ್ಥಳೀಯ ವಿದ್ಯಾರ್ಥಿಗಳಿಗೆ ಮೀಸಲಾತಿಯನ್ನು ಒದಗಿಸಬೇಕು. ಒಂದು ವೇಳೆ ಸಂಸ್ಥೆ ವಸತಿ ಸೀಟು ನೀಡುವಲ್ಲಿ ವಿಫಲವಾದರೆ, ಸರ್ಕಾರ ನೀಡಿದ ಸೌಲಭ್ಯಗಳನ್ನು ಹಿಂಪಡೆಯಬಹುದೇ ಎಂದು ಪರಿಶೀಲಿಸಬೇಕು ಎಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕಾನೂನು ಸಚಿವ ಜೆ.ಸಿ.ಮಾಧು ಸ್ವಾಮಿ ಅವರು, ನಿವೇಶನ ಮೀಸಲಾತಿ ನೀತಿ ಪ್ರಕಾರ ಕರ್ನಾಟಕದಲ್ಲಿ 10 ವರ್ಷ ಓದಿದವರಿಗೆ ಮೀಸಲಾತಿ ಸಿಗಬೇಕು. ಕಾಯ್ದೆ ಜಾರಿಯಾದ ನಂತರ ಎನ್‌ಎಲ್‌ಎಸ್‌ಐಯು ಹೈಕೋರ್ಟ್‌ಗೆ ಹೋಗಿ ತಡೆ ಪಡೆದಿತ್ತು. ನಂತರ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.

“ಸಾಮಾನ್ಯ ಅರ್ಹತೆಯ ಮೂಲಕ ಪ್ರವೇಶ ಪಡೆದ ಕನ್ನಡಿಗರನ್ನು ಮೀಸಲಾತಿಯೊಂದಿಗೆ ವಿಲೀನಗೊಳಿಸಲಾಗಿದೆ, ಅದನ್ನು ವಿಶ್ವವಿದ್ಯಾಲಯ ಮಾಡಲು ಸಾಧ್ಯವಿಲ್ಲ. ಮೀಸಲಾತಿ ಕೋಟಾವನ್ನು ಸಾಮಾನ್ಯ ಅರ್ಹತೆಯೊಂದಿಗೆ ವಿಲೀನಗೊಳಿಸಲಾಗುವುದಿಲ್ಲ. ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದ್ದು, ಇನ್ನೆರಡು ದಿನಗಳಲ್ಲಿ ವಿಚಾರಣೆ ನಡೆಯಲಿದೆ. ರಾಜ್ಯದ ಎನ್‌ಎಲ್‌ಎಸ್‌ಐಯು ಗೆ ವಿದ್ಯುತ್, ನೀರು ಮತ್ತು ಭೂಮಿಯನ್ನು ನೀಡಿದ್ದೇವೆ. ಅದಕ್ಕಾಗಿ ಹೋರಾಟ ಮಾಡುತ್ತೇವೆ ಎಂದರು.

ಈಗಾಗಲೇ ಸಂಸ್ಥೆಗೆ ಉನ್ನತ ಶಿಕ್ಷಣ ಸಚಿವ ಡಾ ಸಿಎನ್ ಅಶ್ವತ್ಥ್ ನಾರಾಯಣ್ ಹಾಗೂ ನಾನು ಪತ್ರೆ ಬರೆದಿದ್ದೆವು. ಆದರೆ, ಅದು ವ್ಯರ್ಥವಾಯಿತು. ಇದೀಗ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದೆ. ನಮ್ಮ ಪ್ರಕರಣದಲ್ಲಿ ಹೋರಾಡಲು ನಾವು ಅತ್ಯುತ್ತಮ ವಕೀಲರನ್ನು ಹೊಂದಿದ್ದೇವೆ. ಎಲ್ಲಾ ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳು ಸ್ಥಳೀಯರಿಗೆ ಮೀಸಲಾತಿ ನೀಡಿವೆ. ತೀರ್ಪು ನಮ್ಮ ಪರವಾಗಿ ಬರುತ್ತದೆ ಎಂದು ವಿಶ್ವಾಸವಿದೆ ಎಂದು ತಿಳಿಸಿದರು.

SCROLL FOR NEXT