ನಿರ್ಮಲಾ ಸೀತಾರಾಮನ್ 
ರಾಜ್ಯ

ಬೆಂಗಳೂರಿನಲ್ಲಿ ಇಂದಿನಿಂದ ಎರಡು ದಿನ ಜಿ-20 ಹಣಕಾಸು ಸಚಿವರು, ಸೆಂಟ್ರಲ್ ಬ್ಯಾಂಕ್ ಗವರ್ನರ್ ಗಳ ಸಭೆ

ರಾಜಧಾನಿ ಬೆಂಗಳೂರಿನಲ್ಲಿ ಶುಕ್ರವಾರ ಮತ್ತು ಶನಿವಾರ  ಜಿ-20 ರಾಷ್ಟ್ರಗಳ ಹಣಕಾಸು ಸಚಿವರು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರ್ ಗಳ ಮೊದಲ ಸಭೆ ನಡೆಯಲಿದೆ.

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಶುಕ್ರವಾರ ಮತ್ತು ಶನಿವಾರ ಜಿ-20 ರಾಷ್ಟ್ರಗಳ ಹಣಕಾಸು ಸಚಿವರು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರ್ ಗಳ ಮೊದಲ ಸಭೆ ನಡೆಯಲಿದೆ. ಸಭೆ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಜಿ 20- ರಾಷ್ಟ್ರಗಳ ಹಣಕಾಸು ಸಚಿವರೊಂದಿಗೆ ಸರಣಿ ಸಭೆಗಳನ್ನು ನಡೆಸಿದರು ಮತ್ತು ಜಾಗತಿಕ ಆರ್ಥಿಕ, ಆರೋಗ್ಯ ಮತ್ತು ಇತರ ಹಲವು ವಿಷಯಗಳ ಕುರಿತು ಚರ್ಚಿಸಿದರು.

ಯುರೋಪಿಯನ್ ಒಕ್ಕೂಟದ ಕಮಿಷನರ್ ಪಾವೊಲೊ ಜೆಂಟಿಲೋನಿ ಅವರೊಂದಿಗಿನ ಸಭೆಯಲ್ಲಿ ಜಾಗತಿಕ ಆಹಾರ ಮತ್ತು ರಸಗೊಬ್ಬರ ಅಭದ್ರತೆಯ ಬಗ್ಗೆ ಉಭಯ ನಾಯಕರು ವಿಚಾರ ವಿನಿಮಯ ಮಾಡಿಕೊಂಡರು. ಜೆಂಟಿಲೋನಿ ಸಹ ಸಂಬಂಧಗಳನ್ನು ಬಲಪಡಿಸುವಲ್ಲಿ ಬೆಂಬಲ ವ್ಯಕ್ತಪಡಿಸಿದರು. 

ಫೆಬ್ರವರಿ 25 ರವರೆಗೆ ನಗರದಲ್ಲಿ ನಡೆಯುತ್ತಿರುವ ಜಿ 20  ಹಣಕಾಸು ಮಂತ್ರಿಗಳು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರ್ ಗಳ ಮೊದಲ ಸಭೆ ಮತ್ತು ಹಣಕಾಸು ಮತ್ತು ಕೇಂದ್ರ ಬ್ಯಾಂಕ್ ಉಪಗವರ್ನರ್ ಗಳ ಎರಡನೇ ಸಭೆಯ ಭಾಗವಾಗಿ ಸೀತಾರಾಮನ್ ಸಭೆ ನಡೆಸಿದರು. ಬ್ಯಾಂಕ್ ಆಫ್ ಇಂಟರ್‌ನ್ಯಾಶನಲ್ ಸೆಟಲ್‌ಮೆಂಟ್‌ನ ಜನರಲ್ ಮ್ಯಾನೇಜರ್ ಆಗಸ್ಟಿನ್ ಕಾರ್ಸ್ಟೆನ್ಸ್ ಜೊತೆಗಿನ ಸಭೆಯಲ್ಲಿ ತಾಂತ್ರಿಕ ಆವಿಷ್ಕಾರ ಮತ್ತು ಪಾವತಿಗಳ ಕ್ಷೇತ್ರಗಳಲ್ಲಿ ಬೆಂಬಲದ ಬಗ್ಗೆ ಚರ್ಚಿಸಿದರು.ಕೆನಡಾದ ಉಪ ಮಂತ್ರಿ ಮತ್ತು ಹಣಕಾಸು ಸಚಿವ ಕ್ರಿಸ್ಟಿಯಾ ಫ್ರೀಲ್ಯಾಂಡ್ ಅವರನ್ನು ಭೇಟಿ ಮಾಡಿದ, ನಿರ್ಮಾಲಾ ಸೀತಾರಾಮನ್ , ಹಣಕಾಸು ಪರಿಸ್ಥಿತಿ ಸುಧಾರಣೆಗಳ ಬಗ್ಗೆ ಚರ್ಚಿಸಿದರು.

ಅರ್ಜೆಂಟೀನಾದ ಆರ್ಥಿಕ ಸಚಿವ ಸೆರ್ಗಿಯೊ ಮಸ್ಸಾ, ಸ್ಪೇನ್‌ನ ಉಪಾಧ್ಯಕ್ಷ ಮತ್ತು ಆರ್ಥಿಕ ವ್ಯವಹಾರಗಳ ಸಚಿವ ನಾಡಿಯಾ ಕ್ಯಾಲ್ವಿನೋ ಸಾಂತಾಮಾರಿಯಾ, ಇಟಲಿಯ ಹಣಕಾಸು ಸಚಿವ, ಇಂಡೋನೇಷಿಯಾದ ಹಣಕಾಸು ಸಚಿವ ಡಾ.ಮುಲ್ಯಾನಿ ಇಂದ್ರಾವತಿ ಮತ್ತು ಯುನೈಟೆಡ್ ಕಿಂಗ್‌ಡಂನ ಹಣಕಾಸು ಸಚಿವ ಜೆರೆಮಿ ಹಂಟ್ ಸೇರಿದಂತೆ G20 ಶೃಂಗಸಭೆಯಲ್ಲಿ ಭಾಗವಹಿಸುವ ಇತರ ನಾಯಕರೊಂದಿಗೆ ಸಭೆಗಳನ್ನು ನಡೆಸಿದರು.

ಜಿ-20  ಹಣಕಾಸು ಸಚಿವರು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರ್ ಗಳ ಸಭೆಯಲ್ಲಿ ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕುಗಳನ್ನು ಬಲಪಡಿಸುವುದು, ಹಣಕಾಸು, ಭವಿಷ್ಯದ ಸುಸ್ಥಿರ ನಗರಗಳು, ಆರ್ಥಿಕ ಒಳಗೊಳ್ಳುವಿಕೆ, ಉತ್ಪಾದಕತೆ ಲಾಭಗಳನ್ನು ಹೆಚ್ಚಿಸಲು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಬಳಸಿಕೊಳ್ಳುವುದು, ಜಾಗತಿಕ ಆರ್ಥಿಕ ಸವಾಲುಗಳು, ಜಾಗತಿಕ ಆರೋಗ್ಯ ಮತ್ತು ಅಂತಾರಾಷ್ಟ್ರೀಯ ತೆರಿಗೆ ಮುಂತಾದ ವಿಷಯಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ.

ಅಲ್ಲದೇ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ಕ್ರಿಪ್ಟೋ ಕರೆನ್ಸಿ ನೀತಿಯ, ದೃಷ್ಟಿಕೋನ ಮತ್ತು ಗಡಿಯಾಚೆಗಿನ ಪಾವತಿಗಳಲ್ಲಿ ರಾಷ್ಟ್ರೀಯ ಪಾವತಿ ವ್ಯವಸ್ಥೆಗಳ ಪಾತ್ರ ಮುಂತಾದ ವಿಚಾರಗಳನ್ನು ಪ್ರತಿನಿಧಿಗಳು ಮಂಡಿಸಲಿದ್ದಾರೆ. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ - ಐಐಎಸ್‌ಇನಲ್ಲಿ ವಿಚಾರ ವಿನಿಮಯ ನಡೆಯಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT