ರಾಜ್ಯ

ಉಡುಪಿ: ಕ್ಯಾಂಪಸ್‌ನಲ್ಲಿ ಮಾದಕ ದ್ರವ್ಯ ಸೇವನೆ ಪ್ರಕರಣ; 42 ವಿದ್ಯಾರ್ಥಿಗಳ ಅಮಾನತು

Ramyashree GN

ಮಂಗಳೂರು: ಮಾದಕ ದ್ರವ್ಯ ಸೇವನೆ ಬಗ್ಗೆ ಶೂನ್ಯ ಸಹಿಷ್ಣುತೆಯ ನೀತಿಯ ಪ್ರಕಾರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಎಂಎಎಚ್ಇ) ಮಾದಕ ವ್ಯಸನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಕಂಡು ಬಂದ ಒಂದು ತಿಂಗಳಲ್ಲಿ 42 ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿದೆ.

ಇಂತಹ ಕ್ರಮಗಳಿಂದ ಸಮಾಜಕ್ಕೆ ಬಲವಾದ ಸಂದೇಶ ರವಾನೆಯಾಗುತ್ತದೆ ಹಾಗೂ ಮಾದಕ ವಸ್ತುಗಳ ಸೇವನೆಯ ವಿರುದ್ಧ ಜಾಗೃತಿ ಮೂಡಿಸುತ್ತದೆ. ಉಡುಪಿಯಲ್ಲಿ ಡ್ರಗ್ಸ್ ಹಾವಳಿಗೆ ಕೆಲವು ವಿದ್ಯಾರ್ಥಿಗಳು ಬಲಿಯಾಗಿದ್ದಾರೆ ಎಂದು ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಹಾಕೇ ಅಕ್ಷಯ್ ಮಚ್ಚೀಂದ್ರ ಬುಧವಾರ ಉಡುಪಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಎಂಎಎಚ್ಇ ಅಧಿಕಾರಿಗಳು ಮಾದಕ ದ್ರವ್ಯ ಸೇವನೆ ವಿರುದ್ಧ ತಮ್ಮ ಶೂನ್ಯ- ಸಹಿಷ್ಣು ನೀತಿಯ ಭಾಗವಾಗಿ ಆಂತರಿಕ ತನಿಖೆಯನ್ನು ನಡೆಸಿದರು. ಮಾದಕ ದ್ರವ್ಯ ಸೇವನೆ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲಾ ವಿದ್ಯಾರ್ಥಿಗಳನ್ನು ಆಂತರಿಕ ತನಿಖೆ ಪೂರ್ಣಗೊಳ್ಳುವವರೆಗೆ ಎಂಎಎಚ್ಇಯಿಂದ ಅಮಾನತುಗೊಳಿಸಲಾಗಿದೆ.

ವಿದ್ಯಾರ್ಥಿಗಳನ್ನು ಇತರರಂತೆ ಸಾಮಾನ್ಯ ಜೀವನವನ್ನು ನಡೆಸುವಂತೆ ಪರಿವರ್ತಿಸಲು ಅವರನ್ನು ಎಂಎಎಚ್ಇ ಆಪ್ತ ಸಲಹೆಗಾರರ ಬಳಿಗೆ ಕಳುಹಿಸುವಂತೆ ಸೂಚಿಸಲಾಗಿದೆ ಎಂದು ಎಸ್‌ಪಿ ಹೇಳಿದರು.

ಎಂಎಎಚ್ಇ ತನ್ನ ಆಂತರಿಕ ಶಿಸ್ತು ಸಮಿತಿಯ ವರದಿಯನ್ನು ಆಧರಿಸಿ ಕ್ರಮ ಕೈಗೊಂಡಿದೆ.

ಉಡುಪಿ ಜಿಲ್ಲಾ ಪೊಲೀಸರು ಮಾದಕ ದ್ರವ್ಯ ಸೇವನೆ ಮತ್ತು ದಂಧೆ ವಿರುದ್ಧ ನಿರಂತರ ನಿಗಾ ವಹಿಸಿದ್ದಾರೆ ಎಂದು ಮಚ್ಚೀಂದ್ರ ತಿಳಿಸಿದ್ದಾರೆ.

ವಿದ್ಯಾರ್ಥಿಗಳ ವಿರುದ್ಧ ದಾಖಲಾಗಿರುವ ಪ್ರಕರಣಗಳ ತನಿಖೆಗೆ MAHE ಆಡಳಿತ ಮಂಡಳಿ ಸಹಕಾರ ನೀಡಿದ್ದು, ಮಾದಕ ದ್ರವ್ಯ ಸೇವನೆ ವಿರುದ್ಧ ಜಾಗೃತಿ ಮೂಡಿಸಲು ಪೊಲೀಸರಿಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

SCROLL FOR NEXT