ಚಿಕ್ಕಮಗಳೂರು: ಮುಳ್ಳುಹಂದಿ ಹಿಡಿಯಲು ಗುಹೆಯೊಳಗೆ ನುಗ್ಗಿದ್ದ ತಮಿಳುನಾಡಿನ ನಾಲ್ವರ ಪೈಕಿ ಇಬ್ಬರ ಸಾವು!
ಮುಳ್ಳುಹಂದಿ ಹಿಡಿಯಲು ಹೋಗಿ ಗುಹೆಯಲ್ಲಿ ಸಿಲುಕಿದ್ದ ನಾಲ್ವರ ಪೈಕಿ ಇಬ್ಬರು ಮೃತಪಟ್ಟಿರುವ ಘಟನೆ ಮೂಡಿಗೆರೆ ತಾಲೂಕಿನ ಆನೆಗುಂದಿ ಬಳಿ ನಡೆದಿದೆ.
ಚಿಕ್ಕಮಗಳೂರು: ಮುಳ್ಳುಹಂದಿ ಹಿಡಿಯಲು ಹೋಗಿ ಗುಹೆಯಲ್ಲಿ ಸಿಲುಕಿದ್ದ ನಾಲ್ವರ ಪೈಕಿ ಇಬ್ಬರು ಮೃತಪಟ್ಟಿರುವ ಘಟನೆ ಮೂಡಿಗೆರೆ ತಾಲೂಕಿನ ಆನೆಗುಂದಿ ಬಳಿ ನಡೆದಿದೆ.
ತಮಿಳುನಾಡು ಮೂಲದ 30 ವರ್ಷದ ಗೋವಿಂದರಾಜು ಮತ್ತು 29 ವರ್ಷದ ವಿಜಯಕುಮಾರ್ ಮೃತ ದುರ್ದೈವಿಗಳು. ಮುಳ್ಳುಹಂದಿ ಹಿಡಿಯುವ ಸಲುವಾಗಿ ಗುಹೆಯೊಳಗೆ ಬೆಂಕಿ ಹಾಕಿದ್ದರು. ನಂತರ ನಾಲ್ವರು ಗುಹೆಯೊಳಗೆ ಹೋಗಿದ್ದರು. ಈ ವೇಳೆ ಉಸಿರುಗಟ್ಟಿ ಇಬ್ಬರು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: TNIE-ಕನ್ನಡಪ್ರಭ ಆನ್ಲೈನ್ ವರದಿ ಫಲಶೃತಿ: ಹುಲಿ ದಾಳಿ-ಸಾವು ಕುರಿತು ಉಪ ಲೋಕಾಯುಕ್ತ ಸ್ವಯಂ ಪ್ರೇರಿತ ದೂರು!
ಕಾಫಿ ತೋಟದ ಕೆಲಸಕ್ಕೆಂದು ತಮಿಳುನಾಡಿನಿಂದ ನಾಲ್ವರು ಕಾರ್ಮಿಕರು ಬಂದಿದ್ದರು. ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.