ರಾಜ್ಯ

ಹೊಸ ವರ್ಷದ ಸಂಭ್ರದಲ್ಲಿದ್ದ ಉದ್ಯೋಗಾಕಾಂಕ್ಷಿಗಳಿಗೆ ಕಹಿ ಸುದ್ದಿ: ದೇಶದಲ್ಲಿ ನಿರುದ್ಯೋಗ ಪ್ರಮಾಣ ಗರಿಷ್ಠ ಮಟ್ಟಕ್ಕೆ ಏರಿಕೆ

Manjula VN

ಬೆಂಗಳೂರು: ಹೊಸ ವರ್ಷದ ಸಂಭ್ರದಲ್ಲಿದ್ದ ಉದ್ಯೋಗಾಕಾಂಕ್ಷಿಗಳ ಮುಖದಲ್ಲಿ ಬೇಸರ ಮೂಡಿಸುವ ವರದಿಯೊಂದು ಇದೀಗ ಹೊರಬಿದ್ದಿದೆ. ಭಾರತದ ನಿರುದ್ಯೋಗ ದರವು ಡಿಸೆಂಬರ್‌ನಲ್ಲಿ ಶೇಕಡಾ 8.3 ಕ್ಕೆ ಏರಿದ್ದು, ಇದು 16 ತಿಂಗಳುಗಳಲ್ಲಿ ಅತ್ಯಧಿಕ ದರವಾಗಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿಯ ಅಂಕಿ ಅಂಶಗಳು ತಿಳಿಸಿವೆ.

ಇದರಲ್ಲಿ ನಗರ ನಿರುದ್ಯೋಗ ದರವು ಹಿಂದಿನ ತಿಂಗಳಿನ ಶೇಕಡಾ 8.96 ರಿಂದ ಡಿಸೆಂಬರ್‌ನಲ್ಲಿ ಶೇಕಡಾ 10.09 ಕ್ಕೆ ಏರಿದೆ. ಆದರೆ ಗ್ರಾಮೀಣ ನಿರುದ್ಯೋಗ ದರವು ಶೇಕಡಾ 7.55 ರಿಂದ ಶೇಕಡಾ 7.44 ಕ್ಕೆ ಇಳಿದಿದೆ ಎಂದು ಅಂಕಿಅಂಶ ತೋರಿಸಿದೆ.

ರಾಷ್ಟ್ರೀಯ ಅಂಕಿಅಂಶಗಳ ಕಚೇರಿ ಸಂಗ್ರಹಿಸಿದ ಮತ್ತು ನವೆಂಬರ್‌ನಲ್ಲಿ ಬಿಡುಗಡೆಯಾದ ಪ್ರತ್ಯೇಕ ತ್ರೈಮಾಸಿಕ ಮಾಹಿತಿಯ ಪ್ರಕಾರ ನಿರುದ್ಯೋಗ ದರವು ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಹಿಂದಿನ ತ್ರೈಮಾಸಿಕದಲ್ಲಿ 7.6 ಶೇಕಡಾಕ್ಕೆ ಹೋಲಿಸಿದರೆ ಶೇಕಡಾ 7.2 ಕ್ಕೆ ಇಳಿದಿದೆ ಎಂದು ತೋರಿಸಿದೆ. ಡಿಸೆಂಬರ್‌ನಲ್ಲಿ, ನಿರುದ್ಯೋಗ ದರವು ಹರಿಯಾಣದಲ್ಲಿ ಶೇಕಡಾ 37.4 ಕ್ಕೆ ಏರಿತು. ನಂತರ ರಾಜಸ್ಥಾನದಲ್ಲಿ 28.5 ಶೇಕಡಾ ಮತ್ತು ದೆಹಲಿಯಲ್ಲಿ 20.8 ಶೇಕಡಾ ಆಗಿತ್ತು ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿಯ ಅಂಕಿಅಂಶಗಳು ತಿಳಿಸಿದೆ.

ಜಾಗತಿಕ ಮಾರುಕಟ್ಟೆಗಳಲ್ಲಿ ಪ್ರಸ್ತುತ ಈ ಬೆಳವಣಿಗೆ ಮತ್ತು ಕೋವಿಡ್ ಪ್ರಕರಣಗಳ ಹಠಾತ್ ಏರಿಕೆಯಿಂದಾಗಿಮುಂಬರುವ ತಿಂಗಳುಗಳಲ್ಲಿ ಯಾವುದೇ ಗಮನಾರ್ಹ ಹೊಸ ಉದ್ಯೋಗಾವಕಾಶಗಳ ಕಂಡು ಬರುವುದಿಲ್ಲ ಎಂದು ತಜ್ಞರು ತಿಳಿಸಿದ್ದಾರೆ.

SCROLL FOR NEXT