ರಾಜ್ಯ

ಕೋವಿಡ್-19: ಜೀನೋಮಿಕ್ ಸೀಕ್ವೆನ್ಸಿಂಗ್ ನಡೆಸಲು ಬಿಎಂಸಿಆರ್'ಐಗೆ ಉಪಕರಣಗಳ ಕೊರತೆ

Manjula VN

ಬೆಂಗಳೂರು: ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯು (BMCRI), ಅಂತಾರಾಷ್ಟ್ರೀಯ ವಿಮಾನ ಪ್ರಯಾಣಿಕರು ಮತ್ತು ಕೋವಿಡ್ -19 ಸೋಂಕು ದೃಢಪಟ್ಟವರ ಜೀನೋಮಿಕ್ ಅನುಕ್ರಮ ನಡೆಸುತ್ತಿದ್ದು, ಸಂಸ್ಥೆಗೆ ಇದೀಗ ಪರೀಕ್ಷೆ ನಡೆಸಲು ಉಪಕರಣಗಳ ಕೊರತೆ ಎದುರಾಗಿದೆ ಎಂದು ತಿಳಿದುಬಂದಿದೆ.

ಜೀನೋಮಿಕ್ ಉಪಕ್ರಮ ದುಬಾರಿ ಪರೀಕ್ಷೆಯಾಗಿದೆ. ಒಂದು ಮಾದರಿಯ ಪರೀಕ್ಷಾ ಚಕ್ರ ನಿರ್ವಹಿಸಲು 10,000 ರೂ ಆಗಲಿದೆ. ಸಂಪೂರ್ಣ ಪರೀಕ್ಷಾ ಚಕ್ರಕ್ಕೆ ರೂ.8 ಲಕ್ಷ ರೂ ವೆಚ್ಚಾಗುತ್ತದೆ. ಒಂದು ಪರೀಕ್ಷಾ ಚಕ್ರದಲ್ಲಿ 96 ಮಾದರಿಗಳನ್ನು ಪರೀಕ್ಷಿಸಬಹುದು. ಇಲಾಖೆಯು ಇದೀಗ ಒಂದು ಚಕ್ರದಲ್ಲಿ ಸುಮಾರು 50 ಮಾದರಿಗಳನ್ನು ಮಾತ್ರ ಪರೀಕ್ಷೆ ನಡೆಸುತ್ತಿದೆ. ಮೊದಲ ಪರೀಕ್ಷಾ ಚಕ್ರದ ವರದಿಗಳು ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಇದು 10 ವಿಮಾನ ನಿಲ್ದಾಣದ ಪ್ರಯಾಣಿಕರ ವರದಿಗಳನ್ನು ಒಳಗೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಒಬ್ಬ ಪ್ರಯಾಣಿಕನಲ್ಲಿ ಓಮಿಕ್ರಾನ್ ರೂಪಾಂತರಿ  ವೈರಸ್'ನಿಂದ ಬಂದಿರುವ ಹೊಸ ತಳಿ ಬಿಎಫ್.7.4 ಪತ್ತೆಯಾಗಿದೆ. ಇನ್ನು ಕೆಲವರಲ್ಲಿ ಎಕ್ಸ್'ಬಿಬಿ ಮತ್ತು ಬಿಎ.2.75 ವೈರಸ್ ಪತ್ತೆಯಾಗಿದೆ. ಎರಡನೇ ಸೆಟ್ ಮಾದರಿಗಳನ್ನು ಇನ್ನೂ ಪರೀಕ್ಷೆಗೆ ಕಳುಹಿಸಲಾಗಿಲ್ಲ. ಈ ವಾರ ಪರೀಕ್ಷೆಗೆ ಕಳುಹಿಸುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.

ಬಿಎಂಸಿಆರ್‌ಐ ಡೀನ್ ಡಾ ರವಿ ಕೆ ಅವರು ಮಾತನಾಡಿ, ಪರೀಕ್ಷೆ ನಡೆಸಲು ನಮ್ಮಸಲ್ಲಿ ಸಾಕಷ್ಟು ಸಂಪನ್ಮೂಲ ಹಾಗೂ ಮಾನವ ಶಕ್ತಿಯಿದೆ. ನಮ್ಮಲ್ಲಿ ಸಲಕರೆಗಳ ಕೊರತೆಯಿಲ್ಲ. ಮುಂಬರುವ ದಿನಗಳಲ್ಲಿ ಹೆಚ್ಚಿನ ಉಪಕರಣಗಳನ್ನು ಖರೀದಿ ಮಾಡಲು ಚಿಂತನೆಗಳು ನಡೆದಿವೆ. ಇವುಗಳ ವೆಚ್ಚ ಭರಿಸಲು ಆಸ್ಪತ್ರೆ ಆರ್ಥಿಕವಾಗಿ ಸುಸಜ್ಜಿತವಾಗಿದೆ. ಅಗತ್ಯ ಸಂದರ್ಭಗಳಲ್ಲಿ ಸರ್ಕಾರವೂ ಬೆಂಬಲ ನೀಡುತ್ತಿದೆ ಎಂದಿದ್ದಾರೆ.

SCROLL FOR NEXT