ರಾಜ್ಯ

ಕೋಲ್ಡ್ ಸ್ಟೋರೇಜ್ ಘಟಕದ ಕೊರತೆ ಲಾಭ ಪಡೆಯುತ್ತಿರುವ ಮಹಾರಾಷ್ಟ್ರ: ಬ್ರ್ಯಾಂಡ್ ಸೃಷ್ಟಿಸಿಕೊಂಡು ರಾಜ್ಯದ ಒಣದ್ರಾಕ್ಷಿಗಳ ಮಾರಾಟ!

Manjula VN

ಬೆಂಗಳೂರು: ರಾಜ್ಯದಲ್ಲಿ ಕೋಲ್ಡ್ ಸ್ಟೋರೇಜ್ ಘಟಕಗಳ ಕೊರತೆ ಎದುರಾಗಿದ್ದು, ಇದರ ಲಾಭ ಪಡೆಯುತ್ತಿರುವ ಮಹಾರಾಷ್ಟ್ರ ರಾಜ್ಯವರು, ಕರ್ನಾಟಕದ ಒಣದ್ರಾಕ್ಷಿಗಳ ಪಡೆದುಕೊಂಡು ತನ್ನದೇ ಬ್ರ್ಯಾಂಡ್ ಸೃಷ್ಟಿಸಿ ಅವುಗಳನ್ನು ಮಾರಾಟ ಮಾಡುತ್ತಿದೆ ಎಂದು ತಿಳಿದುಬಂದಿದೆ.

ಮಹಾರಾಷ್ಟ್ರ ಬಳಿಕ ಕರ್ನಾಟಕ ದೇಶದಲ್ಲಿ ಅತೀ ಹೆಚ್ಚು ದ್ರಾಕ್ಷಿ ಬೆಳೆಯುವ ಎರಡನೇ ರಾಜ್ಯವಾಗಿದೆ. ಆದರೂ, ಒಟ್ಟು ಉತ್ಪನ್ನದ ಪೈಕಿ ಶೇ.25ರಷ್ಟು ದ್ರಾಕ್ಷಿಗಳ ಸಂರಕ್ಷಿಸಲು ಕೋಲ್ಡ್ ಸ್ಟೋರೇಜ್ ಘಟಕಗಳನ್ನು ಹೊಂದಿದೆ. ಕರ್ನಾಟಕದಲ್ಲಿ ವಿಜಯಪುರ, ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ 20,000 ಹೆಕ್ಟೇರ್‌ಗಳಲ್ಲಿ ದ್ರಾಕ್ಷಿಯನ್ನು ಬೆಳೆಯಲಾಗುತ್ತದೆ, ವಾರ್ಷಿಕವಾಗಿ ಸುಮಾರು 5 ಲಕ್ಷ ಟನ್‌ ದ್ರಾಕ್ಷಿಗಳನ್ನ ಬೆಳೆಯಲಾಗುತ್ತದೆ. 4 ಲಕ್ಷ ಟನ್ ದ್ರಾಕ್ಷಿಗಳ ಪೈಕಿ 1.25 ಲಕ್ಷ ಟನ್ ದ್ರಾಕ್ಷಿಗಳನ್ನ್ನು ಬಳಕೆ ಮಾಡಲಾಗುತ್ತದೆ. ಉಳಿದ ದ್ರಾಕ್ಷಿಯನ್ನು ವೈನ್ ತಯಾರಿಸಲು ಬಳಕೆ ಮಾಡಲಾಗುತ್ತದೆ. ಆದರೆ, ರಾಜ್ಯದಲ್ಲಿ ಕೇವಲ 30,000 ಕೆಜಿ ದ್ರಾಕ್ಷಿಗಷ್ಟೇ ಕೋಲ್ಡ್ ಸ್ಟೋರೇಜ್ ಘಟಕವಿದೆ.

ವಿಜಯಪುರ ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ ಎಂ.ಎಸ್.ರುದ್ರೇಗೌಡ ಮಾತನಾಡಿ, ರಾಜ್ಯದ ಹವಾಮಾನ ಮತ್ತು ಭೌಗೋಳಿಕ ಪರಿಸ್ಥಿತಿಗಳು ದ್ರಾಕ್ಷಿ ಬೆಳೆಗೆ ಅತ್ತ್ಯುತ್ತಮ ವಾತಾವರಣ ಸೃಷ್ಟಿಸುತ್ತದೆ. ರಾಜ್ಯ ಸರ್ಕಾರವು ಒಣದ್ರಾಕ್ಷಿಯಿಂದ ವಾರ್ಷಿಕ 2000 ಕೋಟಿ ರೂ ಆದಾಯವನ್ನು ಗಳಿಸುತ್ತದೆ. ಆದರೆ, ಕೋಲ್ಡ್ ಸ್ಟೋರೇಜ್ ಘಟಕಗಳ ಕೊರತೆ ಇಲ್ಲಿ ಎದುರಾಗಿದ್ದು. ಇದರ ಲಾಭವನ್ನು ಮಹಾರಾಷ್ಟ್ರ ರಾಜ್ಯ ಬಳಕೆ ಮಾಡಿಕೊಳ್ಳುತ್ತಿದೆ. ನಮ್ಮ ಒಣದ್ರಾಕ್ಷಿಗಳಿಗೆ ತನ್ನದೇ ಬ್ರ್ಯಾಂಡ್ ನೀಡಿ ಮಾರಾಟ ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಳೆದ ವರ್ಷ ತಮ್ಮ ಚೊಚ್ಚಲ ಬಜೆಟ್‌ನಲ್ಲಿ ವಿಜಯಪುರದ ತೊರವಿ ಗ್ರಾಮದಲ್ಲಿ 35 ಕೋಟಿ ರೂಪಾಯಿ ವೆಚ್ಚದಲ್ಲಿ ಕೋಲ್ಡ್ ಸ್ಟೋರೇಜ್ ಘಟಕ ಸ್ಥಾಪಿಸುವುದಾಗಿ ಘೋಷಿಸಿದ್ದರು. ಈ ಘೋಷಣೆಯಾಗಿ ಸುಮಾರು ಹತ್ತು ತಿಂಗಳು ಕಳೆದಿದೆ, ಯೋಜನೆ ಇನ್ನೂ ಕಾಗದದ ಮೇಲಷ್ಟೇ ಉಳಿದುಕೊಂಡಿದೆ.

ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಕೋಲ್ಡ್ ಸ್ಟೋರೇಜ್ ಘಟಕಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಬಯಸಿದೆ ಎಂದು ತೋಟಗಾರಿಕೆ ಇಲಾಖೆ ಮೂಲಗಳು ತಿಳಿಸಿವೆ.

ಸರ್ಕಾರವು ಭೂಮಿಯನ್ನು ಒದಗಿಸುತ್ತಿತ್ತು ಮತ್ತು ಉಳಿದ ವೆಚ್ಚವನ್ನು ಒಪ್ಪಂದ ಮಾಡಿಕೊಂಡ ವ್ಯಕ್ತಿಗಳು ಭರಿಸಬೇಕಿದೆ. ಆದರೆ, ಇದರತ್ತ ಯಾರೂ ಆಸಕ್ತಿ ತೋರಿಸುತ್ತಿಲ್ಲ. ಹೀಗಾಗಿ ವಿಳಂಬವಾಗುತ್ತಿದೆ' ಎಂದು ತಿಳಿಸಿದೆ.

ಕರ್ನಾಟಕ ವೈನ್ ಬೋರ್ಡ್‌ನ ವ್ಯವಸ್ಥಾಪಕ ನಿರ್ದೇಶಕ ಟಿ ಸೋಮು ಅವರು ಮಾತನಾಡಿ, ಸಿಎಂ ಬೊಮ್ಮಾಯಿ ಅವರು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ನಿಂದ ಸಾಲ ಪಡೆಯಲು ಒಪ್ಪಿಗೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ನಮ್ಮಲ್ಲಿ ಕೋಲ್ಡ್ ಸ್ಟೋರೇಜ್ ಸೌಲಭ್ಯಗಳ ಕೊರತೆಯಿದೆ, ಪ್ರಸ್ತುತ 10,000 ಮೆಟ್ರಿಕ್ ಟನ್ ಸಾಮರ್ಥ್ಯದ ಕೋಲ್ಡ್ ಸ್ಟೋರೇಜ್ ಸೌಲಭ್ಯವನ್ನು ರಾಜ್ಯ ಸರ್ಕಾರ ಸ್ಥಾಪಿಸಲಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಘಟಕಗಳ ಸ್ಥಾಪಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದಿದ್ದಾರೆ.

SCROLL FOR NEXT