ರಾಜ್ಯ

ಬೆಂಗಳೂರು: ಸಿಸಿಟಿವಿಯಲ್ಲಿ ದರೋಡೆಕೋರರ ಸುಳಿವು; ತಲಘಟ್ಟ ಪೊಲೀಸರ ಕರ್ತವ್ಯ ಪ್ರಜ್ಞೆ; 7 ಶಸ್ತ್ರಸಜ್ಜಿತ ಕಳ್ಳರ ಬಂಧನ

Shilpa D

ಬೆಂಗಳೂರು: ಒಂಟಿ ಮನೆಗೆ ದರೋಡೆ  ಮಾಡಲು ನುಗ್ಗಿದ್ದ ಗ್ಯಾಂಗ್ ಒಂದು ಸಿನಿಮೀಯ ರೀತಿಯಲ್ಲಿ ರೋಚಕವಾಗಿ ಸೆರೆಯಾದ ಘಟನೆ ತಲಘಟ್ಟಪುರ ಪೊಲೀಸ್  ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕನಕಪುರ ರಸ್ತೆಯ ನಾರಾಯಣ ನಗರದ ನಿವಾಸಿ ರಾಹುಲ್ ಬಾಲಗೋಪಾಲ್ ಎಂಬುವವರ ಮನೆಯಲ್ಲಿ ಬುಧವಾರ ಮುಂಜಾನೆ ಈ ಘಟನೆ ನಡೆದಿದೆ. ಫ್ಯಾಕ್ಟರಿ ನಡೆಸುತ್ತಿದ್ದು, ತಂದೆ ಹಾಗೂ ಸಹೋದರನೊಂದಿಗೆ ವಾಸವಾಗಿರುವ ಬಾಲಗೋಪಾಲ್ ಬೆಳಗ್ಗೆ 5.20ಕ್ಕೆ ಎದ್ದು ಕಾಫಿ ತಯಾರಿಸಲು ಅಡುಗೆ ಕೋಣೆಗೆ ತೆರಳಿದ್ದರು. ರೆಫ್ರಿಜರೇಟರ್ ತೆರೆದಿರುವುದನ್ನು ನೋಡಿದ್ದಾರೆ.

ಫ್ರಿಡ್ಜ್‌ನಲ್ಲಿ ಇರಿಸಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಕೆಳಗೆ ಬಿದ್ದಿರುವುದು ಕಂಡು ಬಂದಿದೆ. ಯಾರೋ ಕಳ್ಳರು ಮನೆಗೆ ನುಗ್ಗಿರುವ ಬಗ್ಗೆ ಅನುಮಾನಗೊಂಡ ರಾಹುಲ್‌, ಬೆಡ್‌ ರೂಮ್‌ಗೆ ತೆರಳಿ ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದಾಗ, ಐವರು ಅಪರಿಚಿತರು ಮಾರಕಾಸ್ತ್ರ ಹಿಡಿದು ಮನೆಯ ಫರ್ನಿಚರ್‌ಗಳ ಹಿಂದೆ ಅಡಗಿಕೊಂಡಿರುವುದು ಕಂಡು ಬಂದಿದೆ.

ತಕ್ಷಣ ಎಚ್ಚೆತ್ತ ರಾಹುಲ್‌, ನಿದ್ರೆಯಲ್ಲಿದ್ದ ತಂದೆಯನ್ನು ಎಬ್ಬಿಸಿ ದರೋಡೆಗೆ ಕಳ್ಳರು ಮನೆಗೆ ನುಗ್ಗಿರುವ ವಿಚಾರ ತಿಳಿಸಿದ್ದಾರೆ. ಸಮಯ ಪ್ರಜ್ಞೆ ಬಳಸಿ ಪೊಲೀಸ್‌ ಸಹಾಯವಾಣಿ 112ಗೆ ಕರೆ ಮಾಡಿ ಮನೆಗೆ ದುಷ್ಕರ್ಮಿಗಳು ನುಗ್ಗಿರುವ ವಿಷಯ ತಿಳಿಸಿದ್ದಾರೆ. ಅಷ್ಟರಲ್ಲಿ ಐವರು ದುಷ್ಕರ್ಮಿಗಳು, ರಾಹುಲ್‌ ಹಾಗೂ ಅವರ ತಂದೆಯ ಸಂಭಾಷಣೆ ಕೇಳಿಸಿಕೊಂಡು ಮನೆಯ ಗೆಸ್ಟ್‌ ರೂಮ್‌ಗೆ ತೆರಳಿ ಬಚ್ಚಿಟ್ಟುಕೊಂಡು ಒಳಗಿನಿಂದ ಬಾಗಿಲು ಲಾಕ್‌ ಮಾಡಿಕೊಂಡಿದ್ದಾರೆ. ಈ ನಡುವೆ ಕರೆ ಸ್ವೀಕರಿಸಿದ 10 ನಿಮಿಷದಲ್ಲೇ ತಲಘಟ್ಟಪುರ ಪೊಲೀಸ್‌ ಠಾಣೆಯ ಹೊಯ್ಸಳ ಗಸ್ತು ಸಿಬ್ಬಂದಿ ಉದ್ಯಮಿಯ ಮನೆ ಬಳಿ ಬಂದಿದ್ದು, ಗೆಸ್ಟ್‌ ರೂಮ್‌ನಲ್ಲಿ ಲಾಕ್‌ ಆಗಿದ್ದ ಐವರು ದುಷ್ಕರ್ಮಿಗಳನ್ನು ವಶಕ್ಕೆ ಪಡೆದು ಮಾರಕಾಸ್ತ್ರಗಳನ್ನು ಜಪ್ತಿ ಮಾಡಿದ್ದಾರೆ.

ಆರೋಪಿಗಳು 21-27 ವರ್ಷ ವಯಸ್ಸಿನವರಾಗಿದ್ದು, ಅವರಲ್ಲಿ ಆರು ಮಂದಿ ಬಿಹಾರ, ಯುಪಿ ಮತ್ತು ರಾಜಸ್ಥಾನ ಮೂಲದವರಾಗಿದ್ದರೆ, ಒಬ್ಬರು ಎಲೆಕ್ಟ್ರಾನಿಕ್ಸ್ ಸಿಟಿಯ ನಿವಾಸಿಯಾಗಿದ್ದಾರೆ. “ಅವರು ನಗರದ ಹೊರವಲಯದಲ್ಲಿರುವ ಪ್ರತ್ಯೇಕ ಮನೆಗಳಲ್ಲಿ ರೆಸಿ ನಡೆಸಿದರು ಮತ್ತು ಬಾಲಗೋಪಾಲ್ ನಿವಾಸದಲ್ಲಿ ಶೂನ್ಯವನ್ನು ನಡೆಸಿದರು. ಅವರು ಟೆರೇಸ್‌ಗೆ ಏರಲು ಕಿಟಕಿ ಗ್ರಿಲ್‌ಗಳನ್ನು ಬಳಸಿದರು. ಅವರಲ್ಲಿ ಐವರು ಟೆರೇಸ್‌ನ ಬಾಗಿಲು ಮುರಿದು ಮನೆಯೊಳಗೆ ಪ್ರವೇಶಿಸಿದರೆ, ಇಬ್ಬರು ಹೊರಗಿನ ಚಲನವಲನಗಳನ್ನು ವೀಕ್ಷಿಸಲು ಅಲ್ಲೇ ಇದ್ದರು, ”ಎಂದು ಪೊಲೀಸರು ಹೇಳಿದರು.

ದರೋಡೆಗೆ ಬಂದ ಏಳು ಮಂದಿ ದುಷ್ಕರ್ಮಿಗಳ ಪೈಕಿ ಇಬ್ಬರು ಮನೆಯ ತಾರಿಸಿ ಮೇಲೆ ನಿಂತು ಹೊರಗಿನ ಚಲನವಲನ ಗಮನಿಸುತ್ತಿದ್ದರು. ಉಳಿದ ಐವರು ಗೋಡೆಯ ಸಜ್ಜ ಸಹಾಯ ಪಡೆದು ತಾರಸಿ ಪ್ರವೇಶಿಸಿ ಕಬ್ಬಿಣದ ರಾಡ್‌ನಿಂದ ತಾರಸಿ ಬಾಗಿಲು ಮುರಿದು ಮನೆ ಪ್ರವೇಶಿಸಿದ್ದರು.

ಇತ್ತ ಹೋಯ್ಸಳ ವಾಹನ ಉದ್ಯಮಿ ಮನೆಯ ಬಳಿ ಬರುತ್ತಿದ್ದಂತೆ ತಾರಸಿ ಮೇಲೆ ಕಾವಲು ಕಾಯುತ್ತಿದ್ದ ಇಬ್ಬರು ದುಷ್ಕರ್ಮಿಗಳು ತಪ್ಪಿಸಿಕೊಂಡು ಪರಾರಿಯಾಗಿದ್ದರು. ಬಳಿಕ ಪೊಲೀಸರು ಈ ಇಬ್ಬರನ್ನು ಆನೇಕಲ್‌ನ ಬಸ್‌ ನಿಲ್ದಾಣದ ಬಳಿ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT