ರಾಜ್ಯ

ವಿದ್ಯುತ್ ದರ ಏರಿಕೆಗೆ ಎಸ್ಕಾಂ ಚಿಂತನೆ: ಎಫ್'ಕೆಸಿಸಿಐ ವಿರೋಧ

Manjula VN

ಬೆಂಗಳೂರು: ವಿದ್ಯುತ್ ದರವನ್ನು ಹೆಚ್ಚಳ ಮಾಡುವ ಸರ್ಕಾರದ ನಿರ್ಧಾರಕ್ಕೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟ (ಎಫ್‌ಕೆಸಿಸಿಐ) ವಿರೋಧ ವ್ಯಕ್ತಪಡಿಸಿದೆ.

ವಿದ್ಯುತ್ ದರಗಳ ಪರಿಷ್ಕರಿಸುವಂತೆ ರಾಜ್ಯದ ವಿದ್ಯುತ್ ಸರಬರಾಜು ನಿಗಮಗಳು (ಎಸ್ಕಾಂ) ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಈ ಹಿಂದೆ ಪತ್ರ ಬರೆದಿತ್ತು.

ಗೃಹ ಗ್ರಾಹಕರಿಗೆ ನೀಡಿರುವ ಸೌರ ನೀರಿನ ರಿಯಾಯಿತಿ, ಮುಕ್ತ ಪ್ರವೇಶ ಗ್ರಾಹಕರಿಗೆ ಗ್ರಿಡ್ ಬೆಂಬಲ ಶುಲ್ಕ ವಿಧಿಸುವುದು ಮತ್ತು ನಿಗದಿತ ಶುಲ್ಕವನ್ನು ಹೆಚ್ಚಿಸುವುದು ಸೇರಿದಂತೆ ವಿಶೇಷ ಪ್ರೋತ್ಸಾಹಕ ಯೋಜನೆಗಳನ್ನು ಹಿಂಪಡೆಯಲು ಎಸ್ಕಾಂ ಒತ್ತಾಯಿಸಿತ್ತು.

ಇದಕ್ಕೆ ಎಫ್‌ಕೆಸಿಸಿಐ ವಿರೋಧ ವ್ಯಕ್ತಪಡಿಸಿದ್ದು, ಇದು ಸಣ್ಣ ಮತ್ತು ಮಧ್ಯಮ ಉದ್ಯಮಗಳ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ. ಬೆಲೆ ಏರಿಕೆಯು ಉತ್ಪಾದನೆ ಮತ್ತು ಸೇವಾ ವಲಯದ ಮೇಲೆ ಗಂಭೀರ ಪರಿಣಾಮ ಬೀರುಲಿದ್ದು, ಎಸ್ಕಾಂ ಮನವಿ ಪರಿಗಣಿಸದಂತೆ ಒತ್ತಾಯಿಸಿದೆ.

SCROLL FOR NEXT