ಸಂಗ್ರಹ ಚಿತ್ರ 
ರಾಜ್ಯ

ಸೈಕ್ಲಿಸ್ಟ್ ಜೀವ ಉಳಿಸಿದ ವೈದ್ಯರ 'ನ್ಯೂರೋ ರಿಹ್ಯಾಬಿಲಿಟೇಷನ್' ಚಿಕಿತ್ಸೆ

ಅಮೆರಿಕಾದಲ್ಲಿ ಸೈಕಲ್ ಸವಾರಿ ವೇಳೆ ಅಪಘಾತಕ್ಕೀಡಾಗಿ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರಿಗೆ ನಗರದ ವೈದ್ಯರು ಚಿಕಿತ್ಸೆ ನೀಡಿದ್ದು, ಹೊಸ ಜೀವನ ನೀಡಿದ್ದಾರೆ.

ಬೆಂಗಳೂರು: ಅಮೆರಿಕಾದಲ್ಲಿ ಸೈಕಲ್ ಸವಾರಿ ವೇಳೆ ಅಪಘಾತಕ್ಕೀಡಾಗಿ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರಿಗೆ ನಗರದ ವೈದ್ಯರು ಚಿಕಿತ್ಸೆ ನೀಡಿದ್ದು, ಹೊಸ ಜೀವನ ನೀಡಿದ್ದಾರೆ.

ಅಮೆರಿಕಾದಲ್ಲಿ ನೆಲೆಯೂರಿದ್ದ ಪ್ರವೀಣ್ ರಾಜ್ ರಾಧಾ (36) ಅವರು, ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. 2022ರ ಡಿಸೆಂಬರ್ ತಿಂಗಳಿನಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದ ಅಲ್ಲಿನ ವೈದ್ಯರು, ಅವರು ಬದುಕುಳಿಯುವ ಸಾಧ್ಯತೆ ಶೇ.1 ಎಂದ ಹೇಳಿದ್ದರು.

ಪ್ರವೀಣ್ ಅವರು ಕೋಮಾ ಸ್ಥಿತಿಗೆ ತಲುಪಿದ್ದರು. ದೇಹದಲ್ಲಿ ಚಲನಶೀಲತೆಗಳಿರಲಿಲ್ಲ. ಅಮೆರಿಕಾದಲ್ಲಿ 3-4 ವಾರಗಳ ಕಾಲ ವೆಂಟಿಲೇರ್ ನಲ್ಲಿ ಸಪೋರ್ಟ್ ನಲ್ಲಿದ್ದರು. ಆದರೂ ಆರೋಗ್ಯ ಸ್ಥಿತಿ ಮಾತ್ರ ಸುಧಾರಿಸಿರಲಿಲ್ಲ. ಚಿಕಿತ್ಸೆ ನೀಡಿದ್ದ ವೈದ್ಯರು ಬದುಕುಳಿಯುವ ಸಾಧ್ಯತೆ ಶೇ.1 ರಷ್ಟಿದೆ ಎಂದು ಹೇಳಿದ್ದರು.

ವೈದ್ಯರ ಈ ಮಾತುಗಳನ್ನು ಕೇಳಿದ್ದ ಕುಟುಂಬಸ್ಥರು ಆತಂಕಕ್ಕೊಳಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ನಗರಕ್ಕೆ ಕರೆತಂದು,  ಸಕ್ರಾ ವರ್ಲ್ಡ್ ಆಸ್ಪತ್ರೆಗೆ ದಾಖಲಿಸಿದರು.

ಆಸ್ಪತ್ರೆಗೆ ದಾಖಲಾಗುವ ವೇಳೆ ಪ್ರವೀಣ್ ಹಾಸಿಗೆ ಹಿಡಿದ ಸ್ಥಿತಿಯಲ್ಲಿದ್ದರು. ನ್ಯೂರೋ ರಿಹ್ಯಾಬಿಲಿಟೇಷನ್'ಗಾಗಿ ಡಾ.ಮಹೇಶ್ವರಪ್ಪ ಬಿ.ಎಂ ಅವರು ಪರಿಶೀಲನೆ ನಡೆಸಿದರು. ವೈದ್ಯರ ಪರೀಕ್ಷೆ ಬಳಿಕ ಪ್ರವೀಣ್ ಅವರಿಗೆ ನ್ಯೂರೋ ರಿಹ್ಯಾಬಿಲಿಟೇಷನ್ (ನರಗಳ ಪುನರ್ವಸತಿ ಚಿಕಿತ್ಸೆ) ನೀಡಲಾಯಿತು. ಇದೀಗ 5 ತಿಂಗಳ ಯಶಸ್ವಿ ಚಿಕಿತ್ಸೆ ಬಳಿಕ ಪ್ರವಾಣ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಇದೀಗ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಚಿಕಿತ್ಸೆ ಬಗ್ಗೆ ಮಾಹಿತಿ ನೀಡಿರುವ ಡಾ.ಮಹೇಶ್ವರಪ್ಪ ಅವರು, ಗಂಭೀರ ಮಿದುಳು ಗಾಯಗಳಿಗ ಒಳಗಾದವರ ಗುಣಪಡಿಸುವಲ್ಲಿ ನ್ಯೂರೋ ರಿಹ್ಯಾಬಿಲಿಟೇಷನ್ ಚಿಕಿತ್ಸೆ ಮಹತ್ವದ ಪಾತ್ರ ವಹಿಸುತ್ತದೆ. ರೋಗಿಯ ಸ್ಥಿತಿಯನ್ನು ಆಧರಿಸಿ ಈ ಚಿಕಿತ್ಸೆಯನ್ನು ನೀಡಲಾಗುತ್ತದೆ. ವ್ಯಕ್ತಿಯಲ್ಲಿ ಆರೋಗ್ಯದಲ್ಲಿ ಸುಧಾರಣೆ ತರಲು ಹಲವಾರು ಸುಧಾರಿತ ತಂತ್ರಜ್ಞಾನಗಳನ್ನು ಬಳಕೆ ಮಾಡಲಾಯಿತು. ಇದೀಗ ಅವರ ಆರೋಗ್ಯ ಸ್ಥಿತಿ ಗಮನಾರ್ಹ ರೀತಿಯಲ್ಲಿ ಸುಧಾರಿಸಿದೆ. ಇದೀಗ ನಿಲ್ಲಲು ಹಾಗೂ ಮಾತನಾಡುವ ಸ್ಥಿತಿಗೆ ತಲುಪಿದ್ದಾರೆ. ಚಿಕಿತ್ಸೆ ಇನ್ನೂ ಮುಂದುವರೆದಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

SCROLL FOR NEXT