ರಾಜ್ಯ

ಹಾಸನ: ಪ್ರಜಾಧ್ವನಿ ಯಾತ್ರೆ ವೇಳೆ ಸಿದ್ದರಾಮಯ್ಯ ಮೇಲಿನ ಹಾಡನ್ನು ತಡೆದ ಡಿಕೆ ಸುರೇಶ್

Srinivas Rao BV

ಹಾಸನ: ಸಂಸದ ಡಿ.ಕೆ ಸುರೇಶ್ ಸಿದ್ದರಾಮಯ್ಯ ಅವರ ಮೇಲಿನ ಹಾಡನ್ನು ಹಾಡದಂತೆ ಹಾಡುಗಾರನಿಗೆ ಸೂಚಿಸಿ ತಡೆದ ಘಟನೆ ಹಾಸನದ ಪ್ರಜಾಧ್ವನಿ ಯಾತ್ರೆ ವೇಳೆ ವರದಿಯಾಗಿದೆ. 

ಪ್ರಜಾಧ್ವನಿ ಯಾತ್ರೆಯಲ್ಲಿ ಜಾನಪದ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು, ವೇದಿಕೆಯ ಮೇಲಿದ್ದ ಹಾಡುಗಾರ ಸಿದ್ದರಾಮಯ್ಯ ಅವರ ಆಡಳಿತವನ್ನು ಮೆಚ್ಚುವ ಹಾಗೂ ಸಿದ್ದರಾಮಯ್ಯ ಅವರನ್ನು ಹೊಗಳುವ "ಸಿದ್ದರಾಮಯ್ಯ ಹಿಡಿದ ಬಡವರ ಕೈಯ್ಯ" ಹಾಡನ್ನು ಹಾಡುವುದಾಗಿ ಘೋಷಿಸಿದರು. 

ವೇದಿಕೆಯ ಮೇಲಿದ್ದ ಡಿ.ಕೆ ಸುರೇಶ್, ತಕ್ಷಣವೇ ತಡೆದು ಯಾವುದೇ ನಾಯಕರ ಮೇಲೆ ಹಾಡು ಹಾಡದಂತೆ ಸೂಚಿಸಿದರು. ಈ ಘಟನೆ ನಡೆದಾಗ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾಜಿ ಸಚಿವರು ಪಕ್ಷದ ಹಿರಿಯ ನಾಯಕರು ವೇದಿಕೆ ಮೇಲೆ ಇರಲಿಲ್ಲ. ಅಂತಿಮವಾಗಿ ನಾಯಕರು ಮಧ್ಯಾಹ್ನ 3 ಗಂಟೆಗೆ ಕಾರ್ಯಕ್ರಮಕ್ಕೆ ಆಗಮಿಸಿದರೆ, ಸಿದ್ದರಾಮಯ್ಯ 3:30 ಗೆ ಆಗಮಿಸಿದರು. ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಡಿ.ಕೆ ಶಿವಕುಮಾರ್, ತಮ್ಮ ಭಾಷಣದಲ್ಲಿ ತಾವೂ ಮತ್ತು ಸಿದ್ದರಾಮಯ್ಯ ಒಗ್ಗಟ್ಟಿನಿಂದ ಇದ್ದೇವೆ ಎಂಬ ಸಂದೇಶ ನೀಡಲು ಯತ್ನಿಸಿದರು.

ತಮ್ಮ ಭಾಷಣದಲ್ಲಿ ನಿರಂತವಾಗಿ ಸಿದ್ದರಾಮಯ್ಯ ಅವರ ಹೆಸರನ್ನು ಉಲ್ಲೇಖಿಸಿದರು. ಅಷ್ಟೇ ಅಲ್ಲದೇ ರೀ ಸ್ವಾಮಿ (ಸಿದ್ದರಾಮಯ್ಯ) ನಾನು ಮತ್ತು ನೀವು ಸೇರಿ  ನಾವು ನೀಡಿದ ಆಶ್ವಾಸನೆಗಳನ್ನು ಜಾರಿಗೆ ತರಲು ಸಿದ್ದರಿದ್ದೇವೆ ಅಲ್ವಾ? ಎಂದು ಕೇಳಿದರು. ಮಾಜಿ ಸಚಿವ ಹೆಚ್ಎಂ ರೇವಣ್ಣ ಅವರು ಸಿದ್ದರಾಮಯ್ಯ ಅವರನ್ನು ಎಚ್ಚರಿಸಿದ ಬೆನ್ನಲ್ಲೇ ಇದಕ್ಕೆ ಹೌದು ಎಂಬ ಸಂಕೇತದಲ್ಲಿ ಡಿ.ಕೆ ಶಿವಕುಮಾರ್ ಅವರತ್ತ ಸಿದ್ದರಾಮಯ್ಯ ಹೆಬ್ಬೆರಳು ತೋರಿದರು. ಆದರೆ ಅಚ್ಚರಿ ಎಂದರೆ ಸಿದ್ದರಾಮಯ್ಯ ಅವರು ತಮ್ಮ ಭಾಷಣದಲ್ಲಿ ಎಲ್ಲೂ ಡಿ.ಕೆ ಶಿವಕುಮಾರ್ ಅವರ ಹೆಸರನ್ನು ಎಲ್ಲೂ ಉಲ್ಲೇಖಿಸಲಿಲ್ಲ.

SCROLL FOR NEXT