ರಾಜ್ಯ

ಕಾವೇರಿ ವನ್ಯಜೀವಿ ಅಭಯಾರಣ್ಯದಲ್ಲಿ ಅಪರೂಪದ ಘಟನೆ: ಕ್ಯಾಮರಾ ಕಣ್ಣಿಗೆ ಕಂಡ ಕಾಡು ನಾಯಿ

Srinivas Rao BV

ಬೆಂಗಳೂರು: ಹುಲಿ, ಚಿರತೆ, ಸೇರಿದಂತೆ ಆರೋಗ್ಯಕರವಾಗಿರುವ ಹಲವು ವನ್ಯಜೀವಿಗಳನ್ನು ಹೊಂದಿರುವ ರಾಜ್ಯದಲ್ಲಿ ಮತ್ತೊಂದು ಅಪರೂಪದ ವನ್ಯಜೀವಿ ಕಂಡಿದೆ. 

ಕಾಡು ನಾಯಿ ಕಾವೇರಿ ವನ್ಯಜೀವಿ ಅಭಯಾರಣ್ಯದಲ್ಲಿ ಪತ್ತೆಯಾಗಿದ್ದು, ಅರಣ್ಯಾಧಿಕಾರಿಗಳ ಪ್ರಕಾರ ರಾಜ್ಯದಲ್ಲಷ್ಟೇ ಅಲ್ಲದೇ ದೇಶದಲ್ಲೇ ಇದೇ ಮೊದಲ ಬಾರಿಗೆ ಕಾಡು ನಾಯಿ ಕಂಡಿರುವುದಂತೆ. 

ವನ್ಯಜೀವಿ ಅಭಯಾರಣ್ಯದ ಗಸ್ತು ತಂಡಕ್ಕೆ ಈ ಕಾಡು ನಾಯಿ (albino dhole) ಮೊದಲು ಕಾಣಸಿಕ್ಕಿದ್ದು, ಸೆರೆಯಾಗಿರುವ ಕ್ಯಾಮರಾ ದೃಶ್ಯಗಳೂ ಕಾಡು ನಾಯಿ ಈ ಪ್ರದೇಶದಲ್ಲಿರುವುದು ದೃಢಪಡಿಸಿವೆ. 

ಈ ವರೆಗೂ ಅರಣ್ಯ ಇಲಾಖೆ ಈ ಅಪರೂಪದ ವನ್ಯಜೀವಿ ಕಂಡಿರುವುದನ್ನು ಗೌಪ್ಯವಾಗಿರಿಸಿತ್ತು. ಈಗ ಮಾಹಿತಿಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿದೆ.

ನಾವು ಈ ಹಿಂದೆ ಕೆಲವು ಬಾರಿ ಕ್ಯಾಮರಾದಲ್ಲಿ ಕಾಡುನಾಯಿಯನ್ನು ನೋಡಿದ್ದೆವು. ಈ ಪ್ರಾಣಿ ಹೆಣ್ಣೋ ಗಂಡೋ ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ಪ್ರಾಣಿಗಳ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದು ಕಾವೇರಿ ವನ್ಯಜೀವಿ ಅಭಯಾರಣ್ಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಲ್ ನಂದೀಶ್ ಹೇಳಿದ್ದಾರೆ. 

ಈ ಅಪರೂಪದ ಪ್ರಾಣಿ ಸಂಗಮ ಪ್ರದೇಶದಲ್ಲಿ ಕಂಡಿದ್ದು, ಇಲಾಖೆ, ವನ್ಯಜೀವಿ ಸಂರಕ್ಷಕರು ಮತ್ತು ಸಂಶೋಧಕ ಸಂಜಯ್ ಗುಬ್ಬಿ ಅವರ ಕ್ಯಾಮರಾಗಳಲ್ಲೂ ಈ ಪ್ರಾಣಿಯ ದೃಶ್ಯಗಳು ಸೆರೆಯಾಗಿವೆ. ಈ ವರೆಗೂ ಈ ಪ್ರಭೇದಕ್ಕೆ ಸೇರಿದಂತೆ ಒಂದೇ ಪ್ರಾಣಿ ಪತ್ತೆಯಾಗಿದೆ ಎಂದು ನಂದೀಶ್ ಮಾಹಿತಿ ನೀಡಿದ್ದಾರೆ.

ಅರಣ್ಯ ಪ್ರದೇಶದಲ್ಲಿ ಕಾಡುನಾಯಿಯ ಸಂಖ್ಯೆ ಆರೋಗ್ಯಕರವಾಗಿದ್ದು ಹತ್ತಿರ ಹತ್ತಿರ ಚಿರತೆಗಳಷ್ಟೇ ಸಂಖ್ಯೆಯಲ್ಲಿವೆ.  ಕೆಲವೊಮ್ಮೆ 30 ಕ್ಕೂ ಹೆಚ್ಚು ಕಾಡುನಾಯಿಗಳು ಒಟ್ಟಿಗೆ ತಿರುಗುತ್ತಿರುತ್ತವೆ. ಅಭಯಾರಣ್ಯದಲ್ಲಿ ಚಿರತೆಗಳ ಸಂಖ್ಯೆ ಅಂದಾಜು 200 ಕ್ಕೆ ತಲುಪಿದೆ. ಕಾಡುನಾಯಿಗಳ ಸಂಖ್ಯೆ ಇನ್ನಷ್ಟೇ ತಿಳಿಯಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಈ ಅಪರೂಪದ ದೃಶ್ಯವನ್ನು ಕಂಡಿರುವ ಅರಣ್ಯಾಧಿಕಾರಿಗಳಿಗೆ ಈಗ ಮನುಷ್ಯರು ಇದನ್ನು ಬೇಟೆಯಾಡುವ ಆತಂಕ ಮೂಡಿದೆ. ಇದನ್ನು ತಡೆಗಟ್ಟುವ ಉದ್ದೇಶದಿಂದ ಅರಣ್ಯದ ಪ್ರದೇಶಗಳಲ್ಲಿ ಗಸ್ತು ಹೆಚ್ಚಿಸಲಾಗಿದೆ ಎಂದು ನಂದೀಶ್ ತಿಳಿಸಿದ್ದಾರೆ.

SCROLL FOR NEXT