ರಾಜ್ಯ

ಬಜೆಟ್‌ಗೂ ಮುನ್ನ 2 ಲಕ್ಷ ಸಸಿ ನೆಡುವ ಅಭಿಯಾನ ಪೂರ್ಣಗೊಳಿಸಲು ಬಿಬಿಎಂಪಿ ಅರಣ್ಯ ವಿಭಾಗ ಮುಂದು!

Manjula VN

ಬೆಂಗಳೂರು: ಬೆಂಗಳೂರಿನಾದ್ಯಂತ ಎರಡು ಲಕ್ಷ ಮರಗಳ ಸಸಿಗಳ ನೆಡುವ ಅಭಿಯಾನಕ್ಕೆ ಚಾಲನೆ ನೀಡಿರುವ ಬಿಬಿಎಂಪಿ ಅರಣ್ಯ ವಿಭಾಗವು, ಈಗಾಗಲೇ ಶೇ 70ರಷ್ಟು ಗುರಿ ಸಾಧಿಸಿದ್ದು, ಬಜೆಟ್‌ಗೂ ಮುನ್ನ ಅಭಿಯಾನ ಪೂರ್ಣಗೊಳಿಸಲು ಮುಂದಾಗಿದೆ.

ಬಿಬಿಎಂಪಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಸರೀನಾ ಸಿಕ್ಕಲಿಗಾರ್ ಮಾತನಾಡಿ, ಟೆಂಡರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೆಲವು ಗುತ್ತಿಗೆದಾರರು ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ಅಭಿಯಾನಕ್ಕೆ ಕೆಲ ಹಿನ್ನಡೆಯುಂಟಾಗಿತ್ತು. ನಂತರ ಅಭಿಯಾನಕ್ಕಿದ್ದ ಎಲ್ಲಾ ಅಡೆತಡೆಗಳನ್ನು ದೂರಾಗಿಸಲಾಯಿತು. ಇದೀಗ ಮರಳಿ ಅಭಿಯಾನವನ್ನು ಆರಂಭಿಸಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಮುನ್ನ 1 ಲಕ್ಷ ಸಸಿ ನೆಡುವ ಅಭಿಯಾನ ಆರಂಭಿಸಿದ್ದೆವು. ಅದು ಸಾಧ್ಯವಾಗದ ಕಾರಣ, ಇದೀಗ ನಮ್ಮ ಗುರಿಯನ್ನು ದ್ವಿಗುಣಗೊಳಿಸಿ ಅಭಿಯಾನ ಮುಂದುವರೆಸಿದ್ದೇವೆ. ಇದೂವರೆಗೆ ಎಲ್ಲಾ 8 ವಲಯಗಳಲ್ಲಿ ಶೇ.70ರಷ್ಟು ಗುರಿಯನ್ನು ತಲುಪಲಾಗಿದೆ. ಸಸ್ಯದ ಗಾತ್ರವು 10x16 ಅಡಿ ಎತ್ತರ ಇರಲಿದೆ. ಮಹೋಗಾನಿ, ಬರ್ಡ್ ಚೆರ್ರಿ, ಜಾಮೂನ್, ಹೊಂಗೆ, ಟಬೂಬಿಯಾ ಮತ್ತು ಇತರ ಸ್ಥಳೀಯ ಪ್ರಭೇದಗಳಂತಹ ಸಸ್ಯಗಳನ್ನು ನೆಡಲಾಗಿದೆ. ಉಳಿದ ಸಸಿಗಳನ್ನು ಶೀಘ್ರದಲ್ಲಿ ನೆಡುತ್ತೇವೆಂದು ತಿಳಿಸಿದ್ದಾರೆ.

"ಬಿಲ್‌ಗಳನ್ನು ಇತ್ಯರ್ಥಪಡಿಸುವ ಅವಧಿ ಮೂರು ವರ್ಷಗಳಾಗಿದ್ದು, ಗುತ್ತಿಗೆದಾರರ ಬಿಲ್ ಗಳನ್ನು ಆಯಾ ಪ್ರದೇಶದ ಅರಣ್ಯಾಧಿಕಾರಿಗಳು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿಂದ ತಪಾಸಣೆ ನಡೆಸಿ, ಸಮಗ್ರ ವರದಿಯ ಆಧಾರದ ಮೇಲೆ ಇತ್ಯರ್ಥಗೊಳಿಸಲಾಗುತ್ತದೆ ಎಂದಿದ್ದಾರೆ.

ಬಿಬಿಎಂಪಿಯ ಸುವ್ಯವಸ್ಥಿತ ಅರಣ್ಯ ವಿಭಾಗದ ಅಡಿಯಲ್ಲಿ, ಗುತ್ತಿಗೆದಾರರು ಮರ ನೆಡುವ ಮತ್ತು ಅದರ ಸ್ಥಳದ ಫೋಟೋವನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ. ತೋಟದ ಸ್ಥಳವನ್ನು ಸಹ ಜಿಯೋ ಟ್ಯಾಗ್ ಮಾಡಲಾಗುತ್ತದೆ. ಗುತ್ತಿಗೆದಾರರು ಸಸ್ಯ ಸುರಕ್ಷತೆಗಾಗಿ ನಿಯಮಿತ ನೀರು ಮತ್ತು ಟ್ರೀ ಗಾರ್ಡ್‌ನಂತಹ ಮರಗಳ ನಿರ್ವಹಣೆಯ ದಾಖಲೆಗಳನ್ನು ತೋರಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

SCROLL FOR NEXT