ಸಿಎಂ ಸಿದ್ದರಾಮಯ್ಯ 
ರಾಜ್ಯ

13 ಬಾರಿ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯನವರ ಬಜೆಟ್ ಕೌಶಲ್ಯ ಒರೆಗೆ ಹಚ್ಚುವ ಸಮಯ; ಈ ಬಾರಿ ಕಠಿಣ ಪರೀಕ್ಷೆ!

ರಾಜ್ಯ ಕಾಂಗ್ರೆಸ್ ಸರ್ಕಾರದ ಚೊಚ್ಚಲ ಬಜೆಟ್ ನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇದೇ ಜುಲೈ 7ರಂದು ಮಂಡಿಸಲಿದ್ದಾರೆ. ಹಣಕಾಸು ಸಚಿವರಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 14ನೇ ಬಾರಿ ಮಂಡಿಸುತ್ತಿರುವ ಬಜೆಟ್ ಇದಾಗಿದೆ.

ಮೈಸೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಚೊಚ್ಚಲ ಬಜೆಟ್ ನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇದೇ ಜುಲೈ 7ರಂದು ಮಂಡಿಸಲಿದ್ದಾರೆ. ಹಣಕಾಸು ಸಚಿವರಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 14ನೇ ಬಾರಿ ಮಂಡಿಸುತ್ತಿರುವ ಬಜೆಟ್ ಇದಾಗಿದೆ.

ಕಾಂಗ್ರೆಸ್ ಸರ್ಕಾರ ಜನರಿಗೆ ನೀಡಿದ ಗ್ಯಾರಂಟಿಗಳನ್ನು ಹೇಗೆ ಈಡೇರಿಸುತ್ತದೆ, ಗ್ಯಾರಂಟಿ ಯೋಜನೆಗಳ ಮಧ್ಯೆ ಅಭಿವೃದ್ಧಿ ಕಾರ್ಯಗಳಿಗೆ ಹೇಗೆ ಅನುದಾನ ನೀಡುತ್ತದೆ,  ಆರ್ಥಿಕ ವಿವೇಕವನ್ನು ಸರ್ಕಾರ ಹೇಗೆ ಪ್ರದರ್ಶಿಸುತ್ತದೆ ಎಂಬುದರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. 

ಸಿದ್ದರಾಮಯ್ಯನವರು ಆರ್ಥಿಕತೆಯ ಬಗ್ಗೆ ಉತ್ತಮ ತಿಳುವಳಿಕೆಯನ್ನು ಹೊಂದಿದ್ದಾರೆಂದು ತಿಳಿದಿದ್ದರೂ, ಅವರ ರಾಜಕೀಯ ಜೀವನದಲ್ಲಿ ಇದು ಕಠಿಣ ಬಜೆಟ್ ಎನ್ನಬಹುದು. ಕಾಂಗ್ರೆಸ್ ಚುನಾವಣಾ ಉಸ್ತುವಾರಿಯನ್ನು ಮುನ್ನಡೆಸುತ್ತಿರುವ ಅವರಿಗೆ ಪಕ್ಷವು ಚುನಾವಣೆ ಗೆಲ್ಲುವ ಆತಂಕದಲ್ಲಿ ಹೆಚ್ಚಿನ ಸ್ವಾತಂತ್ರ್ಯವನ್ನು ಹೊಂದಿರಲಿಲ್ಲ, ಜನಪ್ರಿಯ ಘೋಷಣೆಗಳ ಮೇಲೆಯೇ ಕಾಂಗ್ರೆಸ್ ಗಮನಹರಿಸಿತ್ತು. ಸರ್ಕಾರದ ಕೆಲಸಗಳು, ಅಭಿವೃದ್ಧಿ ಯೋಜನೆಗಳ ನೀಲನಕ್ಷೆಯನ್ನು ಮುಖ್ಯಮಂತ್ರಿಗಳಿಗೆ ನೀಡಲಾಗಿದ್ದು ಅವರು ಅದನ್ನು ಹೇಗೆ ಪೂರೈಸುತ್ತಾರೆ ಎನ್ನುವುದು ಸದ್ಯದ ಕುತೂಹಲ.

ಐದು ಗ್ಯಾರಂಟಿಗಳು: ಸರ್ಕಾರವು ಚುನಾವಣಾ ಪೂರ್ವ ಕೊಟ್ಟಿದ್ದ ಐದು ಭರವಸೆಗಳನ್ನು ಈಡೇರಿಸುವ ಆತುರದಲ್ಲಿದ್ದು ಈ ವರ್ಷಾಂತ್ಯಕ್ಕೆ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆ ಮತ್ತು ಮುಂದಿನ ವರ್ಷ ಏಪ್ರಿಲ್-ಮೇಯಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆ ಮೇಲೆ ಕೂಡ ಕಾಂಗ್ರೆಸ್ ಸರ್ಕಾರ ಗಮನಹರಿಸಿ ಸೂಕ್ಷ್ಮವಾಗಿ ಬಜೆಟ್ ಮಂಡಿಸಬೇಕಿದೆ. 

ಗ್ಯಾರಂಟಿ ಯೋಜನೆಗಳನ್ನು ಈಡೇರಿಸುವುದರ ಮಧ್ಯೆ ನೀರಾವರಿ, ಮೂಲಸೌಕರ್ಯ, ರಸ್ತೆಗಳು, ಕೃಷಿ, ವಿದ್ಯುತ್ ಮತ್ತು ಇತರ ಕ್ಷೇತ್ರಗಳಂತಹ ಪ್ರಮುಖ ಕ್ಷೇತ್ರಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಪಕ್ಷದ ರಾಜಕೀಯ ಅಜೆಂಡಾದಿಂದಾಗಿ ಅಭಿವೃದ್ಧಿ ಹಿನ್ನಡೆಯಾಗಿದೆ ಎಂದು ಆರೋಪಿಸುವುದಕ್ಕೆ ಇದು ಪ್ರತಿಪಕ್ಷಗಳಿಗೆ ಅವಕಾಶ ನೀಡುತ್ತದೆ. ಕಳೆದ ಮೂರು ವರ್ಷಗಳಲ್ಲಿ ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಹಳಿತಪ್ಪಿರುವ ಆರ್ಥಿಕತೆಯನ್ನು ಮತ್ತೆ ಯಥಾಸ್ಥಿತಿಗೆ ತರಬೇಕಿದೆ. ಕೃಷಿಗೆ ಆಗಾಗ ಹವಾಮಾನ ಕೈಕೊಡುತ್ತಿರುವುದು ಸಮಸ್ಯೆಯಾಗಿದೆ.

ಮಾನ್ಸೂನ್‌ನಲ್ಲಿ ವಿಳಂಬವಾದರೆ ಬರಗಾಲದಂತಹ ಪರಿಸ್ಥಿತಿ ಉಂಟಾಗಬಹುದು. ಅದನ್ನು ಪರಿಹರಿಸಲು ಯೋಜನೆಯನ್ನು ರೂಪಿಸಲು ರಾಜ್ಯವನ್ನು ಒತ್ತಾಯಿಸುತ್ತದೆ. ಫೆಡರಲ್ ರಚನೆಯಲ್ಲಿ, ರಾಜ್ಯವು ಸೀಮಿತ ಸಂಪನ್ಮೂಲಗಳನ್ನು ಹೊಂದಿದೆ. ಅಬಕಾರಿ ಸುಂಕ, ಸ್ಟಾಂಪ್ ಸುಂಕ ಮತ್ತು ವಿದ್ಯುತ್ ಸುಂಕವನ್ನು ಹೆಚ್ಚಿಸುವುದನ್ನು ಹೊರತುಪಡಿಸಿ ಸಂಪನ್ಮೂಲಗಳನ್ನು ಸಜ್ಜುಗೊಳಿಸುವುದು ಕಷ್ಟ. 

ಸಾಲ ಪಡೆಯಲು ಕೇಂದ್ರ ಅಥವಾ ಆರ್‌ಬಿಐ ಮೊರೆ ಹೋಗಬೇಕು. ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ಅಕ್ಕಿ ನೀಡದಿದ್ದರೆ ಅನ್ನ ಭಾಗ್ಯ ಯೋಜನೆಯ ಸರಾಗ ಜಾರಿಗೆ ಸರ್ಕಾರಕ್ಕೆ ಮತ್ತಷ್ಟು ಸಂಕಷ್ಟ ಉಂಟಾಗಬಹುದು. ಪಕ್ಷದ ಭರವಸೆಗಳನ್ನು ಪೂರೈಸಲು ಸಾಲದ ಮೊರೆ ಹೋದರೆ ಪ್ರತಿಪಕ್ಷಗಳಿಗೆ ಅದು ಅಸ್ತ್ರವಾಗಬಹುದು. ಸರ್ಕಾರ ಹಣಕಾಸಿನ ನಿರ್ವಹಣೆಯನ್ನು ಕಳಪೆಯಾಗಿ ಮಾಡಿದರೆ ಅದು ಸಾರ್ವಜನಿಕ ಟೀಕೆಗೆ ಸಹ ಗುರಿಯಾಗಬಹುದು.

ಲೋಕಸಭೆ ಚುನಾವಣೆ 2024: ಲೋಕಸಭೆ ಚುನಾವಣೆಯ ಪೂರ್ವದಲ್ಲಿ ಜನರ ಮನಸ್ಸಿನಲ್ಲಿ ಉತ್ತಮ ಭಾವನೆ ಮೂಡಿಸಲು ರಾಜ್ಯ ಸರ್ಕಾರ ಈ ಬಜೆಟ್ ನಲ್ಲಿ ತೆರಿಗೆ ಹೆಚ್ಚಿಸುವ ಸಾಧ್ಯತೆ ಕಡಿಮೆಯಿದೆ. ಜನರ ಮೇಲೆ ಮತ್ತಷ್ಟು ಹೊರೆ ಹಾಕಲು ಸಾಧ್ಯವಿಲ್ಲ. ಪಂಚಾಯತ್ ಮತ್ತು ಸಂಸತ್ತಿನ ಚುನಾವಣೆಗಳಲ್ಲಿ ಬಿಜೆಪಿ ವಿರುದ್ಧ ಆಡಳಿತ ವಿರೋಧಿ ಅಂಶವನ್ನು ಪ್ರಮುಖ ಅಸ್ತ್ರವಾಗಿ ಬಳಸಲು ಕಾಂಗ್ರೆಸ್ ನೋಡುತ್ತಿದೆ.

ಕರ್ನಾಟಕವು ಪ್ರಗತಿಪರ ಮತ್ತು ಸಮೃದ್ಧ ರಾಜ್ಯವೆಂದು ಪರಿಗಣಿಸಲ್ಪಟ್ಟಿದೆ, ಇದು ಉತ್ತಮ ವಿದೇಶಿ ಹೂಡಿಕೆಯನ್ನು ಆಕರ್ಷಿಸುತ್ತದೆ. ಅಭಿವೃದ್ಧಿಯನ್ನು ನೋಡಿಕೊಳ್ಳುತ್ತದೆ. ರಾಜ್ಯವು ತನ್ನದೇ ಆದ ಸಂಪನ್ಮೂಲಗಳನ್ನು ಹೂಡಿಕೆ ಮಾಡುವ ಅಗತ್ಯವಿಲ್ಲ. ಖ್ಯಾತ ಅರ್ಥಶಾಸ್ತ್ರಜ್ಞ ಪ್ರೊ.ಸಿ.ಕೆ.ರೇಣುಕಾರ್ಯ ಅವರು, ಭರವಸೆಗಳನ್ನು ಜಾರಿಗೆ ತರಲು 60,000 ಕೋಟಿ ರೂಪಾಯಿಗಳನ್ನು ಕ್ರೋಢೀಕರಿಸುವುದು ಕಷ್ಟಕರವಾಗಿದೆ, ಇದು ದೀರ್ಘಾವಧಿಯಲ್ಲಿ ಆರ್ಥಿಕತೆಯ ಮೇಲೆ ತನ್ನದೇ ಆದ ಪರಿಣಾಮಗಳನ್ನು ಬೀರುತ್ತದೆ ಎಂದಿದ್ದಾರೆ. 

ಆದರೆ, ಸರ್ಕಾರವು ಆಹಾರ ಭದ್ರತೆಯನ್ನು ಖಾತ್ರಿಪಡಿಸುವುದು ಸ್ವಾಗತಾರ್ಹ ಕ್ರಮವಾಗಿದೆ. ಕರ್ನಾಟಕವು ಬಲಿಷ್ಠ, ಪ್ರಗತಿಪರ ರಾಜ್ಯವಾಗಿದ್ದರೂ, ಉಚಿತಗಳನ್ನು ಜಾರಿಗೊಳಿಸುವುದರಿಂದ ಉಂಟಾಗುವ ತೊಂದರೆಗಳು ಮತ್ತು ಪರಿಣಾಮಗಳನ್ನು ಊಹಿಸಬೇಕಾಗುತ್ತದೆ ಎನ್ನುತ್ತಾರೆ.

ಪ್ರೊ.ಬಸವರಾಜು, ಕರ್ನಾಟಕದ ಆರ್ಥಿಕ ಸ್ಥಿತಿ ಸುಸ್ಥಿತಿಯಲ್ಲಿಲ್ಲ, ನಿರ್ವಹಣೆಯ ಕಲೆ ಬಲ್ಲ ಸಿಎಂ ಸಿದ್ದರಾಮಯ್ಯ ಅವರು ನೀಡಿದ ಭರವಸೆಗಳನ್ನು ಜಾರಿಗೆ ತರಲು ಪ್ರಯತ್ನಿಸುತ್ತಾರೆ. ರಾಜ್ಯವು ತನ್ನ ಜನಪರ ಕಾರ್ಯಕ್ರಮಗಳಿಗೆ 60,000 ಕೋಟಿ ರೂಪಾಯಿಗಳ ಅಗತ್ಯವನ್ನು ಪೂರೈಸಲು ಸಾಲವನ್ನು ಹೊರತುಪಡಿಸಿ ಬೇರೆ ಪರ್ಯಾಯಗಳಿಗೆ ಯಾವುದೇ ಅವಕಾಶವಿಲ್ಲ ಎನ್ನುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

SCROLL FOR NEXT