ಸಂಗ್ರಹ ಚಿತ್ರ 
ರಾಜ್ಯ

ಡಿಸಿಎಂ ಡಿ.ಕೆ.ಶಿವಕುಮಾರ್ ಸೂಚನೆ ಬೆನ್ನಲ್ಲೇ 9 ಮಂದಿ ಬಿಬಿಎಂಪಿ ಅಧಿಕಾರಿಗಳ ವರ್ಗಾವಣೆ

ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಸೂಚನೆ ಬೆನ್ನಲ್ಲೇ ಬಿಬಿಎಂಪಿಯ 9 ಮಂದಿ ಅಧಿಕಾರಿಗಳ ವರ್ಗಾವಣೆಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಆದೇಶ ಹೊರಡಿಸಿದ್ದಾರೆ.

ಬೆಂಗಳೂರು: ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಸೂಚನೆ ಬೆನ್ನಲ್ಲೇ ಬಿಬಿಎಂಪಿಯ 9 ಮಂದಿ ಅಧಿಕಾರಿಗಳ ವರ್ಗಾವಣೆಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಆದೇಶ ಹೊರಡಿಸಿದ್ದಾರೆ.

ಆಡಳಿತಾತ್ಮಕ ಹಿತದೃಷ್ಟಿಯ ಕಾರಣ ನೀಡಿ ವರ್ಗಾವಣೆಗೆ ಆದೇಶ ಹೊರಡಿಸಲಾಗಿದೆ ಎಂದು ತಿಳಿದುಬಂದಿದೆ.

ಇದರಂತೆ ಬಿಬಿಎಂಪಿ ವಿವಿಧ ವಲಯ ಹಾಗೂ ವಿಭಾಗಗಳಿಂದ ಆರ್.ಆರ್.ನಗರ ವಲಯಕ್ಕೆ ಹೊಸ ಅಧಿಕಾರಿಗಳ ನೇಮಕ ಮಾಡಲು ಸೂಚನೆ ನೀಡಲಾಗಿದೆ.

ಹಿರಿಯ ಆರೋಗ್ಯ ಪರಿವೀಕ್ಷದ ಶಿವಲಿಂಗಯ್ಯ ಹಾಗೂ ಮಾರುತಿ ಪೀಸೆಟ್ ಅವರನ್ನು ಬೆಂಗಳೂರು ದಕ್ಷಿಣ ವಲಯದಿಂದ ರಾಜರಾಜೇಶ್ವರಿನಗರ ವಲಯಕ್ಕೆ ವರ್ಗಾಯಿಸಲಾಗಿದೆ. ಬೊಮ್ಮನಹಳ್ಳಿಯ ಯಲಚೇನಹಳ್ಳಿ ವಾರ್ಡ್‍ನ ಕರೀಗೌಡ, ಪಶ್ಚಿಮ ವಲಯದ ವಿಶ್ವನಾಥ್ ಅವರುಗಳನ್ನು ರಾಜರಾಜೇಶ್ವರಿನಗರ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ.

ಕಂದಾಯ ಪರಿವೀಕ್ಷಕ ಹನುಮಂತರಾಯಪ್ಪ ಅವರನ್ನು ಶ್ರೀರಾಮ ಉಪವಲಯ ಕೇಂದ್ರದಿಂದ ಕೆಂಗೇರಿ ಉಪವಲಯಕ್ಕೆ, ಹಿರಿಯ ಆರೋಗ್ಯ ಪರಿವೀಕ್ಷಕ ರಮೇಶ್ ಅವರನ್ನು ಆರ್‍ಆರ್‍ನಗರದಿಂದ ಹೊರಭಾಗಕ್ಕೆ ಹಾಗೂ ಡಿ.ಎಲ್.ನಾರಾಯಣ ಅವರನ್ನು ಬೆಂಗಳೂರಿನಿಂದ ಬೇರೆಡೆಗೆ ವರ್ಗಾಯಿಸುವಂತೆ, ಆರ್‍ಆರ್ ನಗರದ ಹಿರಿಯ ಆರೋಗ್ಯ ಪರಿವೀಕ್ಷಕ ಮಂಜುನಾಥ ಅವರನ್ನು ಬೆಂಗಳೂರಿನಿಂದ ಬೇರೆ ಕಡೆಗೆ ಹಾಗೂ ಹೇರೋಹಳ್ಳಿ ಉಪವಲಯದ ಕಂದಾಯ ಪರಿವೀಕ್ಷಕ ಕುಮಾರ್ ಅವರನ್ನು ಖಾಲಿ ಇರುವ ಜಾಗಕ್ಕೆ ವರ್ಗಾವಣೆ ಮಾಡುವಂತೆ ಸೂಚನೆ ನೀಡಲಾಗಿದೆ.

ಇದರ ಜತೆಗೆ ನನ್ನ ಗಮನಕ್ಕೆ ತಾರದೆ ಯಾವುದೇ ಅಧಿಕಾರಿಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವರ್ಗಾವಣೆ ಮಾಡದಂತೆಯೂ ಡಿಕೆ ಶಿವಕುಮಾರ್ ಅವರು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರನಾಥ್ ಅವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ತಮಿಳುನಾಡು ರಾಜಕೀಯ ಹೈಡ್ರಾಮಕ್ಕೆ ತೆರೆ: ಬೆಳಗ್ಗೆ ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣ; ಮೇ 13ಕ್ಕೆ ಬಹುಮತ ಸಾಬೀತು

ತಮಿಳುನಾಡಿನ ನೂತನ ಸಿಎಂ ಆಗಿ TVK ಮುಖ್ಯಸ್ಥ ವಿಜಯ್ ಪದಗ್ರಹಣ ಸಮಾರಂಭಕ್ಕೆ Rahul Gandhi, ಹೊಸ ಮೈತ್ರಿಕೂಟ ರಚನೆ ಸಂಕೇತ!

ಗುಜರಾತ್ ಟೈಟನ್ಸ್‌ಗೆ ಸತತ 4ನೇ ಗೆಲುವು: 77 ರನ್‌ಗಳಿಂದ ರಾಜಸ್ಥಾನಕ್ಕೆ ಹೀನಾಯ ಸೋಲು, 4ನೇ ಸ್ಥಾನಕ್ಕೆ ಕುಸಿದ RCB!

ಪಾಕ್ ISI ಮಾಡ್ಯೂಲ್ ಬಯಲಾದ ಬೆನ್ನಲ್ಲೇ ಉಗ್ರ ದಾಳಿಯ ಬಗ್ಗೆ ಗುಪ್ತಚರ ಎಚ್ಚರಿಕೆ: ದೆಹಲಿಯಲ್ಲಿ ಕಟ್ಟೆಚ್ಚರ

ಕೇರಳದಲ್ಲಿ ಸಿಎಂ ಆಯ್ಕೆ ಕಗ್ಗಂಟು: ಮೂವರು ಘಟಾನುಘಟಿಗಳ ನೇರ ಹಣಾಹಣಿ, ಗೊಂದಲದಲ್ಲಿ ಕಾಂಗ್ರೆಸ್ ಹೈಕಮಾಂಡ್!

SCROLL FOR NEXT