ಲಕ್ಷ್ನಿ ಹೆಬ್ಬಾಳ್ಕರ್ 
ರಾಜ್ಯ

4-5 ದಿನಗಳಲ್ಲಿ ಗೃಹ ಲಕ್ಷ್ಮಿ ಯೋಜನೆಗೆ ನೋಂದಣಿ ಪ್ರಕ್ರಿಯೆ ಪ್ರಾರಂಭ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ 4-5 ದಿನಗಳಲ್ಲಿ ಪ್ರಾರಂಭವಾಗಲಿದೆ ಮತ್ತು ಇದಕ್ಕಾಗಿ ಅರ್ಜಿಯನ್ನು ಸಿದ್ಧಪಡಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

ಬೆಂಗಳೂರು: ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ 4-5 ದಿನಗಳಲ್ಲಿ ಪ್ರಾರಂಭವಾಗಲಿದೆ ಮತ್ತು ಇದಕ್ಕಾಗಿ ಅರ್ಜಿಯನ್ನು ಸಿದ್ಧಪಡಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

ಶುಕ್ರವಾರ ಪರಿಷತ್ತಿನಲ್ಲಿ ಎಂಎಲ್‌ಸಿ ಹೇಮಲತಾ ನಾಯಕ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವೆ, ಯೋಜನೆಗೆ ನೋಂದಣಿ ತೆರೆಯಲು ಶೀಘ್ರದಲ್ಲೇ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಮತ್ತು ಸರ್ಕಾರವು ಆಗಸ್ಟ್ 16 ಅಥವಾ 17 ರಂದು ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ 2,000 ರೂ. ಜಮೆ ಮಾಡಲಿದೆ. 'ಗೃಹ ಲಕ್ಷ್ಮಿ ಯೋಜನೆ ಬಗ್ಗೆ ಮಾಹಿತಿ ನೀಡಲು ನಾವು ತೆರೆದಿರುವ ಸಹಾಯವಾಣಿಯ ಮೂಲಕ ಹೆಚ್ಚಿನ ಸಂಖ್ಯೆಯ ಕರೆಗಳು ಬರುತ್ತಿದ್ದು, ಜನರು ವಿಚಾರಿಸುತ್ತಿದ್ದಾರೆ' ಎಂದು ಅವರು ಹೇಳಿದರು.

ಇದಲ್ಲದೆ, ಈ ಯೋಜನೆಗೆ ವಾರ್ಷಿಕ 30,000 ಕೋಟಿ ರೂಪಾಯಿ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದ್ದು, ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ 17,500 ಕೋಟಿ ಮೀಸಲಿಡಲಾಗಿದೆ ಎಂದರು. 

ಹೇಮಲತಾ ನಾಯಕ್ ಅವರು ಈ ಯೋಜನೆಯು ಕುಟುಂಬಗಳಲ್ಲಿ ಜಗಳಕ್ಕೆ ಕಾರಣವಾಗುವ ಬಗ್ಗೆ ಕಳವಳ ವ್ಯಕ್ತಪಡಿಸಿದಾಗ, ಈ ಯೋಜನೆಯು ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುತ್ತದೆ ಎಂದು ಸಚಿವರು ಸಮರ್ಥಿಸಿಕೊಂಡರು. 

ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಯೋಜನೆಯಿಂದ ಕರ್ನಾಟಕದ 1.30 ಕೋಟಿ ಜನರಿಗೆ ಅನುಕೂಲವಾಗಲಿದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೇರಳ ಸಿಎಂ ಬಿಕ್ಕಟ್ಟು: ವರಿಷ್ಠರೊಂದಿಗೆ ಮಾತುಕತೆಗಾಗಿ ದೆಹಲಿಗೆ ತೆರಳಿದ ಕೆ. ಸುಧಾಕರನ್, ಇಂದು ಅಂತಿಮ ನಿರ್ಧಾರ ಸಾಧ್ಯತೆ

'ಬಿಜೆಪಿ ನಾಯಕರು ಬುಟ್ಟಿಯೊಳಗಿನ ಏಡಿಗಳಂತೆ: BJP ಮತ್ತು ವಿಶ್ವಾಸ ದ್ರೋಹ ರಕ್ತ ಸಂಬಂಧಿಗಳು; ಮೋದಿಯದ್ದು ಢೋಂಗಿ ಬುದ್ದಿ'

ಕೋವಿಡ್‌ ಗೆದ್ದಂತೇ, ಪಶ್ಚಿಮ ಏಷ್ಯಾ ಸಂಘರ್ಷದ ಬಿಕ್ಕಟ್ಟು ಜಯಿಸುತ್ತೇವೆ: ಮತ್ತೆ 'ವೋಕಲ್ ಫಾರ್ ಲೋಕಲ್' ಮಂತ್ರ ಜಪಿಸಿದ ಮೋದಿ

IPL 2026: ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್; RCB ಅಗ್ರಸ್ಥಾನ ಭದ್ರ!

ತಮಿಳುನಾಡು ಸಿಎಂ ವಿಜಯ್‌ಗೆ Z+ ಭದ್ರತೆ: ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ

SCROLL FOR NEXT