ಸಾಂದರ್ಭಿಕ ಚಿತ್ರ 
ರಾಜ್ಯ

ಹಾಸನದಲ್ಲಿ ಉತ್ತರ ಪ್ರದೇಶ ಮೂಲದ ಯುವಕರಿಬ್ಬರ ನಿಗೂಢ ಸಾವು!

ಹಾಸನದ ಹನುಮಂತಪುರ ಗ್ರಾಮದಲ್ಲಿ ರಾತ್ರಿ ಊಟ ಮಾಡಿ ಮಲಗಿದ್ದ ಇಬ್ಬರು ಯುವಕರು ನಿಗೂಢವಾಗಿ ಮೃತಪಟ್ಟಿರುವ ಘಟನೆ ವರದಿಯಾಗಿದೆ. 

ಹಾಸನ: ಹಾಸನದ ಹನುಮಂತಪುರ ಗ್ರಾಮದಲ್ಲಿ ರಾತ್ರಿ ಊಟ ಮಾಡಿ ಮಲಗಿದ್ದ ಇಬ್ಬರು ಯುವಕರು ನಿಗೂಢವಾಗಿ ಮೃತಪಟ್ಟಿರುವ ಘಟನೆ ವರದಿಯಾಗಿದೆ. 

ಮೃತರನ್ನು 24 ವರ್ಷದ ನವಾಬ್​ ಮತ್ತು 30 ವರ್ಷದ ರಾಮ ಸಂಜೀವನ್​ ಎಂದು ಗುರುತಿಸಲಾಗಿದ್ದು ಇಬ್ಬರ ಮೃತದೇಹ ಕೊಠಡಿಯಲ್ಲಿ ಪತ್ತೆಯಾಗಿವೆ. 

ಉತ್ತರ ಪ್ರದೇಶದ ನಯನ್​ಪುರ ಗ್ರಾಮದವರಾದ ಯುವಕರು ಉದ್ಯೋಗ ಅರಸಿ ಹಾಸನ ತಾಲೂಕಿನ ಹನುಮಂತಪುರ ಗ್ರಾಮಕ್ಕೆ ಬಂದಿದ್ದು ಹನುಮಂತಪುರ ಗ್ರಾಮದ ಮಹೇಶ್ ಎಂಬುವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಜ್ವರ ಬಂದಿದ್ದರಿಂದ ಔಷಧಿ ಸೇವಿಸಿ ಮಲಗಿದ್ದ ಅವರು ಮತ್ತೆ ಎದ್ದೇಳಲಿಲ್ಲ.

ಒಂದು ದಿನ ಕಳೆದರು ಮನೆಯ ಬಾಗಿಲು ತೆರೆಯದಿದ್ದರಿಂದ ಮನೆಯ ಮಾಲೀಕ ಮಹೇಶ್ ಅನುಮಾನಗೊಂಡು ಬಾಗಿಲು ಒಡೆದು ನೋಡಿದಾಗ ಯುವಕರು ಮಲಗಿದ್ದ ಜಾಗದಲ್ಲಿಯೇ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. 

ಪ್ರಕರಣ ದಾಖಲಿಸಿಕೊಂಡಿರುವ ಹಾಸನ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ