ಹಂಪಿಯಲ್ಲಿ ಜಿ20 ಸಭೆ ಘೋಷಣೆಯಾದ ನಂತರ ವಿರೂಪಾಕ್ಷ ದೇವಸ್ಥಾನದ ಮುಂಭಾಗದಲ್ಲಿ ನಿರ್ಮಿಸಲಾದ ಹೊಸ ರಸ್ತೆ 
ರಾಜ್ಯ

ಜಿ20 ಶೃಂಗಸಭೆಯ ಕೃಪೆ: ಹಂಪಿಯಲ್ಲಿನ ಮೂಲಸೌಕರ್ಯ ಅಭಿವೃದ್ಧಿ!

ಐತಿಹಾಸಿಕ ಹಂಪಿಯಲ್ಲಿ ನಡೆದ ಜಿ20 ಮೂರನೇ ಶೆರ್ಪಾ ಶೃಂಗಸಭೆಗೆ ವಿಧ್ಯುಕ್ತ ತೆರೆ ಬಿದ್ದಿದೆ. ಜಿ20 ಶೃಂಗಸಭೆಯ ಆತಿಥ್ಯವು ಮೂಲಸೌಕರ್ಯ ರಂಗದಲ್ಲಿ ಹಂಪಿಗೆ ವರದಾನವಾಗಿ ಪರಿಣಮಿಸಿದೆ. ಪಟ್ಟಣವು ಈಗ ಗುಂಡಿಗಳಿಲ್ಲದ ರಸ್ತೆಗಳು, ಕುಡಿಯುವ ನೀರಿನ ಸೌಲಭ್ಯ ಮತ್ತು ಉತ್ತಮ ಶೌಚಾಲಯಗಳನ್ನು ಹೊಂದಿದೆ.

ಹಂಪಿ: ಐತಿಹಾಸಿಕ ಹಂಪಿಯಲ್ಲಿ ನಡೆದ ಜಿ20 ಮೂರನೇ ಶೆರ್ಪಾ ಶೃಂಗಸಭೆಗೆ ವಿಧ್ಯುಕ್ತ ತೆರೆ ಬಿದ್ದಿದೆ. ಜಿ20 ಶೃಂಗಸಭೆಯ ಆತಿಥ್ಯವು ಮೂಲಸೌಕರ್ಯ ರಂಗದಲ್ಲಿ ಹಂಪಿಗೆ ವರದಾನವಾಗಿ ಪರಿಣಮಿಸಿದೆ. ಪಟ್ಟಣವು ಈಗ ಗುಂಡಿಗಳಿಲ್ಲದ ರಸ್ತೆಗಳು, ಕುಡಿಯುವ ನೀರಿನ ಸೌಲಭ್ಯ ಮತ್ತು ಉತ್ತಮ ಶೌಚಾಲಯಗಳನ್ನು ಹೊಂದಿದೆ.

ಜಿ20 ಸಾಂಸ್ಕೃತಿಕ ಮತ್ತು ಶೆರ್ಪಾ ಸಭೆಯು ಪಟ್ಟಣವು ಉತ್ತಮ ಮೂಲ ಸೌಕರ್ಯಗಳನ್ನು ಪಡೆಯಲು ಸಹಾಯ ಮಾಡಿದೆ ಎಂದು ಜನರು ಹೇಳುತ್ತಿದ್ದಾರೆ. 

ಹಂಪಿಯಲ್ಲಿ ನಡೆದ ಜಿ20 ಸಾಂಸ್ಕೃತಿಕ ಮತ್ತು ಶೆರ್ಪಾ ಸಭೆಯು ಪಟ್ಟಣದ ಮೂಲಸೌಕರ್ಯ ಅಭಿವೃದ್ಧಿಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ. ಅಲ್ಲದೆ, ಕಳೆದೆರಡು ವಾರಗಳಲ್ಲಿ ಜಿ20 ಪ್ರತಿನಿಧಿಗಳು ಹಂಪಿಗೆ ಸಾಂಸ್ಕೃತಿಕ ಕಾರ್ಯಕಾರಿ ಗುಂಪು (ಸಿಡಬ್ಲ್ಯುಜಿ) ಮತ್ತು ಶೆರ್ಪಾ ಸಭೆಯಲ್ಲಿ ಪಾಲ್ಗೊಳ್ಳುವುದರಿಂದ ಹಂಪಿಗೆ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಿದೆ.

ಕೇಂದ್ರ ಸರ್ಕಾರದ ನಿರ್ದೇಶನದಂತೆ ವಿಜಯನಗರ ಜಿಲ್ಲಾಡಳಿತ ರಸ್ತೆ ದುರಸ್ತಿ, ಕುಡಿಯುವ ನೀರಿನ ಸೌಲಭ್ಯ, ಶೌಚಾಲಯ ನಿರ್ಮಾಣ ಮತ್ತಿತರ ದುರಸ್ತಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ.

ಈ ಮೂಲಭೂತ ಸೌಕರ್ಯಗಳಿಗೆ ಹಲವು ವರ್ಷಗಳಿಂದ ಬೇಡಿಕೆ ಇತ್ತು. ಆದರೆ, ಜಿ20 ಶೃಂಗಸಭೆಯು ಸ್ಥಳೀಯರು ಮತ್ತು ಪ್ರವಾಸಿಗರಿಗೆ ಈ ಸೌಕರ್ಯಗಳನ್ನು ಪಡೆಯಲು ಸಹಾಯ ಮಾಡಿದೆ.

'ಹಂಪಿ ಮತ್ತು ಹೊಸಪೇಟೆಯ ಹೊರವಲಯದ ರಸ್ತೆಗಳು ಈಗ ‘ಹೊಳೆಯುತ್ತಿವೆ’. ಜಿ 20 ಸಭೆಯ ಹೆಸರಿನಲ್ಲಿ, ನಮಗೆ ಅಂತಿಮವಾಗಿ ಉತ್ತಮ ರಸ್ತೆಗಳು ಸಿಕ್ಕಿರುವುದು ಸಂತೋಷವಾಗಿದೆ' ಎನ್ನುತ್ತಾರೆ ಜನರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT