ರಾಜ್ಯ

ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ: ಕಾಲೇಜು ಆಡಳಿತ ಮಂಡಳಿ ವಿರುದ್ಧ ಎಫ್​ಐಆರ್ ದಾಖಲು

Manjula VN

ಬೆಂಗಳೂರು: ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಪ್ರತಿಷ್ಠಿತ ಕಾಲೇಜು ಆಡಳಿತ ಮಂಡಳಿ ವಿರುದ್ಧ ಎಫ್​ಐಆರ್ ದಾಖಲಾಗಿದೆ.

ಮೃತ ವಿದ್ಯಾರ್ಥಿ ಆದಿತ್ಯ ಪ್ರಭು ತಂದೆ ಗಿರೀಶ್ ಪ್ರಭು ದೂರು ಹಿನ್ನೆಲೆಯಲ್ಲಿ ಇನ್ವಿಜಿಲೇಟರ್ ಹಾಗು ಕಾಲೇಜು ಆಡಳಿತ ಮಂಡಳಿಯ ವಿರುದ್ಧ ಗಿರಿನಗರ ಪೊಲೀಸ್ ಠಾಣೆಯಲ್ಲಿ 306 ಅಡಿಯಲ್ಲಿ ಎಫ್​ಐಆರ್ ದಾಖಲಾಗಿದೆ.

ನಿರಪರಾಧಿ ಎಂದು ಸಾಬೀತುಪಡಿಸಲು ಮಗನಿಗೆ ಅವಕಾಶ ನೀಡುವ ಬದಲು ಕಾಲೇಜು ಆಂಡಳಿ ಮಂಡಳಿ ಹಾಗೂ ಇನ್ವಿಜಿಲೇಟರ್ ಮಗನಿಗೆ ಮಾನಸಿಕ ಕಿರುಕುಳ ನೀಡಿದ್ದಾರೆ.

ಪರೀಕ್ಷೆ ಹಿನ್ನೆಲೆಯಲ್ಲಿ ಮೊಬೈಲ್ ಫೋನ್ ಏರ್‌ಪ್ಲೇನ್ ಮೋಡ್‌ನಲ್ಲಿತ್ತು. ಅರಿವಿಲ್ಲದೆ ನನ್ನ ಮಗ ಜೇಬಿನಲ್ಲಿ ಫೋನ್ ಇಟ್ಟುಕೊಂಡಿದ್ದ. ಪರಿಶೀಲನೆ ವೇಳೆ ಇನ್ವಿಜಿಲೇಟರ್ ಕಾಪಿ ಮಾಡುತ್ತಿದ್ದಾನೆಂದು ನಿಂದನೆ ಮಾಡಿದ್ದಾರೆ. ಸ್ಪಷ್ಟನೆ ನೀಡಲು ಆತನಿಗೆ ಅವಕಾಶ ನೀಡಿಲ್ಲ. ತರಗತಿಯಿಂದ ಹೊರಗೆ ಕರೆದೊಯ್ದು ಫೋನ್ ವಶಕ್ಕೆ ಪಡೆದುಕೊಂಡಿದ್ದಾರೆ. ಇದರಿಂದ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ನನ್ನ ಪತ್ನಿ ಕಾಲೇಜಿಗೆ ಭೇಟಿ ನೀಡಿದಾಗ ಪುತ್ರ ಸಾವನ್ನಪ್ಪಿರುವ ವಿಚಾರವನ್ನು ತಿಳಿಸಲಾಗಿದೆ ದೂರಿನಲ್ಲಿ ಹೇಳಿಕೊಂಡಿದ್ದಾರೆ.

ದೂರು ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು, ಕಾಲೇಜು ಆಡಳಿತ ಮಂಡಳಿ ಹಾಗೂ ಇನ್ವಿಜಿಲೇಟರ್'ಗೆ ಸಮನ್ಸ್ ಜಾರಿ ಮಾಡಿದ್ದಾರೆ.

SCROLL FOR NEXT