ನಟಿ ರಮ್ಯಾ 
ರಾಜ್ಯ

ನಟಿ ರಮ್ಯಾ ವೀಡಿಯೊ ತುಣುಕು ತೆಗೆಯಿರಿ: 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆʼ ಚಿತ್ರತಂಡಕ್ಕೆ ನ್ಯಾಯಾಲಯ ಸೂಚನೆ

ಬಿಡುಗಡೆಗೆ ಸಿದ್ಧವಾಗಿರುವ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರ ಮತ್ತು ಟ್ರೇಲರ್‌ನಿಂದ ಅನಧಿಕೃತವಾಗಿ ಬಳಸಲಾಗಿರುವ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರ ವೀಡಿಯೋ ತುಣಕನ್ನು ತೆಗೆದುಹಾಕುವಂತೆ ಚಿತ್ರ ನಿರ್ಮಾಣ ಹಾಗೂ ವಿತರಕ ಸಂಸ್ಥೆಗೆ ಬೆಂಗಳೂರು ನ್ಯಾಯಾಲಯವು ಸೂಚನೆ ನೀಡಿದೆ.

ಬೆಂಗಳೂರು: ಬಿಡುಗಡೆಗೆ ಸಿದ್ಧವಾಗಿರುವ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರ ಮತ್ತು ಟ್ರೇಲರ್‌ನಿಂದ ಅನಧಿಕೃತವಾಗಿ ಬಳಸಲಾಗಿರುವ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರ ವೀಡಿಯೋ ತುಣಕನ್ನು ತೆಗೆದುಹಾಕುವಂತೆ ಚಿತ್ರ ನಿರ್ಮಾಣ ಹಾಗೂ ವಿತರಕ ಸಂಸ್ಥೆಗೆ ಬೆಂಗಳೂರು ನ್ಯಾಯಾಲಯವು ಸೂಚನೆ ನೀಡಿದೆ.

ತಮ್ಮ ವಿಡಿಯೊ ಕ್ಲಿಪ್ ಅನ್ನು ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರ ಮತ್ತು ಟ್ರೇಲರ್‌ನಲ್ಲಿ ಅನಧಿಕೃತವಾಗಿ ಬಳಸಲಾಗಿದೆ ಎಂದು ಆರೋಪಿಸಿ ರಮ್ಯಾ ಸಲ್ಲಿಸಿರುವ ಮೂಲ ದಾವೆಯ ವಿಚಾರಣೆ ನಡೆಸಿದ ಬೆಂಗಳೂರಿನ 83ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ (ವಾಣಿಜ್ಯ ನ್ಯಾಯಾಲಯ) ನ್ಯಾಯಾಲಯದ ನ್ಯಾಯಾಧೀಶರಾದ ರವೀಂದ್ರ ಹೆಗ್ಡೆ ಅವರು ಈ ಆದೇಶ ನೀಡಿದ್ದಾರೆ.

ಯೂಟ್ಯೂಬ್ ಹಾಗೂ ಇತರೆ ಎಲ್ಲಾ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿರುವ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರದ ಟ್ರೇಲರ್‌ನಿಂದ ರಮ್ಯಾ ಅವರ ವಿಡಿಯೊ ತುಣಕು ತೆಗೆದುಹಾಬೇಕು. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ರಮ್ಯಾ ಅವರ ವೀಡಿಯೊ ತುಣುಕು, ಫೋಟೊ, ಜಿಫ್ ಇರುವ ಚಿತ್ರವನ್ನು ದಾವೆಯನ್ನು ನ್ಯಾಯಾಲಯ ಇತ್ಯರ್ಥಪಡಿಸುವರೆಗೂ ಬಿಡುಗಡೆ ಮಾಡಬಾರದು ಎಂದು ಚಿತ್ರ ನಿರ್ಮಾಣ ಸಂಸ್ಥೆ ಗುಲ್‌ಮೊಹರ್ ಫಿಲ್ಮ್ ಪ್ರೈ.ಲಿ, ವಿತರಕ ಸಂಸ್ಥೆ ಜೀ ಎಂಟರ್‌ಟೈನ್ಮೆಂಟ್ ಎಂಟರ್‌ಪ್ರೈಸೆಸ್ ಪ್ರೈ.ಲಿ ಮತ್ತು ಪರಂವಾಹ್ ಸ್ಟೂಡಿಯೋಸ್‌ಗೆ ನ್ಯಾಯಾಲಯ ನಿರ್ದೇಶನ ನೀಡಿದೆ. ಅಲ್ಲದೆ. ವಿಚಾರಣೆಯನ್ನು ಆಗಸ್ಟ್‌ 7ಕ್ಕೆ ಮುಂದೂಡಿದೆ.

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರವು ಜುಲೈ 21ರಂದು (ಶುಕ್ರವಾರ) ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಇತ್ತೀಚೆಗೆ ಚಿತ್ರದ ಟ್ರೇಲರ್ ಅನ್ನು ಬಿಡುಗಡೆ ಮಾಡಲಾಗಿತ್ತು. ಇದರ ಬೆನ್ನಲ್ಲೇ ಚಿತ್ರ ಮತ್ತು ಟ್ರೇಲರ್‌ನಲ್ಲಿ ತಮ್ಮ ವೀಡಿಯೋ ತುಣಕು ಮತ್ತು ಪೋಟೊ ಬಳಸಲು ಅನುಮತಿ ನಿರಾಕರಿಸಿದ್ದೆ. ಹೀಗಿದ್ದರೂ ಟ್ರೇಲರ್‌ನಲ್ಲಿ ಅನಧಿಕೃತವಾಗಿ ತಮ್ಮ ವಿಡಿಯೊ ತುಣುಕು ಬಳಸಲಾಗಿದೆ. ಇದು 2022ರ ಏಪ್ರಿಲ್‌ನಲ್ಲಿ ಮಾಡಿಕೊಂಡಿರುವ ‘ಆರ್ಟಿಸ್ಟಿಕ್ ಅಗ್ರೀಮೆಂಟ್’ ಮತ್ತು‘ಹಕ್ಕು ಸ್ವಾಮ್ಯ ಕಾಯಿದೆ-1957’ರ ಉಲ್ಲಂಘನೆಯಾಗಿದೆ.

ಆದ್ದರಿಂದ, ತಮ್ಮ ವೀಡಿಯೋ ತುಣಕು ಒಳಗೊಂಡಿರುವ ಚಿತ್ರದ ಟ್ರೇಲರ್‌ನ ಲಿಂಕ್ ಅನ್ನು ಯೂಟ್ಯೂಬ್ ಸೇರಿದಂತೆ ಎಲ್ಲಾ ಸಾಮಾಜಿಕ ಮಾಧ್ಯಮದಿಂದ ತೆಗೆದುಹಾಕುವಂತೆ ಚಿತ್ರ ನಿರ್ಮಾಣ ಸಂಸ್ಥೆಗೆ ನಿರ್ದೇಶಿಸಬೇಕು. ಹಾಗೆಯೇ, ತಮ್ಮ ವೀಡಿಯೋ ತುಣುಕು ಇರುವ ಚಿತ್ರದ ಬಿಡುಗಡೆಗೆ ನಿರ್ಬಂಧ ಹೇರಬೇಕು. ಇಲ್ಲಿಯವರೆಗೆ ಟ್ರೇಲರ್‌ನಲ್ಲಿ ತಮ್ಮ ಅನುಮತಿಯಿಲ್ಲದೆ ಈ ತುಣುಕುಗಳನ್ನು ಬಳಸಿರುವುದಕ್ಕೆ ಒಂದು ಕೋಟಿ ಪರಿಹಾರ ನೀಡಬೇಕು. ಕಾನೂನು ಸೇವೆ ಪಡೆದಿರುವುದರ ಶುಲ್ಕ ನೀಡಬೇಕು ಎಂದು ಕೋರಿ ನಟಿ ರಮ್ಯಾ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT