ರಾಜ್ಯ

ಬೆಂಗಳೂರು: ಸತ್ಯಾಂಶ ಬೇರೆಯೇ ಇದೆ; ಆತ್ಮಹತ್ಯೆ ಮಾಡಿಕೊಂಡ ಆದಿತ್ಯ ಪ್ರಭು ತಾಯಿಯ ಅಳಲು!

Shilpa D

ಬೆಂಗಳೂರು: ಪರೀಕ್ಷೆಯಲ್ಲಿ ನಕಲು ಮಾಡಿದ ಆರೋಪದ ನಂತರ ಆತ್ಮಹತ್ಯೆ ಮಾಡಿಕೊಂಡ 19 ವರ್ಷದ ವಿದ್ಯಾರ್ಥಿ ಆದಿತ್ಯ ಪ್ರಭು ಅವರ ತಾಯಿ, ಸತ್ಯಾಂಶ ಬೇರೆ ಇದೆ, ನನ್ನ ಮಗನ ಹೆಸರನ್ನು ಹಾಳು ಮಾಡದಂತೆ ಸಾಮಾಜಿಕ ಮಾಧ್ಯಮದ ಮೂಲಕ ಮನವಿ ಮಾಡಿದ್ದಾರೆ.

ನಾನು ಆದಿತ್ಯ ಪ್ರಭು ತಾಯಿ ಎಂದು ಪರಿಚಯಿಸಿಕೊಂಡು ಪ್ರಕರಣದ ಕುರಿತಂತೆ ಹಲವಾರು ಅಂಶಗಳನ್ನು ಹಂಚಿಕೊಂಡಿದ್ದಾರೆ. ವಿಶ್ವವಿದ್ಯಾಲಯವು ಆದಿತ್ಯನ ಸಾವನ್ನು ಮುಚ್ಚಿಡಲು ಪ್ರಯತ್ನಿಸಿದೆ ಮತ್ತು ತನ್ನ ಮಗನಿಗೆ ಕಿರುಕುಳ ನೀಡಿತು, ಇದು ಆತ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾಯಿತು ಎಂದು ಆರೋಪಿಸಿದ್ದಾರೆ. ಜುಲೈ 17 ರಂದು, ಪರೀಕ್ಷೆಯ ನಂತರ, ಆದಿತ್ಯ ಕಟ್ಟಡದ ಎಂಟನೇ ಮಹಡಿಯಿಂದ ಜಿಗಿದ. ಪಿಇಎಸ್ ಕಾಲೇಜಿನಲ್ಲಿ ಬಿಟೆಕ್ ವಿದ್ಯಾಭ್ಯಾಸ ಮಾಡುತ್ತಿದ್ದ ಆದಿತ್ಯ ಪ್ರಭು, ಮೊನ್ನೆ ಫಸ್ಟ್ ಇಯರ್​ ಸೆಕೆಂಡ್ ಸೆಮಿಸ್ಟರ್ ಪರೀಕ್ಷೆ ಬರೆಯುತ್ತಿದ್ದ. ಆದರೆ, ಪರೀಕ್ಷೆ ವೇಳೆ ಮೊಬೈಲ್ ಬಳಸಿ ಕಾಪಿ ಮಾಡುತ್ತಿದ್ದನಂತೆ. ಈ ವೇಳೆ ಶಿಕ್ಷಕರೊಬ್ಬರ ಕೈಗೆ ಸಿಕ್ಕಿಬಿದ್ದಿದ್ದ ಎಂದು ಹೇಳಲಾಗಿದೆ.

19 ವರ್ಷದ ನನ್ನ ಮಗ ಬೆಂಗಳೂರಿನ ಆರ್​ಆರ್​ ರೋಡ್ ಕ್ಯಾಂಪಸ್​ನಲ್ಲಿರುವ ಪಿಇಎಸ್ ಕಾಲೇಜಿನಲ್ಲಿ ಸಿಎಸ್​ಇ ಪ್ರಥಮ ವರ್ಷದ ವಿದ್ಯಾರ್ಥಿಯಾಗಿದ್ದ. ಜುಲೈ 17ರಂದು ಆತ ಕಾಲೇಜಿನ 8ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ. ಆದಿತ್ಯ ಪರೀಕ್ಷೆ ವೇಳೆ ಕಾಪಿ ಮಾಡಿ ಸಿಕ್ಕಿಬಿದ್ದಿದ್ದ ಎಂದು ಕಾಲೇಜಿನವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು. ಆದರೆ ನಾನು ಈ ಪ್ರಕರಣದ ಇನ್ನೊಂದು ಆಯಾಮವನ್ನು ತಿಳಿಸುತ್ತೇನೆ ಎಂದು ಸುದೀರ್ಘವಾಗಿ ಕೆಲವು ಮಾಹಿತಿಗಳನ್ನು ಬರೆದಿದ್ದಾರೆ.

ಜುಲೈ 17ರ ಬೆಳಗ್ಗೆ 11.45ಕ್ಕೆ ನನ್ನ ಮಗ ನನಗೆ ಕರೆ ಮಾಡಿ ಮೊಬೈಲ್​ ಫೋನ್ ಬ್ಯಾಗ್​ನಲ್ಲಿ ಇಡುವುದನ್ನು ಮರೆತೆ, ಅರ್ಧ ದೂರಕ್ಕೆ ಹೋದ ಮೇಲೆ ಮೊಬೈಲ್​​ಫೋನ್​ ಕಿಸೆಯಲ್ಲೇ ಇರುವುದು ಗೊತ್ತಾಯಿತು. ನಂತರ ಪರೀಕ್ಷೆ ವೇಳೆ ಅದನ್ನು ತೆಗೆದು ಬೆಂಚ್​ ಮೇಲೆ ಅಥವಾ ನೆಲದ ಮೇಲೆ ಇಟ್ಟೆ (ಅವನು ಏನು ಎಲ್ಲಿ ಇಟ್ಟೆ ಅಂತ ಹೇಳಿದ್ದು ಸರಿ ನೆನಪಿಲ್ಲ) ಎಂದಿದ್ದ. ಅಲ್ಲದೆ ಫೋನ್​ ಏರೋಪ್ಲೇನ್ ಮೋಡ್​ನಲ್ಲಿತ್ತು. ನಂತರ ಇನ್​ವಿಜಿಲೇಟರ್ ಫೋನ್​ ವಶಕ್ಕೆ ಪಡೆದಿದ್ದು, ಆತ ಪೂರ್ತಿ ಪರೀಕ್ಷೆ ಬರೆದಿದ್ದ.

ನಂತರ ನನಗೆ ಕರೆ ಮಾಡಿದ್ದ ಮಗ ಅವರು ಕಿರುಕುಳ ನೀಡುತ್ತಿದ್ದಾರೆ, ಇಂಥ ಕೆಲಸ ಮಾಡುವ ಬದಲು ಸಾಯುವುದು ಲೇಸು ಎಂದು ಹೇಳಿದ್ದಾರೆ ಎಂದು ತಿಳಿಸಿ ನನಗೆ ಕಾಲೇಜಿಗೆ ಬರಲು ಹೇಳಿದ್ದ. ಅದಾದ ಕೆಲವು ನಿಮಿಷಗಳ ಬಳಿಕ ಕಾಲೇಜಿಂದ ನನಗೆ ಕರೆ ಬಂದಿದ್ದು, ಬರಲು ಹೇಳಿದ್ದರು.

ಇನ್ನೇನು ಪರೀಕ್ಷೆ ಮುಗಿಯಲು ನಾಲ್ಕು ನಿಮಿಷಗಳು ಇರುವಾಗ ಅಂದರೆ 11.26 ನಿಮಿಷಕ್ಕೆ ಕೊಠಡಿ ಪರಿವೀಕ್ಷಕರು ನನ್ನ ಮಗನ ಫೋನ್​ ತೆಗೆದುಕೊಂಡಿದ್ದು ನನಗೆ ಇತರ ವಿದ್ಯಾರ್ಥಿಗಳಿಂದಾಗಿ ತಿಳಿಯಿತು. ನಾನು ಕಾಲೇಜಿಗೆ ಹೋಗಿದ್ದಾಗ ಅಲ್ಲಿ ಕಚೇರಿಯಲ್ಲಿ ಯಾರೂ ಇರಲಿಲ್ಲ, ನಾನು ಒಂದು ಗಂಟೆ ಕಾದಿದ್ದೆ, ಬಳಿಕ ಒಬ್ಬರು ಬಂದರು ಎಂಬುದಾಗಿ ಆದಿತ್ಯ ತಾಯಿ ಹೇಳಿಕೊಂಡಿದ್ದಾರೆ.

ಆದಿತ್ಯನಿಗೆ ಇಲ್ಲೇ ಕುಳಿತುಕೊಳ್ಳಲು ಹೇಳಿದ್ದಾಗಿ ಕಚೇರಿಯಲ್ಲಿ ಇದ್ದವರು ತಿಳಿಸಿದರು. ಸ್ವಲ್ಪ ಸಮಯದ ನಂತರ ಒಂದಷ್ಟು ಕರೆಗಳು ಬರಲಾರಂಭಿಸಿದಾಗ ಅವರು ಗಡಿಬಿಡಿಯಲ್ಲಿ ಹೊರಗೆ ಹೋದರು. ನಾನೂ ಅವರ ಜೊತೆ ಹೋದಾಗ ಕ್ಯಾಂಪಸ್​ನ ಇನ್ನೊಂದು ಬದಿಯಲ್ಲಿ ಆ್ಯಂಬುಲೆನ್ಸ್ ಮತ್ತು ಪೊಲೀಸರು ಬಂದಿರುವುದು ಕಾಣಿಸಿತು.

ಅಲ್ಲಿ ನನ್ನ ಮಗನನ್ನು ನೋಡಿ ಆಘಾತಗೊಂಡು ಕಿರುಚಿದೆ. ಆಗ ನನ್ನ ಮಗ ಜೀವಂತ ಇಲ್ಲ ಎಂದು ಹೇಳಿದರು. ನನ್ನ ಮಗನನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುವಂತೆ ಗೋಗರೆದರೂ ಕೇಳಲಿಲ್ಲ. ಅಂಥ ಪರಿಸ್ಥಿತಿಯಲ್ಲೂ 2-3 ಜನ ನನ್ನನ್ನು ಹಿಡಿದು ಮಗನ ಬಳಿಗೆ ಕರೆದುಕೊಂಡು ಹೋಗಿ ಆದಿತ್ಯನೇ ಎಂದು ಗುರುತಿಸಿ ಖಚಿತಪಡಿಸಲು ತಿಳಿಸಿದರು. ಅಲ್ಲದೆ ಒಂದು ಪತ್ರಕ್ಕೆ ಸಹಿ ಮಾಡಲು ಒತ್ತಾಯಿಸಿದರು. ಹಾಗೆ ಸಹಿ ಮಾಡಿದ ಬಳಿಕವಷ್ಟೇ ಆಸ್ಪತ್ರೆಗೆ ಕರೆದೊಯ್ಯುವುದು ಎಂದರು. ಒತ್ತಾಯದಿಂದ ನನ್ನ ಸಹಿ ತೆಗೆದುಕೊಳ್ಳಲಾಯಿತು.

ಘಟನೆಯ ನಂತರ, ಹಲವಾರು ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯದ ಕಿರುಕುಳದ ಬಗ್ಗೆ ಮಾತನಾಡಲು ಮುಂದೆ ಬಂದಿದ್ದಾರೆ, ವಿವಿಯಲ್ಲಿ ತಮ್ಮ ಜೀವನ ಮಾಡುತ್ತಾರೆ ಎಂದು  ವಿದ್ಯಾರ್ಥಿಗಳು ದೂರಿದ್ದಾರೆ. “ನನ್ನ ಮಗ  ಗೌರವ ಹಾಳಾಗುತ್ತದೆ ಎಂದು ಹೆದರಿ ತನ್ನ ಜೀವನ ಅಂತ್ಯಗೊಳಿಸಿದ.  ಪರೀಕ್ಷಾ ಹಾಲ್ ಒಳಗೆ ಮೊಬೈಲ್ ಕೊಂಡೊಯ್ಯುವುದು ತಪ್ಪು ಎಂದು ನಾನು ಒಪ್ಪುತ್ತೇನೆ, ಉದ್ದೇಶಪೂರ್ವಕವಾಗಿ ಮಾಡಿಲ್ಲದಿದ್ದರೂ ತಪ್ಪಾಗಿದೆ. ಆದರೆ ಆತನನ್ನು ಆತ್ಮಹತ್ಯೆಗೆ ಅವನು ಅರ್ಹನಾಗಿರಲಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ಈ ಸಂಬಂಧ  ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ PES ವಿಶ್ವವಿದ್ಯಾಲಯದ ಅಧಿಕಾರಿಗಳು ಆರೋಪಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು. "ತನಿಖೆ ನಡೆಯುತ್ತಿರುವುದರಿಂದ ಈಗಾಗಲೇ ಎಫ್‌ಐಆರ್ ದಾಖಲಾಗಿರುವುದರಿಂದ ನಾವು ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದು ಪಿಇಎಸ್ ವಿಶ್ವವಿದ್ಯಾಲಯದ ಸಿಒಒ ಅಜೋಯ್ ಕುಮಾರ್ ಹೇಳಿದರು.

SCROLL FOR NEXT