ಕಟ್ಟುನಿಟ್ಟಾದ ಸೂಚನೆಯನ್ನು ಕೊಂಡಂಗೇರಿ ಮಸೀದಿಯ ಹೊರಗೆ ಅಂಟಿಸಲಾಗಿದೆ. 
ರಾಜ್ಯ

ಡ್ರಗ್ಸ್ ಸೇವೆನೆ ವಿರುದ್ಧ ಕೊಡಗಿನ ಜಮಾತ್ ನಿಂದ ಮುಸ್ಲಿಂ ಯುವಕರಿಗೆ ಕಟ್ಟುನಿಟ್ಟಿನ ಸೂಚನೆ

ಸಮುದಾಯದ ಯುವಕರಲ್ಲಿ ಮಾದಕ ದ್ರವ್ಯ ಸೇವನೆಯನ್ನು ನಿಯಂತ್ರಿಸಲು ಕೊಡಗಿನ  ಜಮಾತ್ ವಿಶಿಷ್ಟ ಕ್ರಮಗಳನ್ನು ಕೈಗೊಂಡಿದೆ. ಮಾದಕ ದ್ರವ್ಯ ಸೇವನೆಯ ವಿರುದ್ಧ ಸಮುದಾಯದ ಯುವಕರಿಗೆ ಎಚ್ಚರಿಕೆ ನೀಡುವ ಸಂಕ್ಷಿಪ್ತ, ಕಟ್ಟುನಿಟ್ಟಾದ...

ಮಡಿಕೇರಿ: ಸಮುದಾಯದ ಯುವಕರಲ್ಲಿ ಮಾದಕ ದ್ರವ್ಯ ಸೇವನೆಯನ್ನು ನಿಯಂತ್ರಿಸಲು ಕೊಡಗಿನ  ಜಮಾತ್ ವಿಶಿಷ್ಟ ಕ್ರಮಗಳನ್ನು ಕೈಗೊಂಡಿದೆ. ಮಾದಕ ದ್ರವ್ಯ ಸೇವನೆಯ ವಿರುದ್ಧ ಸಮುದಾಯದ ಯುವಕರಿಗೆ ಎಚ್ಚರಿಕೆ ನೀಡುವ ಸಂಕ್ಷಿಪ್ತ, ಕಟ್ಟುನಿಟ್ಟಾದ ಸೂಚನೆಯನ್ನು ಕೊಂಡಂಗೇರಿ ಮಸೀದಿಯ ಹೊರಗೆ ಅಂಟಿಸಲಾಗಿದೆ.

ಕೊಡಗಿನಾದ್ಯಂತ ಮಾದಕ ದ್ರವ್ಯ ಸೇವನೆ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿದ್ದು, ಮಾದಕ ವಸ್ತುಗಳ ಮಾರಾಟ ಪ್ರಕರಣಗಳಲ್ಲಿ ಹಲವಾರು ಯುವಕರನ್ನು ಕೊಡಗು ಪೊಲೀಸರು ಬಂಧಿಸುತ್ತಿದ್ದಾರೆ. ಮಾದಕ ವಸ್ತುಗಳ ಸೇವನೆ ವಿರುದ್ಧದ ಹೋರಾಟಕ್ಕೆ ಬೆಂಬಲ ನೀಡುವ ಉದ್ದೇಶದಿಂದ ಮಡಿಕೇರಿ ತಾಲೂಕಿನ ಕೊಂಡಂಗೇರಿ ಗ್ರಾಮದ ಸುನ್ನಿ ಮುಸ್ಲಿಂ ಜಮಾತ್ ವಿಶಿಷ್ಟ ಹೆಜ್ಜೆ ಇಟ್ಟಿದೆ.

ಗ್ರಾಮದ ಮಸೀದಿ ಆವರಣದ ಹೊರಗೆ, ಜಮಾತ್ ಸಮಿತಿಯು ಮಾದಕ ದ್ರವ್ಯ ಸೇವನೆಯಲ್ಲಿ ತೊಡಗಿರುವ ಯುವಕರನ್ನು ಜಮಾತ್ ಸಭೆಗಳು ಮತ್ತು ಮಸೀದಿ ಪ್ರವೇಶ ನಿಷೇಧಿಸುವ ಪೋಸ್ಟರ್ ಅನ್ನು ಅಂಟಿಸಲಾಗಿದೆ.

ಡ್ರಗ್ಸ್ ಬಳಸುವ ಜನರನ್ನು ನಿಷೇಧಿಸುವುದರ ಜೊತೆಗೆ, ಯುವಕರು ವಿಲಕ್ಷಣ ಕೇಶವಿನ್ಯಾಸವನ್ನು ಹೊಂದುವುದನ್ನು ನಿಷೇಧಿಸಲಾಗಿದೆ ಮತ್ತು ಹರಿದ ಬಟ್ಟೆಗಳನ್ನು ಧರಿಸಿ ಮಸೀದಿಗೆ ಪ್ರವೇಶಿಸುವುದನ್ನು ಸಹ ಜಮಾತ್ ನಿಷೇಧಿಸಿದೆ.

“ಯಾವುದೇ ಯುವಕ ಅಥವಾ ಇತರ ಯಾವುದೇ ನಿವಾಸಿಗಳು ಮಾದಕ ದ್ರವ್ಯ ಸೇವಿಸುವವರೆಂದು ಶಂಕಿಸಿದರೆ, ನಾವು ಮೊದಲು ವಿಚಾರಿಸುತ್ತೇವೆ ಮತ್ತು ಅವರನ್ನು ಮಾದಕ ವ್ಯಸನ ಕೇಂದ್ರಕ್ಕೆ ಸೇರಿಸಬಹುದೇ ಎಂದು ನೋಡುತ್ತೇವೆ. ಜಮಾತ್‌ನಿಂದ ಕೌನ್ಸೆಲಿಂಗ್ ಅನ್ನು ನೀಡಲಾಗುವುದು. ಅವರು ಇನ್ನೂ ಮಾದಕ ದ್ರವ್ಯ ಸೇವನೆ ಮುಂದುವರಿಸಿದರೆ, ಅವರನ್ನು ಕೊಂಡಂಗೇರಿ ಮಸೀದಿಗೆ ಪ್ರವೇಶಿಸದಂತೆ ಬಹಿಷ್ಕರಿಸಲಾಗುವುದು ಮತ್ತು ಜಮಾತ್‌ನಿಂದ ಮದುವೆ ಸಮಾರಂಭದಲ್ಲಿ ನೀಡಲಾಗುವ ಪ್ರಮಾಣಪತ್ರಗಳಲ್ಲಿ ನಾವು ಅದೇ ವಿಷಯವನ್ನು ಉಲ್ಲೇಖಿಸುತ್ತೇವೆ ಎಂದು ಜಮಾತ್ ಕಚೇರಿ ಕಾರ್ಯದರ್ಶಿ ರಫೀಕ್ ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT