ಗುರುವಾರ ಕಾಕ್ಸ್ ಟೌನ್ ಮಾರುಕಟ್ಟೆಯಲ್ಲಿ ಟೊಮೇಟೊ ಕೆಜಿಗೆ 130 ರೂ.ನಂತೆ ಮಾರಾಟವಾಯಿತು. 
ರಾಜ್ಯ

ಭಾರಿ ಮಳೆಯಿಂದಾಗಿ ಕರ್ನಾಟಕದಲ್ಲಿ ಟೊಮೇಟೊ ಬೆಲೆ ಮತ್ತಷ್ಟು ಏರಿಕೆ ಸಾಧ್ಯತೆ!

ಟೊಮೇಟೊ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ ಇದೀಗ ಮತ್ತೊಮ್ಮೆ ಶಾಕ್ ಆಗುವ ಸಾಧ್ಯತೆ ಇದೆ. ಕಡಿಮೆಯಾಗಿದ್ದ ಟೊಮೇಟೊ ಬೆಲೆ ಇದೀಗ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆ ಇದೆ. 

ಬೆಂಗಳೂರು: ಟೊಮೇಟೊ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ ಇದೀಗ ಮತ್ತೊಮ್ಮೆ ಶಾಕ್ ಆಗುವ ಸಾಧ್ಯತೆ ಇದೆ. ಕಡಿಮೆಯಾಗಿದ್ದ ಟೊಮೇಟೊ ಬೆಲೆ ಇದೀಗ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆ ಇದೆ. 

ಏಪ್ರಿಲ್-ಮೇನಲ್ಲಿ ಸುಡುವ ಬೇಸಿಗೆಯಿಂದ ಬೆಳೆ ಹಾನಿಯಾಗಿದ್ದು, ಈಗ ಭಾರಿ ಮಳೆಯಾಗುತ್ತಿದೆ. ಇದರಿಂದ ಟೊಮೇಟೊ ಉತ್ಪಾದನೆಗೆ ಹೊಡೆತ ಬೀಳುವ ಸಾಧ್ಯತೆಯಿದೆ. ಕರ್ನಾಟಕದಲ್ಲಿ 81,000 ಹೆಕ್ಟೇರ್ ಭೂಮಿಯಲ್ಲಿ ಟೊಟೇಟೊ ಬೆಳೆಯಲಾಗುತ್ತದೆ. ಈ ಪೈಕಿ ಹೆಚ್ಚಾಗಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಬೆಳೆಯಲಾಗುತ್ತದೆ.

ಜೂನ್‌ನಲ್ಲಿ ಖಾರಿಫ್‌ ಬೆಳೆಗೆ ಬಿತ್ತನೆ ಆರಂಭವಾಗಿದ್ದು, ಆಗಸ್ಟ್‌ ಮೂರನೇ ವಾರದ ವೇಳೆಗೆ ಬೆಳೆ ಮಾರುಕಟ್ಟೆಗೆ ಬರಲಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು. 

ಕೋಲಾರದ ತೋಟಗಾರಿಕೆ ಉಪನಿರ್ದೇಶಕ ಕೆ.ಆರ್. ಕುಮಾರಸ್ವಾಮಿ ಮಾತನಾಡಿ, ಹವಾಮಾನ ವೈಪರೀತ್ಯದಿಂದ ರಾಜ್ಯದಾದ್ಯಂತ ಶೇ 70ರಷ್ಟು ಟೊಮೇಟೊ ಬೆಳೆಗೆ ಹಾನಿಯಾಗಿದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ರೈತರು ಅತಿಯಾದ ಬಿಸಿಲು ಮತ್ತು ಮಳೆ ಮತ್ತು ಕೀಟಗಳಿಂದ ಅಪಾರ ನಷ್ಟ ಎದುರಿಸಿದ್ದಾರೆ ಎಂದು ಹೇಳಿದರು.

'ಕೋಲಾರ ಜಿಲ್ಲೆಯಲ್ಲಿ 6,000 ಹೆಕ್ಟೇರ್ ಪ್ರದೇಶದಲ್ಲಿ ಟೊಮೇಟೊ ಸಸಿಗಳನ್ನು ನಾಟಿ ಮಾಡಲಾಗಿದೆ. ಕೆಲವೇ ವಾರಗಳಲ್ಲಿ ಫಸಲು ಕೊಯ್ಲಿಗೆ ಬರಲಿದೆ' ಎಂದರು.

ಜಂಟಿ ನಿರ್ದೇಶಕ ಧನರಾಜ್ ಮಾತನಾಡಿ, 25,000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದ್ದು, ಪರಿಸ್ಥಿತಿ ಅನುಕೂಲಕರವಾಗಿದೆ. ಆದರೆ, ಹೆಚ್ಚು ಮಳೆಯಾದರೆ ಬೆಳೆ ಹಾನಿಯಾಗುವ ಸಂಭವವಿದೆ. 'ಖಾರಿಫ್ ಬಿತ್ತನೆ ಜೂನ್ ಎರಡನೇ ವಾರದಲ್ಲಿ ಕೊನೆಗೊಂಡಿದೆ ಮತ್ತು ಆಗಸ್ಟ್ ಎರಡನೇ ಅಥವಾ ಮೂರನೇ ವಾರದಲ್ಲಿ ಟೊಮೇಟೊ ಕೊಯ್ಲಿಗೆ ಸಿದ್ಧವಾಗಲಿದೆ. ಇದು ಬಿಕ್ಕಟ್ಟನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಿದರು.

ಟೊಮೇಟೊ ಗುಣಮಟ್ಟವನ್ನು ಅವಲಂಬಿಸಿ ಬೆಲೆಗಳು ಇರುತ್ತವೆ. ಒಂದು ಕ್ವಿಂಟಾಲ್ ಉತ್ತಮ ಗುಣಮಟ್ಟದ ಟೊಮೇಟೊಗೆ 7 ಸಾವಿರ ರೂ.ಗೆ ಮಾರಾಟವಾಗುತ್ತಿದೆ. ಉತ್ತಮ ಗುಣಮಟ್ಟದ ಟೊಮೇಟೊ ಕೆಜಿಗೆ 100 ರಿಂದ 120 ರೂ.ಗೆ ಮಾರಾಟ ಮಾಡಲಾಗುತ್ತದೆ. ಈಗ, ಮುಂಗಾರು ಮಳೆಯಿಂದಾಗಿ ಆಗಸ್ಟ್‌ನಲ್ಲಿ ಬೆಲೆಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ. 

ಸಾವಯವ ಕೃಷಿ ತಜ್ಞ ಡಾ. ಹುಲ್ನಾಚೇಗೌಡ ಕೆ.ಆರ್, ಕಳೆದ ಮೂರು ಋತುಗಳಲ್ಲಿ ರಸಗೊಬ್ಬರಗಳನ್ನು ಹೆಚ್ಚು ಬಳಸಿದ್ದರಿಂದ ಬೆಳೆಗಳಿಗೆ ಕೀಟ ಬಾಧೆ ಉಂಟಾಗಿದೆ ಎಂದು ಒಪ್ಪಿಕೊಂಡರು.

'ಬಿಳಿ ನೊಣಗಳು ಸಸ್ಯಗಳನ್ನು ಹಾನಿಗೊಳಿಸಿವೆ. ರಸಗೊಬ್ಬರಗಳ ಅತಿಯಾದ ಬಳಕೆಯಿಂದಾಗಿ ಮಣ್ಣಿನಲ್ಲಿ ಇಂಗಾಲದ ನಷ್ಟದಿಂದಾಗಿ, ಸಸ್ಯಗಳು ನೊಣಗಳಿಂದ ಉಂಟಾಗುವ ಸೋಂಕನ್ನು ವಿರೋಧಿಸಲು ಸಾಧ್ಯವಾಗಲಿಲ್ಲ. ಸದ್ಯ 0.5% ಕಾರ್ಬನ್ ಮಣ್ಣಿನಲ್ಲಿ ಇದೆ. ಮಣ್ಣಿನಲ್ಲಿ ಕನಿಷ್ಠ 1% ಕಾರ್ಬನ್ ಇರಬೇಕು. ಕಳಪೆ ಇಂಗಾಲದ ಕಾರಣದಿಂದಾಗಿ, ಬಿಳಿ ನೊಣಗಳು ಸಸ್ಯಗಳ ಮೇಲೆ ದಾಳಿ ಮಾಡುತ್ತವೆ. ಇದರ ಪರಿಣಾಮವಾಗಿ ಹೂವುಗಳು ಒಣಗುತ್ತವೆ ಮತ್ತು ಹಣ್ಣುಗಳ ಗುಣಮಟ್ಟ ಕಳಪೆಯಾಗಿದೆ' ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಲಬುರಗಿ: ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಉಕ್ರೇನ್‌ ಮೇಲೆ ರಷ್ಯಾ ದಾಳಿ; ಕನಿಷ್ಠ ಏಳು ಜನ ಸಾವು

Punishment: 5 ವರ್ಷದ ಬಾಲಕನನ್ನು ಮರಕ್ಕೆ ನೇತು ಹಾಕಿದ ಶಿಕ್ಷಕಿ!

ವಿಶ್ವಕಪ್ ವಿಜೇತ ಕರ್ನಾಟಕದ ಅಂಧ ಕ್ರಿಕೆಟ್ ಆಟಗಾರ್ತಿಯರಿಗೆ ತಲಾ 10 ಲಕ್ಷ ರೂ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

SCROLL FOR NEXT