ಹೆಪಟೈಟಿಸ್ ಬಿ 
ರಾಜ್ಯ

ಹೆಪಟೈಟಿಸ್ ಬಿ ವೈರಸ್ ಮುಕ್ತ ರಾಜ್ಯವಾಗಿಸುವ ಗುರಿ: ಲಸಿಕೆ ನೀಡಲು ಸರ್ಕಾರ ಮುಂದು!

ಹೆಪಟೈಟಿಸ್ ಬಿ ಮತ್ತು ಸಿ ಮಾರಣಾಂತಿಕ ಕಾಯಿಲೆಯಾಗಿದ್ದು, ಈ ಕುರಿತು ಆರೋಗ್ಯ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ. ರಾಜ್ಯವನ್ನುಹೆಪಟೈಟಿಸ್ ಬಿ ವೈರಸ್ ಮುಕ್ತವಾಗಿಸುವ ಗುರಿಯನ್ನು ಇಟ್ಟುಕೊಂಡಿರುವ ರಾಜ್ಯ ಸರ್ಕಾರವು, ಇದೀಗ ಲಸಿಕೆ ನೀಡಲು ಹೊಸ ಕಾರ್ಯಕ್ರಮಗಳ ಆರಂಭಿಸಲು ಮುಂದಾಗಿದೆ.

ಬೆಂಗಳೂರು: ಹೆಪಟೈಟಿಸ್ ಬಿ ಮತ್ತು ಸಿ ಮಾರಣಾಂತಿಕ ಕಾಯಿಲೆಯಾಗಿದ್ದು, ಈ ಕುರಿತು ಆರೋಗ್ಯ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ. ರಾಜ್ಯವನ್ನುಹೆಪಟೈಟಿಸ್ ಬಿ ವೈರಸ್ ಮುಕ್ತವಾಗಿಸುವ ಗುರಿಯನ್ನು ಇಟ್ಟುಕೊಂಡಿರುವ ರಾಜ್ಯ ಸರ್ಕಾರವು, ಇದೀಗ ಲಸಿಕೆ ನೀಡಲು ಹೊಸ ಕಾರ್ಯಕ್ರಮಗಳ ಆರಂಭಿಸಲು ಮುಂದಾಗಿದೆ.

ಹೆಪಟೈಟಿಸ್ ಬಿಗೆ ಲೈಂಗಿಕ ಕಾರ್ಯಕರ್ತರು, ಲೈಂಗಿಕ ಅಲ್ಪಸಂಖ್ಯಾತ, ಕೈದಿಗಳು, ಇಂಟ್ರಾವೆನಸ್ ಡ್ರಗ್ (ನರಕ್ಕೆ ಔಷಧಿ ಹಾಕಿಕೊಳ್ಳುವವರು) ಬಳಸುವವರು ಮತ್ತು ಆರೋಗ್ಯ ಕಾರ್ಯಕರ್ತರು ಹೆಚ್ಚಾಗಿ ಒಳಗಾಗುತ್ತಾರೆ. ಇಂತಹವರಿಗೆ ಲಸಿಕೆ ನೀಡಲು ಆರೋಗ್ಯ ಇಲಾಖೆ ಚಿಂತನೆ ನಡೆಸುತ್ತಿದೆ.

ರಾಷ್ಟ್ರೀಯ ವೈರಲ್ ಹೆಪಟೈಟಿಸ್ ನಿಯಂತ್ರಣ ಕಾರ್ಯಕ್ರಮದ ಉಪನಿರ್ದೇಶಕಿ ಮತ್ತು ರಾಜ್ಯ ನೋಡಲ್ ಅಧಿಕಾರಿ ಡಾ.ಶಶಿಕಲಾ ಎನ್ ಅವರು ಮಾತನಾಡಿ, ಹೆಪಟೈಟಿಸ್ ಬಿ ಮತ್ತು ಸಿ ರಕ್ತ ಮತ್ತು ಲೈಂಗಿಕ ಮಾರ್ಗಗಳ ಮೂಲಕವೂ ಹರಡುತ್ತದೆ. ಹೀಗಾಗಿ ಎಲ್ಲಾ ರಕ್ತದಾನಿಗಳು ಮತ್ತು ಗರ್ಭಿಣಿ, ತಾಯಂದಿರನ್ನು ತಪಾಸಣೆ ನಡೆಸಲಾಗುತ್ತಿದೆ. 2022-23 ರಲ್ಲಿ, ರಾಜ್ಯದ ಉಪಕ್ರಮದ ಅಡಿಯಲ್ಲಿ 2.43 ಲಕ್ಷ ಜನರನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಈ ಪೈಕಿ 6,682 ಮಂದಿಯಲ್ಲಿ ಸೋಂಕು ಕಂಡು ಬಂದಿತ್ತು. ಹೆಪಟೈಟಿಸ್ ಸಿ ಪರೀಕ್ಷೆಗೆ ಒಳಗಾದ 85,000 ಜನರಲ್ಲಿ 868 ಮಂದಿಯಲ್ಲಿ ಸೋಂಕು ಪರೀಕ್ಷೆ ಬಂದಿದೆ ಎಂದು ಹೇಳಿದ್ದಾರೆ.

ಹೆಪಟೈಟಿಸ್ ಬಿ, ಸಿ ಮಾರಣಾಂತಿಕ ಕಾಯಿಲೆಯಾಗಿದ್ದು, ಪ್ರತೀವರ್ಷ ಜುಲೈ 28 ರಂದು ಹೆಪಟೈಟಿಸ್ ಬಿ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಇದರಂತೆ ಆರೋಗ್ಯ ಇಲಾಖೆಯು ನಗರದಲ್ಲಿ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದ್ದು, ಕಾರ್ಯಕ್ರಮವನ್ನು ಆರೋಗ್ಯ ಸಚಿವ ದಿನೇಶ್ ಗುಂಡೂ ರಾವ್ ಅವರು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಯುವಜನರಲ್ಲಿ ಆರೋಗ್ಯ ಜಾಗೃತಿ ಮೂಡಿಸುವುದು ಅತ್ಯವಶ್ಯ. ಹೆಪಟೈಟಿಸ್ ಸೋಂಕು ಆಹಾರ ಮತ್ತು ಜೀವನಶೈಲಿಯಲ್ಲಿ ಆಗುವ ಬದಲಾವಣೆಗಳಿಂದ ಬರುತ್ತದೆ. ಮಾನವನ ಅಂಗಾಂಗಗಳಲ್ಲಿ ಯಕೃತ್ತಿಗೆ ಹೆಚ್ಚು ಪ್ರಾಮುಖ್ಯತೆ ನೀಡಿ, ಈ ಅಂಗದ ಆರೈಕೆಗೆ ಆದ್ಯತೆ ನೀಡಬೇಕು. ಹೆಪಟೈಟಿಸ್ ಬಿ ಮತ್ತು ಸಿ ವೈರಾಣು ಯಕೃತ್ತಿಗೆ ಹಾನಿ ಮಾಡುತ್ತವೆ. ಹೆಪಟೈಟಿಸ್‌ನಿಂದ ದೇಶದಲ್ಲಿ ಮೂರೂವರೆ ಕೋಟಿಗೂ ಹೆಚ್ಚು ಜನರು ಯಕೃತ್ತು ಸಮಸ್ಯೆ ಎದುರಿಸುತ್ತಿದ್ದಾರೆ’ ಎಂದು ಹೇಳಿದರು.

‘ರಾಜ್ಯದಲ್ಲಿ ತಪಾಸಣೆಗೆ ಒಳಗಾದವರಲ್ಲಿ ಶೇ 1 ರಷ್ಟು ಜನರಲ್ಲಿ ಹೆಪಟೈಟಿಸ್ ಸೋಂಕು ಕಂಡುಬಂದಿದೆ. 2030ರೊಳಗೆ ಹೆಪಟೈಟಿಸ್ ಸಿ ವೈರಾಣು ಮುಕ್ತ ರಾಜ್ಯವನ್ನಾಗಿ ಮಾಡುವ ಗುರಿ ಹೊಂದಲಾಗಿದೆ. ಹೆಪಟೈಟಿಸ್ ಬಿ ವೈರಾಣುವನ್ನೂ ನಿಯಂತ್ರಣದಲ್ಲಿಡಲು ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗುತ್ತಿದೆ. ಆದ್ದರಿಂದ ಈ ವೈರಾಣುವಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಮೂತ್ರಪಿಂಡ ವೈಫಲ್ಯದಂತಹ ಸಮಸ್ಯೆಗಳಿಗೆ ಕಾರಣವಾಗುತ್ತಿರುವ ಈ ರೋಗ ಸೇರಿ ವಿವಿಧ ಕಾಯಿಲೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಪಠ್ಯದಲ್ಲಿ ಅಳವಡಿಸಬೇಕು’ ಎಂದು ತಿಳಿಸಿದರು.

‘ಹೆಪಟೈಟಿಸ್ ವೈರಾಣುವನ್ನು ಆರಂಭದಲ್ಲೇ ಪತ್ತೆ ಹಚ್ವಿದರೆ ಯಕೃತ್ತಿಗೆ ಹಾನಿ ಆಗುವುದನ್ನ ತಡೆಗಟ್ಟಲು ಸಾಧ್ಯ. ಆದ್ದರಿಂದ ಇಲಾಖೆಯು ತಪಾಸಣೆ ಮಾಡುವುದರ ಜೊತೆಗೆ ಲಸಿಕೆ ಹಾಕುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ. ಗರ್ಭಿಣಿಯರಿಗೆ ಹೆಪಟೈಟಿಸ್ ಬಿ ತಪಾಸಣೆ ಕಡ್ಡಾಯ ಮಾಡಿ, ಸೋಂಕಿತ ಗರ್ಭಿಣಿಯರಿಗೆ ಜನಿಸುವ ಶಿಶುಗಳಿಗೆ ಹೆಪಟೈಟಿಸ್ ಬಿ ಚುಚ್ಚುಮದ್ದು ನೀಡಲಾಗುವುದು’ ಎಂದು ಹೇಳಿದರು.

ಪ್ರೌಢ ಹಾಗೂ ಪದವಿ ಪಠ್ಯಕ್ರಮದಲ್ಲಿ ಆರೋಗ್ಯ ಶಿಕ್ಷಣವನ್ನು ನೀಡುವ ಮೂಲಕ ಬಹುತೇಕ ಯುವಕರನ್ನು ಜಾಗೃತಗೊಳಿಸಬಹುದು. ಮಾರಕ ಕಾಯಿಲೆಗಳನ್ನು ಯುವಕರನ್ನ ದೂರವಿಡಬಹುದು. ಉತ್ತಮ ಆರೋಗ್ಯ ನೀಡುವ ಆಹಾರಗಳ ಬಗ್ಗೆ ಅರಿವು ಮೂಡಿಸಬೇಕು.‌ ಹೆಪಟೈಟಿಸ್ ನಂತಹ ವೈರಸ್​ಗಳು, ಹೇಗೆ ಬರುತ್ತವೆ. ಲಿವರ್​ನ ಮಹತ್ವದ ಬಗ್ಗೆ ಶಿಕ್ಷಣ ಅತ್ಯಗತ್ಯ. ಹೆಪಟೈಟಿಸ್ ವೈರಸ್ ಆರಂಭದಲ್ಲೇ ಪತ್ತೆ ಹಚ್ವಿದರೆ ಲಿವರ್ ಫೆಲುವರ್ ಆಗುವುದನ್ನು ತಡೆಗಟ್ಟಬಹುದಾಗಿದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಸ್ಕ್ರೀನಿಂಗ್ ಮಾಡುವುದರ ಜೊತೆಗೆ, ಲಸಿಕೆ ಹಾಕುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ. ವಿಶೇಷವಾಗಿ ಗರ್ಭಿಣಿಯರಿಗೆ ಹೆಪಟೈಟಿಸ್ ಬಿ ಸ್ಕ್ರೀನಿಂಗ್ ಕಡ್ಡಾಯವಾಗಿ ಮಾಡಿ, ಪಾಸಿಟಿವ್ ಗರ್ಭಿಣಿಯರಿಗೆ ಜನಿಸುವ ಶಿಶುಗಳಿಗೆ ಹೆಪಟೈಟಿಸ್ ಬಿ ಚುಚ್ಚುಮದ್ದು ನೀಡಲಾಗುವುದು ಎಂದು ಮಾಹಿತಿ ನೀಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

SCROLL FOR NEXT