ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ಬುದ್ಧಿ ಹೇಳಿದ್ದಕ್ಕೆ ಸಂಬಂಧಿಯನ್ನು ಕೊಂದ ಮದ್ಯವ್ಯಸನಿ!

ಕೆಲಸದ ನಿಮಿತ್ತ ಜಾರ್ಖಂಡ್‌ನಿಂದ ಬೆಂಗಳೂರಿಗೆ ಬಂದಿದ್ದ 32 ವರ್ಷದ ಮದ್ಯವ್ಯಸನಿಯೊಬ್ಬ ತನ್ನ ಸಂಬಂಧಿಯನ್ನು ಕೊಲೆ ಮಾಡಿರುವ ಘಟನೆ ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬೆಂಗಳೂರು: ಕೆಲಸದ ನಿಮಿತ್ತ ಜಾರ್ಖಂಡ್‌ನಿಂದ ಬೆಂಗಳೂರಿಗೆ ಬಂದಿದ್ದ 32 ವರ್ಷದ ಮದ್ಯವ್ಯಸನಿಯೊಬ್ಬ ತನ್ನ ಸಂಬಂಧಿಯನ್ನು ಕೊಲೆ ಮಾಡಿರುವ ಘಟನೆ ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮೃತನನ್ನು ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯ ಸುಲೇಂದರ್ ಓರಾನ್ ಎಂದು ಗುರುತಿಸಲಾಗಿದೆ. ಆರೋಪಿ ಫಾಗು ಓರಾನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಜಾರ್ಖಂಡ್ ನಿಂದ ಬೆಂಗಳೂರಿಗೆ ಬಂದಿದ್ಧ ಫಾಗು ಓರಾನ್ ಅತಿಯಾದ ಕುಡಿತದ ಚಟ ಹೊಂದಿದ್ದ, ಹೀಗಾಗಿ ವಾಪಸ್ ಊರಿಗೆ ಹೋಗುವಂತೆ ಸುಲೇಂದರ್ ಓರಾನ್ ಸಲಹೆ ನೀಡಿದ್ದ, ಇದರಿಂದ ಕುಪಿತಗೊಂಡ ಆತ ಕಬ್ಬಿಣದ ಪೈಪ್  ನಿಂದ ಹೊಡೆದು ಕೊಂದಿದ್ದಾನೆ.

ಕೆಂಗೇರಿ ಹೋಬಳಿಯ ಅಂಚೆಪಾಳ್ಯದ ಸೇಂಟ್ ಬೆನೆಡಿಕ್ಟ್ ಶಾಲೆ ಬಳಿಯ ಕಟ್ಟಡ ನಿರ್ಮಾಣ ಸ್ಥಳದಲ್ಲಿ ಕಳೆದ ನಾಲ್ಕು ತಿಂಗಳಿನಿಂದ ಸುಲೇಂದರ್ ಹಾಗೂ ಆತನ ಪತ್ನಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಅದೇ ದಿನ ಸಂಜೆ ಮದ್ಯ ಸೇವಿಸಿ ಕಲ್ಲು ತೂರಾಟ ನಡೆಸಿ ವಾಹನಕ್ಕೆ ಹಾನಿ ಮಾಡಿ, ವಾಹನ ಮಾಲೀಕರೊಂದಿಗೆ ಜಗಳವಾಡಿದ್ದ. ಸುಲೇಂದರ್ ಅದರ ಬಗ್ಗೆ ತಿಳಿದುಕೊಂಡು ಫಾಗು ಅವರ ನಡವಳಿಕೆಯನ್ನು ನಿಂದಿಸಿದ್ದ, ಜೊತೆಗೆ ವಾಪಸ್ ಹೋಗುವಂತೆ ಬುದ್ದಿ ಹೇಳಿದ್ದ.

ಶುಕ್ರವಾರ ಮಧ್ಯಾಹ್ನ ಫಾಗು ಈ ವಿಚಾರವಾಗಿ ಸುಲೇಂದರ್‌ನೊಂದಿಗೆ ಜಗಳವಾಡಿದ್ದ. ಬೇರೆಯವರ ಮುಂದೆ ತನ್ನನ್ನು ನಿಂದಿಸಿದ್ದಕ್ಕಾಗಿ ಕಬ್ಬಿಣದ ಪೈಪ್‌ನಿಂದ ಹಲ್ಲೆ ಮಾಡಿದ್ದಾನೆ. ಇತರ ಕಾರ್ಮಿಕರು ಅವರನ್ನು ತಡೆದು ಸುಲೇಂದರ್ ಅವರನ್ನು ಆಸ್ಪತ್ರೆಗೆ ಸಾಗಿಸಿದರು, ಅಲ್ಲಿ ಅವರು ಸಾವನ್ನಪ್ಪಿದರು ಎಂದು ಪೊಲೀಸರು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT