ಗೋದಾಮಿನಲ್ಲಿ ಬೆಂಕಿ 
ರಾಜ್ಯ

ಚಾಮುಂಡಿ ಬೆಟ್ಟದ ತಪ್ಪಲಿನ ಗೋದಾಮಿನಲ್ಲಿ ಬೆಂಕಿ-ಅಪಾರ ಪ್ರಮಾಣದ ಪೀಠೋಪಕರಣಗಳು ಧ್ವಂಸ

ಮೈಸೂರು ನಗರದ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಇರುವ ಸಂಗಮ್ ಶಾಮಿಯಾನ ಹಾಗೂ ಡೆಕೋರೆಟೆಡ್‌ ಗೋದಾಮಿನಲ್ಲಿ ಇಂದು ಗುರುವಾರ ಬೆಳಗಿನ ಜಾವ ಬೆಂಕಿ ಅನಹಾತು ಸಂಭವಿಸಿದೆ. 

ಮೈಸೂರು: ಮೈಸೂರು ನಗರದ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಇರುವ ಸಂಗಮ್ ಶಾಮಿಯಾನ ಹಾಗೂ ಡೆಕೋರೆಟೆಡ್‌ ಗೋದಾಮಿನಲ್ಲಿ ಇಂದು ಗುರುವಾರ ಬೆಳಗಿನ ಜಾವ ಬೆಂಕಿ ಅನಹಾತು ಸಂಭವಿಸಿದೆ. 

ಜ್ವಾಲೆಗೆ ಅಪಾರ ಮೌಲ್ಯದ ಶಾಮಿಯಾನ ಹಾಗೂ ಡೆಕೋರೇಷನ್ ವಸ್ತುಗಳು ನಾಶವಾಗಿವೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ, ಸತತ ಕಾರ್ಯಾಚರಣೆ ನಡೆಸಿ ಬೆಂಕಿ‌ ನಂದಿಸಿದ್ದಾರೆ. ಈ ಗೋಡಾನ್ ಮೈಸೂರು ನಗರದ ಷರಿಫ್ ಎಂಬವರ ಅಳಿಯನಿಗೆ ಸೇರಿದ್ದಾಗಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಶಾಮಿಯಾನ ಸಾಮಾಗ್ರಿಗಳನ್ನು ಹೊಂದಿದ್ದರು.

ಸ್ಥಳಕ್ಕೆ ಮೈಸೂರು ನಗರದ ಸರಸ್ವತಿಪುರಂ, ಹೆಬ್ಬಾಳ ಹಾಗೂ ಬನ್ನಿಮಂಟಪದ ಅಗ್ನಿ ಶಾಮಕ ವಾಹನಗಳು ಸಿಬ್ಬಂದಿಯೊಂದಿಗೆ ಆಗಮಿಸಿ, ಸುಮಾರು ಮೂರು ಗಂಟೆಗೂ ಅಧಿಕ ಸಮಯ ಬೆಂಕಿ ನಂದಿಸಲು ತೆಗೆದುಕೊಂಡರು. ಸುತ್ತಮುತ್ತಲಿನ ಪ್ರದೇಶಗಳಿಗೆ ಬೆಂಕಿ ಹರಡದಂತೆ ಅಗ್ನಿ ಶಾಮಕ ದಳದವರು ತಪ್ಪಿಸಿದ್ದಾರೆ. ಕೃಷ್ಣ ರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

SIR ಗೆ ಆಕ್ಷೇಪ: ಪಶ್ಚಿಮ ಬಂಗಾಳ ಚುನಾವಣೆ ರದ್ದತಿಗೆ ಕೋರಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್; ವಿರೋಧಿಗಳಿಗೆ ತೀವ್ರ ಹಿನ್ನಡೆ!

ಸರ್ಕಾರಿ ಗೌರವಗಳೊಂದಿಗೆ ಗಾಯಕಿ ಆಶಾ ಭೋಸ್ಲೆ ಅಂತ್ಯಕ್ರಿಯೆ

No Toll For Indian Tankers': ಅಮೆರಿಕ ದಿಗ್ಬಂಧನ ನಡುವೆ ಹಾರ್ಮುಜ್ ಜಲಸಂಧಿ ಮೂಲಕ ಭಾರತೀಯ ಹಡಗು ಸಾಗಲು ಇರಾನ್ ಭರವಸೆ!

ಧಾರವಾಡದಲ್ಲಿ ಕಾಂಗ್ರೆಸ್ ಮುಖಂಡನ ಹತ್ಯೆ: 9 ಮಂದಿ ಬಂಧನ; ಕೊಲೆಗೆ ನಿಜವಾದ ಕಾರಣ ಬಿಚ್ಚಿಟ್ಟ ಪೊಲೀಸರು

ಗರ್ಭಕೋಶವನ್ನೇ ಕೈಯಿಂದ ಕಿತ್ತು ಬಿಸಾಕೋಣ ಅನಿಸಿತ್ತು; ವಿಪರೀತ ಮೂಡ್ ಸ್ವಿಂಗ್ಸ್: 'ಆ' ದಿನಗಳ ಭೀಕರತೆ ಬಿಚ್ಚಿಟ್ಟ ನಟಿ ಐಶ್ವರ್ಯಾ!

SCROLL FOR NEXT