ರಾಜ್ಯ

ಬೆಂಗಳೂರು-ಜೋಲಾರಪೆಟ್ಟ ನಡುವೆ ಗಂಟೆಗೆ 143 ಕಿಮೀ ವೇಗದಲ್ಲಿ ರೈಲುಗಳ ಪ್ರಾಯೋಗಿಕ ಚಾಲನೆ

Sumana Upadhyaya

ಬೆಂಗಳೂರು: ಬೆಂಗಳೂರು ಮತ್ತು ಜೋಲಾರಪೆಟ್ಟ ನಡುವಿನ ವಿದ್ಯುದ್ದೀಕರಿಸಿದ ಡಬಲ್ ಲೈನ್ ವಿಭಾಗದಲ್ಲಿ ಇಂದು ಗುರುವಾರ ರೈಲಿನ ಚಾಲನೆ ವೇಗದ ಪ್ರಯೋಗ ನಡೆಸಲಾಗುವುದು. 110 ಕಿಲೋ ಮೀಟರ್ ನಿಂದ 130 kmph ವರೆಗೆ ಗಂಟೆಗೆ ರೈಲುಗಳ ವೇಗದ ಓಡಾಟ ಅವಧಿಯನ್ನು ಹೆಚ್ಚಿಸಲು ಅನುಕೂಲವಾಗುವಂತೆ ಆಸಿಲೇಟಿಂಗ್ ಮಾನಿಟರಿ ಸಿಸ್ಟಮ್ (OMS) ಸ್ಪೀಡ್ ಟ್ರಯಲ್ ನ್ನು ಇಲ್ಲಿ ಮಾಡಲಾಗುತ್ತದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. 

ವೇಗ ಪ್ರಯೋಗದ ಸಮಯದಲ್ಲಿ, ತಪಾಸಣೆ ರೈಲು ವಿದ್ಯುದ್ದೀಕೃತ ಡಬಲ್ ಲೈನ್‌ನಲ್ಲಿ ಗಂಟೆಗೆ 143 ಕಿಮೀ ವೇಗದಲ್ಲಿ ಚಲಾಯಿಸಲಾಗುತ್ತದೆಯೇ ಎಂದು ಪರೀಕ್ಷಿಸಲಾಗುತ್ತದೆ. ಸಾರ್ವಜನಿಕರು ರೈಲ್ವೆ ಮಾರ್ಗವನ್ನು ಅತಿಕ್ರಮಿಸದಂತೆ ಸೂಚಿಸಲಾಗಿದೆ, ಇದು ಜೀವಕ್ಕೆ ಅಪಾಯವನ್ನುಂಟುಮಾಡುತ್ತದೆ ಎಂದು ಪ್ರಕಟಣೆ ತಿಳಿಸಿದೆ. 

ಹಳಿಗಳು ಮತ್ತು ರೈಲ್ವೆ ವಾಹನಗಳ ಸ್ಥಿತಿಯನ್ನು ನಿರ್ಣಯಿಸಲು ರೈಲ್ವೆಯು ಅತ್ಯಾಧುನಿಕ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. OMS ಒಂದು ಸುಧಾರಿತ ಪೋರ್ಟಬಲ್ ಸಾಧನವಾಗಿದ್ದು, ಚಲನೆಯಲ್ಲಿರುವಾಗ ಗಾಡಿಯ ನೆಲದ ಮೇಲೆ ಯಾವುದೇ ಅಪೇಕ್ಷಿತ ಸ್ಥಳದಲ್ಲಿ ಲಂಬ ಮತ್ತು ಪಾರ್ಶ್ವ ವೇಗವರ್ಧಕಗಳನ್ನು ನಿರಂತರವಾಗಿ ಅಳೆಯುತ್ತದೆ.

SCROLL FOR NEXT