ರಾಜ್ಯ

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಕ್ಯಾನ್ಸರ್ ಮುಕ್ತ!

Lingaraj Badiger

ಬೆಂಗಳೂರು: ಜೂನ್ 4ರ ಕ್ಯಾನ್ಸರ್ ಸರ್ವೈವರ್ಸ್ ಡೇ ಪ್ರಯುಕ್ತ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕ್ಯಾನ್ಸರ್ ತಪಾಸಣಾ ಶಿಬಿರ ಆಯೋಜಿಸಲಾಗಿದ್ದು, ಯಾವುದೇ ಕೈದಿಗಳಿಗೆ ಕ್ಯಾನ್ಸರ್ ಪತ್ತೆಯಾಗಿಲ್ಲ.

“ಕೈದಿಗಳನ್ನು ಸಾಮಾನ್ಯವಾಗಿ ಸರಿಯಾದ ನೈರ್ಮಲ್ಯ ಇಲ್ಲದ, ಮುಚ್ಚಿದ ಸ್ಥಳಗಳಲ್ಲಿ ಇರಿಸಲಾಗುತ್ತದೆ. ಕೈದಿಗಳ ಆರೋಗ್ಯ ಹಕ್ಕುಗಳು ಮತ್ತು ವೈಯಕ್ತಿಕ ನೈರ್ಮಲ್ಯಕ್ಕೆ ಸಂಬಂಧಿಸಿದಂತೆ ಅವರನ್ನು ಹೆಚ್ಚಾಗಿ ನಿರ್ಲಕ್ಷಿಸಲಾಗುತ್ತದೆ” ಎಂದು ಸಕ್ರಿಯಾ ಚಾರಿಟಬಲ್ ಟ್ರಸ್ಟ್‌ನ ಅನಿತಾ ರಾವ್ ಅವರು ಹೇಳಿದ್ದಾರೆ.

ಕಾರ್ಕಿನೋಸ್ ಹೆಲ್ತ್‌ಕೇರ್ ಸಕ್ರಿಯಾ ಚಾರಿಟೇಬಲ್ ಟ್ರಸ್ಟ್‌ನ ಸಹಯೋಗದೊಂದಿಗೆ ಆಯೋಜಿಸಿದ್ದ ಸ್ಕ್ರೀನಿಂಗ್ ಕ್ಯಾಂಪ್ ವೇಳೆ ಯಾರಿಗೂ ಕ್ಯಾನ್ಸರ್ ಇರುವುದು ಪತ್ತೆಯಾಗಿಲ್ಲ. ಈ ಕ್ಯಾಂಪ್ ಇರುವವರನ್ನು ಅಥವಾ ಹೆಚ್ಚಿನ ಅಪಾಯದಲ್ಲಿರುವವರನ್ನು ಗುರುತಿಸಲು ಸಹಾಯ ಮಾಡುತ್ತದೆ ಎಂದು ರಾವ್ ವಿವರಿಸಿದ್ದಾರೆ.

ಮಹಿಳಾ ಕೈದಿಗಳಲ್ಲಿ ಉತ್ತಮ ಮುಟ್ಟಿನ ನೈರ್ಮಲ್ಯ ಖಚಿತಪಡಿಸಿಕೊಳ್ಳಲು, ಸಂಘಟಕರು ಮರುಬಳಕೆ ಮಾಡಬಹುದಾದ ಸ್ಯಾನಿಟರಿ ನ್ಯಾಪ್ಕಿನ್ಗಳು ಮತ್ತು ಮುಟ್ಟಿನ ಕಪ್ ಗಳನ್ನು ವಿತರಿಸಿದರು.

ರಾವ್ ಅವರು 300 ಮಹಿಳಾ ಕೈದಿಗಳೊಂದಿಗೆ ಮಾತನಾಡಿದ್ದು, ಅವರು ಕಡಿಮೆ ಗುಣಮಟ್ಟದ ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸುತ್ತಿರುವುದು ಕಂಡುಬಂದಿದೆ. 1,100 ಕ್ಕೂ ಹೆಚ್ಚು ಜನರಿಗೆ ಸ್ತನ, ಮೌಖಿಕ, ಗರ್ಭಕೋಶ, ಶ್ವಾಸಕೋಶ, ಪ್ರಾಸ್ಟೇಟ್, ಜೊತೆಗೆ ಸಾಂಕ್ರಾಮಿಕವಲ್ಲದ ರೋಗಗಳ ತಪಾಸಣೆ ಮಾಡಲಾಯಿತು. ಸುಮಾರು 113 ಮಹಿಳೆಯರಿಗೆ ಗರ್ಭಕೋಶದ ಕ್ಯಾನ್ಸರ್ ತಪಾಸಣೆ ಮಾಡಲಾಯಿತು ಎಂದು ಹೇಳಿದ್ದಾರೆ.

SCROLL FOR NEXT