ಕು.ವೀರಭದ್ರಪ್ಪರಿಂದ ಪುಸ್ತಕ ಬಿಡುಗಡೆ 
ರಾಜ್ಯ

ರಾಷ್ಟ್ರಪತಿ ಮುರ್ಮು ವಿಧವೆ ಎಂಬ ಕಾರಣಕ್ಕೆ ಸಂಸತ್ ಉದ್ಘಾಟನೆಗೆ ಕರೆದಿಲ್ಲ: ಕುಂ.ವೀರಭದ್ರಪ್ಪ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿಧವೆ ಎಂಬ ಕಾರಣಕ್ಕೆ ನೂತನ ಸಂಸತ್ ಭವನ ಉದ್ಘಾಟನೆಗೆ ಕರೆದಿಲ್ಲ ಎಂದು ಖ್ಯಾತ ಸಾಹಿತಿ ಕುಂ.ವೀರಭದ್ರಪ್ಪ ಅವರು ಶುಕ್ರವಾರ ಹೇಳಿದ್ದಾರೆ.

ಚಾಮರಾಜನಗರ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿಧವೆ ಎಂಬ ಕಾರಣಕ್ಕೆ ನೂತನ ಸಂಸತ್ ಭವನ ಉದ್ಘಾಟನೆಗೆ ಕರೆದಿಲ್ಲ ಎಂದು ಖ್ಯಾತ ಸಾಹಿತಿ ಕುಂ.ವೀರಭದ್ರಪ್ಪ ಅವರು ಶುಕ್ರವಾರ ಹೇಳಿದ್ದಾರೆ.

ಚಾಮರಾಜನಗರದ ಡಾ.ರಾಜ್‍ಕುಮಾರ್ ರಂಗಮಂದಿರದಲ್ಲಿ ಸಾಹಿತಿ ಕೆ.ಶ್ರೀದರ್ ಅವರ ಅವಳಿ ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಕು.ವಿ, ದೇಶದ ಶಕ್ತಿ ಕೇಂದ್ರ ಸಂಸತ್ ಭವನವನ್ನು ರಾಷ್ಟ್ರಪತಿಗಳು ಉದ್ಘಾಟಿಸಬೇಕಿತ್ತು. ಆದರೆ, ರಾಷ್ಟ್ರಪತಿ ಹಿಂದುಳಿದ ಜಾತಿಯವರಾದ್ದರಿಂದ ಮತ್ತು ಅವರು ವಿಧವೆಯಾಗಿದ್ದರಿಂದ ಶುಭಕಾರ್ಯಕ್ಕೆ ಅಮಂಗಲವೆಂದು ಅವರನ್ನು ಕಾರ್ಯಕ್ರಮದಿಂದ ಪ್ರಧಾನಿ ಮೋದಿ ಹೊರಗಿಟ್ಟರು. ಆದರೆ ಇದನ್ನು ಯಾರೂ ಪ್ರಶ್ನೆ ಮಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸಂಸತ್ ಈ ದೇಶದ 135 ಕೋಟಿ ಜನರ ಪ್ರತಿನಿಧಿ. ಕೇವಲ ಶೇ. 2 ರಷ್ಟು ಇರುವ ಜನರದಲ್ಲ. ಅದು ದೇಶದ ಸಂಸತ್ತು. ಆದರೆ ಅದರ ಉದ್ಘಾಟನೆಗೆ ರಾಷ್ಟ್ರಪತಿಯವರನ್ನು ಕರೆಯಲಿಲ್ಲ. ಇದನ್ನು ನಾವು ಪ್ರಶ್ನಿಸಲೂ ಇಲ್ಲ ಎಂದರು.

ಕನ್ನಡ ಸಾಹಿತ್ಯ ಪ್ರಶ್ನಿಸುವ ಗುಣ ಹೊಂದಿದೆ. ನಮ್ಮಲ್ಲಿ ಎರಡು ರೀತಿಯ ಲೇಖಕರಿದ್ದಾರೆ. ಒಬ್ಬರು ಉಪದ್ರವಿ ಲೇಖಕರು ಮತ್ತೊಬ್ಬರು ನಿರುಪದ್ರವಿ ಲೇಖಕರು, ಸರ್ಕಾರವನ್ನು ಟೀಕಿಸುವರು, ಸರ್ಕಾರದ ತಪ್ಪನ್ನು ಪ್ರಶ್ನೆ ಮಾಡುವವರು ಉಪದ್ರವಿ ಸಾಹಿತಿಗಳು, ನಮಗೆ ಈಗ ಉಪದ್ರವಿ ಸಾಹಿತಿಗಳ ಅಗತ್ಯವಿದೆ. ಆದರೆ ಕೆಲವರು ಇರುತ್ತಾರೆ 500 ಕೊಟ್ಟರೆ ಇತ್ತ ಕಡೆ, ಜಾಸ್ತಿ ಕೊಟ್ಟರೇ ಅತ್ತಕಡೆ ಎಂಬತವರು ಎಂದರು.

ರಾಜ್ಯದಲ್ಲಿ ಇತ್ತೀಚಿಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಯಾರನ್ನೂ ಸೋಲಿಸಬೇಕೆಂದುಕೊಂಡಿದ್ದೆವೊ ಅವರು ಸೋತಿದ್ದಾರೆ, ಯಾರು ಗೆಲ್ಲಬೇಕಿತ್ತೋ ಅವರಿಗೆ 130ಕ್ಕೂ ಅಧಿಕ ಸ್ಥಾನ ಕೊಟ್ಟು ಜನ ಗೆಲ್ಲಿಸಿದ್ದಾರೆ. ದೆಹಲಿಯಿಂದ ಬಂದರು, ನಟ-ನಟಿಯರನ್ನು ಕರೆತಂದರೂ ಜನರು ಯಾವುದೇ ಮೋಡಿಗೆ ಒಳಗಾಗಲಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT